Advertisement

ಎಲ್ಲರೂ ಒಟ್ಟಾಗಿ ಸೇರೋದೇ ದೊಡ್ಡ ಹಬ್ಬ ಎಂದ ಸ್ಟಾರ್ಸ್

01:26 PM Nov 14, 2020 | Suhan S |

ದೀಪಾವಳಿ ಅಂದ್ರೆ ಬೆಳಕಿನ ಹಬ್ಬ. ಇಂಥ ದೀಪಾವಳಿಯ ಹಬ್ಬದ ಸಂಭ್ರಮಕ್ಕೆ ಅಬ್ಬರ ತರುತ್ತಿದ್ದವು ಪಟಾಕಿಗಳು. ಆದರೆ ಇತ್ತೀಚಿನ ವರ್ಷಗಳಲ್ಲಿ ದೀಪಾವಳಿ ಹಬ್ಬದಲ್ಲಿ ಸಿಡಿಸುವ ಪಟಾಕಿಗಳು, ಅವುಗಳ ಅಡ್ಡ ಪರಿಣಾಮಗಳ ಬಗ್ಗೆ ಸರ್ಕಾರ, ಸಂಘ- ಸಂಸ್ಥೆಗಳು ಒಂದಷ್ಟು ಜಾಗೃತಿ ಮೂಡಿಸುತ್ತಿವೆ. ಜೊತೆಗೆ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಕೂಡ ಪಟಾಕಿಯನ್ನು ಬ್ಯಾನ್‌ ಮಾಡಿದೆ. ಇನ್ನು ಸಿನಿಮಾ ತಾರೆಯರುಕೂಡ ಪಟಾಕಿ ರಹಿತ ದೀಪಾವಳಿ ಆಚರಣೆಕಡೆಗೆ ಆಸಕ್ತರಾಗುತ್ತಿದ್ದಾರೆ. ಪರಿಸರ ಸ್ನೇಹಿ ದೀಪಾವಳಿ ಒಂದಷ್ಟು ತಾರೆಯರು ತಮ್ಮ ಅನಿಸಿಕೆ, ಅಭಿಪ್ರಾಯ ಹಂಚಿಕೊಂಡಿದ್ದಾರೆ.

Advertisement

ಫ್ಯಾಮಿಲಿ ಜೊತೆ ಸಂಭ್ರಮ :

ನನ್ನ ಮೊದಲ ಆದ್ಯತೆ ಪರಿಸರ ಕಾಳಜಿಯೊಂದಿಗಿನ ಆಚರಣೆಗೆ. ಕೇವಲ ಪಟಾಕಿ ಸಿಡಿಸಿದರಷ್ಟೇ ಹಬ್ಬವಲ್ಲ. ಪರಿಸರ ನಮ್ಮನ್ನು ಎಷ್ಟು ವರ್ಷ ಸಹಿಸಿಕೊಳ್ಳಬೇಕು… ನಾವು ಕೂಡಾ ಪರಿಸರವನ್ನು ಪ್ರೀತಿಸಿ,ಆದಷ್ಟುಕಾಳಜಿ ವಹಿಸಬೇಕು. ನಾವುಕುಟುಂಬದೊಂದಿಗೆ ಸರಳ ಸುಂದರವಾಗಿ ಆಚರಿಸಲು ನಿರ್ಧರಿಸಿದ್ದೇನೆ. ದೀಪಾವಳಿ ಎಂದರೆ ದೀಪಗಳ ಹಬ್ಬ. ಇಲ್ಲಿ ದೀಪವೇ ಮುಖ್ಯವಾಗಬೇಕೇ ಹೊರತು ಪಟಾಕಿ ಸದ್ದಲ್ಲ. ಆ ನಿಟ್ಟಿನಲ್ಲಿ ಎಲ್ಲರೂ ಕಾಳಜಿ ವಹಿಸಬೇಕು. ಗಣೇಶ್‌, ನಟ

ಪಟಾಕಿ ಇಲ್ಲದೆ ಹಬ್ಬ ಮಾಡೋಣ :

ಮೊದಲಿನಿಂದಲೂ ನಮ್ಮ ಮನೆಯಲ್ಲಿ ದೀಪಾವಳಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡು ಬರುತ್ತಿದ್ದೇವೆ. ಫ್ಯಾಮಿಲಿ – ಫ್ರೆಂಡ್ಸ್‌ ಎಲ್ಲರೂ ಒಟ್ಟಾಗಿಸೇರಿ ಹಬ್ಬವನ್ನು ಸೆಲೆಬ್ರೆಟ್‌ ಮಾಡ್ತೀವಿ. ಮನೆ ಮುಂದೆ ಡಿಫ‌ರೆಂಟ್‌ ಆಗಿ ಮಾಡುವ ದೀಪಾಲಂಕಾರ, ಹೊಸ ಡ್ರೆಸ್‌, ಸ್ಪೆಷಲ್‌ ಊಟ, ಹಾಡು- ಡ್ಯಾನ್ಸ್‌ಹೀಗೆ ಇಡೀ ಹಬ್ಬವನ್ನು ಮನೆಯ ವರ ಜೊತೆ ಸೇರಿಕೊಂಡು ಕಂಪ್ಲೀಟ್‌ ಎಂಜಾಯ್‌ ಮಾಡ್ತೀನಿ. ಇನ್ನು ಪಟಾಕಿ ವಿಷಯಕ್ಕೆ ಬರೋದಾದ್ರೆ, ಚಿಕ್ಕಂದಿನಿಂ ದಲೂ ನಮ್ಮ ಅಮ್ಮ ಪಟಾಕಿ ಹೊಡೆಯಲು ಬಿಡುತ್ತಿರಲಿಲ್ಲ. ಹಾಗಾಗಿ, ಪಟಾಕಿ ಬಗ್ಗೆ ಅಷ್ಟಾಗಿ ಕ್ರೇಜ್‌ ಇಲ್ಲ. ಅದರಲ್ಲೂ ಈ ಬಾರಿ ಕೋವಿಡ್‌ ಇರೋದ್ರಿಂದ ಎಲ್ಲರೂ ಸೇಫಾಗಿ ಮನೆಯಲ್ಲೇ ಇದ್ದು ಹಬ್ಬವನ್ನು ಆಚರಿಸುವುದು ಒಳ್ಳೆಯದು.ಇಂಥ ಸಂದರ್ಭದಲ್ಲಿ ಪಟಾಕಿ ಹೊಡೆಯುತ್ತ ವಾತಾವರಣ ಹಾಳು ಮಾಡುವುದು ಒಳ್ಳೆಯದಲ್ಲ  -ಶ್ರೀಲೀಲಾ, ನಟಿ

Advertisement

ಪರಿಸರ ಕಾಳಜಿ ಮುಖ್ಯ : 

ಸದ್ಯ ಫ್ಯಾಮಿಲಿ ಜೊತೆ ಸಮಯ  ಕಳೆಯುತ್ತಿದ್ದೇನೆ. ಈಗ ಹಬ್ಬ ಬೇರೆ. ಹಾಗಾಗಿ, ಸಂಭ್ರಮ ದುಪ್ಪಟ್ಟಾಗಿದೆ. ಫ್ಯಾಮಿಲಿ, ಫ್ರೆಂಡ್ಸ್‌ ಜೊತೆ ಸೇರೋದೇ ಒಂದು ಹಬ್ಬ. ಪರಿಸರಕ್ಕೆ ಹಾನಿ ಮಾಡದೇ ದೀಪಾವಳಿ ಆಚರಿಸೋದು ಮತ್ತೂಂದು ಹಬ್ಬ. ನಮ್ಮ ಪ್ಲ್ರಾನ್‌ ಆ ನಿಟ್ಟಿನಲ್ಲೇ ನಡೆಯುತ್ತಿದೆ. ಎಲ್ಲರೂ ಪರಿಸರ ಸ್ನೇಹಿ ದೀಪಾವಳಿ ಆಚರಿಸಲಿ. ಶ್ರೀಮುರಳಿ, ನಟ

ಪಟಾಕಿಯಿಂದ ಪ್ರಾಣಿ ಹಿಂಸೆ :

ನಾನು ಐದು ವರ್ಷದಿಂದ ಪಟಾಕಿ ಸಿಡಿಸಿ ದೀಪಾವಳಿ ಆಚರಿಸುವುದಿಲ್ಲ. ಅದಕ್ಕೆಕಾರಣ ನಮ್ಮ ಮನೆಯಲ್ಲಿ ಸಾಕಿರುವ ನಾಯಿ ಮರಿಗಳು. ನಮ್ಮ ಜೊತೆಗಿರುವ ಸಾಕು ಪ್ರಾಣಿಗಳೇ ನಾವು ಸಿಡಿಸುವ ಪಟಾಕಿಗೆ ಅಷ್ಟೊಂದು ಭಯಪಡು ವಾಗ, ಹೊರಗಿರುವ ಬೇರೆ ಪ್ರಾಣಿ-ಪಕ್ಷಿಗಳು ಎಷ್ಟೊಂದು ಭಯಪಡಬಹುದು? ಹಾಗಾಗಿ, ನಮ್ಮ ಮನೆಯಲ್ಲಿ ಪಟಾಕಿ ಇಲ್ಲದೆ ದೀಪಾವಳಿ ಆಚರಣೆ ಮಾಡುತ್ತಾ ಬಂದಿದ್ದೇವೆ. ಹರಿಪ್ರಿಯಾ, ನಟಿ

ಅರ್ಥಪೂರ್ಣ ಆಚರಣೆ :

ಬಹುಶಃ ಈ ವರ್ಷದ ದೀಪಾವಳಿ ತುಂಬಾ ಅರ್ಥಪೂರ್ಣವಾಗಿರುತ್ತದೆ ಅನ್ನೋದು ನನ್ನ ಅನಿಸಿಕೆ. ಇಷ್ಟು ವರ್ಷ ನಾವು ಯಾವ ತರಹದ ದೀಪಾವಳಿ ಆಚರಿಸಿದರೆ ಚೆನ್ನಾಗಿ ರುತ್ತದೆ ಎಂದು ಭಾವಿಸುತ್ತಿದ್ದೆವೋ ಅದು ಈ ವರ್ಷ ಆಗುವ ಸಾಧ್ಯತೆ ಇದೆ. ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಪರಿಸರ ಮಾಲಿನ್ಯಕಡಿಮೆಯಾಗುತ್ತದೆ.ನನ್ನ ಪ್ರಕಾರ, ಹಬ್ಬ ಎಂದರೆಕೇವಲ ಅದ್ಧೂರಿತನವಲ್ಲ. ಕುಟುಂಬವೆಲ್ಲ ಒಟ್ಟಿಗೆ ಸೇರಿ ಸಂಭ್ರಮಿಸಿದರೂ ಅದು ಹಬ್ಬವೇ. ಶರಣ್‌, ನಟ

ದೀಪಬೆಳಗಿಸಿ ಆಚರಿಸೋಣ :

ಚಿಕ್ಕವಯಸ್ಸಿನಲ್ಲಿ ದೀಪಾವಳಿ ಹಬ್ಬದಲ್ಲಿ ಪಟಾಕಿ ಹೊಡೆದು ಖುಷಿಪಡುತ್ತಿದ್ದೆವು. ಆದರೆ ಇತ್ತೀಚಿನ ವರ್ಷಗಳಲ್ಲಿ ಪಟಾಕಿ ಹೊಡೆಯುವುದು ತುಂಬ ಕಡಿಮೆ. ನಾವು ಪಟಾಕಿ ಹೊಡೆದುಖುಷಿಪಡುವುದಕ್ಕಿಂತ, ಅದರಿಂದ ಪರಿಸರ,ಬೇರೆ ಜನರ ಮೇಲೆ ಆಗುವ ದುಷ್ಪರಿಣಾಮಗಳೆ ಹೆಚ್ಚಾಗಿರುವುದರಿಂದ, ಆದಷ್ಟು ಪರಿಸರಕ್ಕೆಪೂರಕವಾದ ಹಬ್ಬ ಆಚರಿಸುವುದು ಒಳ್ಳೆಯದು. ಆದಷ್ಟು ದೀಪ ಬೆಳಗಿಸಿ ಎಲ್ಲರೂಈ ದೀಪಾವಳಿ ಆಚರಿಸೋಣ ಶ್ವೇತಾ ಶ್ರೀವಾತ್ಸವ್‌, ನಟಿ

ನಮ್ಮ ಆಚರಣೆ ಬೇರೆಯವರಿಗೆ ತೊಂದರೆ ಆಗಬಾರದು :

ದೀಪಾವಳಿ ಅಂದ್ರೇನೆ ಬೆಳಕಿನ ಹಬ್ಬ. ಪಟಾಕಿಗಳನ್ನು ಹೊಡೆದು ಸುಮ್ಮನೆ ಗದ್ದಲ ಎಬ್ಬಿಸುವ ಬದಲು ದೀಪ ಬೆಳಗಿನ ಹೆಸರಿಗೆ ತಕ್ಕಂತೆ ಅರ್ಥಪೂರ್ಣ ದೀಪಾವಳಿ ಆಚರಿಸುವುದು ಒಳ್ಳೆಯದು. ಇದರಿಂದ ನಮ್ಮ ಅಕ್ಕಪಕ್ಕದವರಿಗೂ ತೊಂದರೆಯಾಗುವುದಿಲ್ಲ. ಅಲ್ಲದೆ ನಾವೂ ಹಬ್ಬ ಆಚರಿಸಿದಂತೆ ಆಗುತ್ತದೆ.ನಾನು ಮತ್ತು ನಮ್ಮ ಮನೆಯವರು ತುಂಬ ವರ್ಷಗಳಿಂದ, ಇದೇ ರೀತಿಯಲ್ಲಿ ಹಬ್ಬವನ್ನು ಆಚರಣೆ ಮಾಡುತ್ತ ಬಂದಿದ್ದೇವೆ. ನಾವು ಏನೇ ಮಾಡಿದರೂ, ಅದರಿಂದ ಬೇರೆಯವರಿಗೆ ತೊಂದರೆಯಾಗಬಾರದು. ಹಾಗಾದಾಗ ಮಾತ್ರ ಹಬ್ಬ, ಆಚರಣೆಗಳಿಗೆ ನಿಜವಾದ ಮಹತ್ವ ಬರುತ್ತದೆ. ಪಟಾಕಿ ಬಿಟ್ಟು ದೀಪ ಹಚ್ಚಿ ದೀಪಾವಳಿಯನ್ನು ಇನ್ನಷ್ಟು ಅರ್ಥಪೂರ್ಣವಾಗಿಸೋಣ ಪಾರುಲ್‌ ಯಾದವ್‌, ನಟಿ

Advertisement

Udayavani is now on Telegram. Click here to join our channel and stay updated with the latest news.

Next