Advertisement
ಫ್ರೆಂಡ್ಸ್ ಫಾರಂಹೌಸ್‌ನಲ್ಲಿ …
Related Articles
Advertisement
ನಮ್ದು ಸಿಂಪಲ್ ಮಾರ್ರೆ…
ವರ್ಷಪೂರ್ತಿ ಕೆಲಸ ಮಾಡಬೇಕೆಂಬುದಷ್ಟೇ ನನ್ನ ಉದ್ದೇಶ. ಯಾವ ವರ್ಷನೂ ನಾನು ಸೆಲೆಬ್ರೆಶನ್ ಅಂತ ಮಾಡಿಕೊಂಡು ಬಂದಿಲ್ಲ. ಸದ್ಯ “ಕಾಂತಾರ-1′ ಚಿತ್ರದ ಪ್ರಿ-ಪ್ರೊಡಕ್ಷನ್, ಅದರ ಓಡಾಟದಲ್ಲಿ ಇದ್ದೇನೆ. ಜನವರಿ ಕೊನೆಯ ವಾರದಿಂದ ಚಿತ್ರೀಕರಣಕ್ಕೆ ಹೊರಡುತ್ತಿದ್ದೇವೆ. ಹಾಗಾಗಿ, ವಿಶೇಷವಾಗಿ ಯಾವ ಆಚರಣೆಯನ್ನು ಮಾಡುವುದಿಲ್ಲ. ಫ್ಯಾಮಿಲಿ, ಫ್ರೆಂಡ್ಸ್ ಎಲ್ಲಾ ಸೇರಬಹುದೇನೋ..:- ರಿಷಭ್ ಶೆಟ್ಟಿ
ಪ್ರಕೃತಿ ಜತೆಯಲ್ಲಿ…
ಇಷ್ಟು ವರ್ಷಗಳ ಕಾಲ ಇಡೀ ಫ್ಯಾಮಿಯಲ್ಲಿ ಕನಿಷ್ಟ 50-60 ಜನ ಒಟ್ಟಾಗಿ ಸೇರಿ ನ್ಯೂ ಇಯರ್ ಸೆಲೆಬ್ರೆಷನ್ ಮಾಡುತ್ತಿದ್ದೆವು. ನ್ಯೂ ಇಯರ್ ಅಂದ್ರೆ ಒಂದಷ್ಟು ಗದ್ದಲ, ಪಾರ್ಟಿ ಮೂಡ್ ಇರೋದು ಮಾಮೂಲಿ ಎಂಬಂತಾಗಿಬಿಟ್ಟಿದೆ. ಆದರೆ ಈ ಬಾರಿ ಇವೆಲ್ಲದರಿಂದ ಸ್ವಲ್ಪ ಬದಲಾವಣೆ ಇರಲಿ ಎಂಬ ಕಾರಣಕ್ಕೆ ನಾನು, ನಮ್ಮ ಅಪ್ಪ-ಅಮ್ಮ ಮೂವರೇ ಒಟ್ಟಾಗಿ ನಾಗರಹೊಳೆಗೆ ಹೋಗುತ್ತಿದ್ದೇವೆ. ನಾಗರಹೊಳೆ ಮತ್ತು ಕಬಿನಿ ಸುತ್ತಮುತ್ತ ಅಲ್ಲಿಯೇ ಪ್ರಕೃತಿಯ ನಡುವೆ ಹೊಸವರ್ಷ ಆಚರಣೆ ಮಾಡಬೇಕು ಎಂದುಕೊಂಡಿದ್ದೇನೆ. ಹೊಸ ವರ್ಷದ ಮೊದಲ ದಿನ ಅವಿಸ್ಮರಣಿಯವಾಗಿರಬೇಕು. ಪ್ರಕೃತಿಯಿಂದ ನೋಡಿ ನಾವು ಕಲಿಯುವುದು ತುಂಬ ಇರುತ್ತದೆ. ಹಾಗಾಗಿ ಪ್ರಕೃತಿಯ ನಡುವೆ ನನ್ನ ಹೊಸವರ್ಷ ಶುರುವಾಗಬೇಕು ಎಂಬ ಕಾರಣಕ್ಕೆ ಈ ರೀತಿಯಲ್ಲಿ ನ್ಯೂ ಇಯರ್ ಸೆಲೆಬ್ರೆಷನ್ ಪ್ಲಾನ್ ಮಾಡಿಕೊಂಡಿದ್ದೇನೆ.:- ಸೋನು ಗೌಡ,
ಭೀಮನ ಜತೆ ಸೆಲೆಬ್ರೆಶನ್
ಸಾಮಾನ್ಯವಾಗಿ ನಾನು ಎಲ್ಲೂ ಆಚೆ ಹೋಗಿ ವರ್ಷಾಚರಣೆ ಮಾಡುವುದಿಲ್ಲ. ಆತ್ಮೀಯ ಬಳಗ ಜೊತೆಗಿರುತ್ತದೆ. ಆದರೆ, ಈ ವರ್ಷ “ಭೀಮ’ನ ಕೆಲಸವೇ ನಮಗೆ ದೊಡ್ಡ ಸಂಭ್ರಮ. ಹೊಸ ವರ್ಷಕ್ಕೆ ಭೀಮನನ್ನು ಅದ್ಧೂರಿಯಾಗಿ ತೆರೆಗೆ ತರುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ ರಾತ್ರಿ-ಹಗಲು “ಭೀಮ’ನ ಪೋಸ್ಟ್ ಪ್ರೊಡಕ್ಷನ್‌ನಲ್ಲಿ ಬಿಝಿಯಾಗಿ ದ್ದೇನೆ. ಅದೇ ನನಗೆ ದೊಡ್ಡ ಸಂಭ್ರಮ.: – ದುನಿಯಾ ವಿಜಯ್, ನಟ
ಲಾಂಗ್‌ಡ್ರೈವ್ ಪ್ಲಾನ್…
ಕೆಲ ವರ್ಷಗಳಿಂದ ನ್ಯೂ ಇಯರ್ ಸೆಲೆಬ್ರೆಷನ್ ಅನ್ನು ನನ್ನ ಮತ್ತು ವಸಿಷ್ಠ ಸಿಂಹ ಇಬ್ಬರ ಫ್ಯಾಮಿಲಿಯವರೂ ಕೂಡ ಒಟ್ಟಿಗೇ ಹೊರಗೆ ಹೋಗಿ ಸೆಲೆಬ್ರೆಷನ್ ಮಾಡುತ್ತಿದ್ದೆವು. ಆದರೆ ಕಳೆದ ವರ್ಷಂತ್ಯದಲ್ಲಿ ನಮ್ಮ ಮದುವೆ ಫಿಕ್ಸ್ ಆಗಿತ್ತು. ಒಂದು ಕಡೆ ಶೂಟಿಂಗ್ ಮತ್ತೂಂದು ಕಡೆ ಮದುವೆಗೆ ತಯಾರಿ ಎರಡನ್ನೂ ಒಟ್ಟಿಗೇ ಮಾಡಿಕೊಳ್ಳಬೇಕಿತ್ತು. ಇವೆಲ್ಲದರ ಓಡಾಟದಿಂದಾಗಿ ನ್ಯೂ ಇಯರ್ ಸೆಲೆಬ್ರೆಷನ್ ಅಷ್ಟೊಂದು ಗ್ರ್ಯಾಂಡ್ ಆಗಿ ಮಾಡಲು ಸಾಧ್ಯವಾಗಿರಲಿಲ್ಲ. ಈ ವರ್ಷ ನಾವಿಬ್ಬರೂ ಒಂದೇ ಮನೆಯಲ್ಲಿರುವುದರಿಂದ ಎರಡೂ ಫ್ಯಾಮಿಲಿಯವರೂ ಒಂದೇ ಮನೆಯಲ್ಲಿ ಸೇರಿ ಸೆಲೆಬ್ರೆಷನ್ ಮಾಡುವ ಯೋಚನೆ ಮಾಡಿದ್ದೇವೆ. ಸಾಧ್ಯವಾದರೆ ನ್ಯೂ ಇಯರ್ ಸಮಯದಲ್ಲೂ ಇಬ್ಬರೂ ಕೂಡ ಫ್ಯಾಮಿಲಿ ಜೊತೆ ಒಟ್ಟಾಗಿ ಹೊರಗೆ ಹೋಗೋಣ ಅಂದುಕೊಳ್ಳುತ್ತಿದ್ದೇವೆ: – ಹರಿಪ್ರಿಯಾ, ನಟಿ
ಬೆಂಗ್ಳೂರಲ್ಲಿ ಇರ್ತೀನಿ…
ಯಾವ ವರ್ಷ ಕೂಡಾ ನಾವು ನ್ಯೂ ಇಯರ್ ಸೆಲೆಬ್ರೆಶನ್ ಬಗ್ಗೆ ಪ್ಲ್ರಾನ್ ಮಾಡಿಯೇ ಇಲ್ಲ. ಅಂತಿಮವಾಗಿ ಫ್ರೆಂಡ್ ಎಲ್ಲಾ ಸೇರಿಕೊಳ್ಳುತ್ತಿದ್ದೆವು. ಈ ಬಾರಿಯೂ ಬಹುಶಃ ಅದೇ ತರಹ ಆಗಬಹುದು. ಹಾಗಂತ ಬೆಂಗಳೂರು ಬಿಟ್ಟು ಎಲ್ಲೂ ಹೊರಗೆ ಹೋಗುವುದಿಲ್ಲ. ಸಂಭ್ರಮ ಏನಿದ್ದರೂ ಬೆಂಗಳೂರಿನಲ್ಲೇ. :- ಡಾರ್ಲಿಂಗ್ ಕೃಷ್ಣ, ನಟ
ಎಲ್ಲೂ ಹೊರಗಡೆ ಹೋಗಲ್ಲ…
ನಾನು ಮೊದಲಿನಿಂದಲೂ ಅದ್ಧೂರಿ ಸೆಲೆಬ್ರೆಷನ್‌ಗಳಿಂದ ತುಂಬ ದೂರ. ಹಾಗಾಗಿ ಹೊಸ ವರ್ಷದ ಸೆಲೆಬ್ರೆಷನ್ ವಿಷಯದಲ್ಲೂ ಅಷ್ಟೇ. ಸಿನಿಮಾದ ಶೂಟಿಂಗ್, ಮತ್ತಿತರ ಕೆಲಸಗಳು ಇಲ್ಲದಿರುವಾಗ ಆದಷ್ಟು ಮನೆಯಲ್ಲೇ ಇರಲು ಇಷ್ಟಪಡುತ್ತೇನೆ. ಈ ವರ್ಷದ ಕೊನೆಯ ದಿನದವರೆಗೂ ನಾನು ಮಾಡುತ್ತಿರುವ ಸಿನಿಮಾಗಳ ಶೂಟಿಂಗ್ ಇದೆ. ಹೊಸ ವರ್ಷದ ಮೊದಲ ದಿನದಿಂದಲೇ ಮತ್ತೆ ಸಿನಿಮಾದ ಕೆಲಸಗಳು ಶುರುವಾಗಲಿದೆ. ಹೀಗಾಗಿ ಇಯರ್ ಎಂಡ್ ಮತ್ತು ನ್ಯೂ ಇಯರ್ ಫಸ್ಟ್ ಎರಡೂ ದಿನಗಳಲ್ಲೂ ನನ್ನ ಕೆಲಸದಲ್ಲೇ ಬಿಝಿಯಾಗಿರುತ್ತೇನೆ. ಮನೆಯಲ್ಲೇ ಫ್ರೆಂಡ್ಸ್ ಮತ್ತು ಫ್ಯಾಮಿಲಿ ಜೊತೆಗೆ ಇದ್ದು ಸೆಲೆಬ್ರೆಷನ್ ಮಾಡುತ್ತೇನೆ. ಅದನ್ನು ಬಿಟ್ಟು ಹೊರಗೆ ಹೋಗಿ ಸೆಲೆಬ್ರೆಷನ್ ಮಾಡುವ ಯಾವ ಪ್ಲಾನ್ ಕೂಡ ಇಲ್ಲ.: ಬೃಂದಾ ಆಚಾರ್ಯ, ನಟಿ
ಅರ್ಥಪೂರ್ಣ ಆಚರಣೆ
ಚಿಕ್ಕ ವಯಸ್ಸಿನಲ್ಲಿ ನನಗೆ ನ್ಯೂ ಇಯರ್ ಅಂದ್ರೆ ಅದೊಂದು ದೊಡ್ಡದಾಗಿ ಮಾಡುವ ಅದ್ಧೂರಿ ಸೆಲೆಬ್ರೆಷನ್ ಥರ ಇರುತ್ತಿತ್ತು. ಆದರೆ ನಿಧಾನವಾಗಿ ಅದರ ಅರ್ಥ, ಮಹತ್ವ ಮತ್ತು ನ್ಯೂ ಇಯರ್ ಅನ್ನು ಹೇಗೆ ಆಚರಿಸಬೇಕು ಎಂಬುದು ಗೊತ್ತಾಯಿತು. ಹಾಗಾಗಿ ಇತ್ತೀಚಿನ ವರ್ಷಗಳಲ್ಲಿ ನ್ಯೂ ಇಯರ್ ಅನ್ನು ಏನಾದರೂ ಹೊಸ ಕೆಲಸ ಮಾಡಿ ಆದಷ್ಟು ಅರ್ಥಪೂರ್ಣವಾಗಿ ಆಚರಿಸುತ್ತಿದ್ದೇನೆ. ಈ ಬಾರಿ ನ್ಯೂ ಇಯರ್ ಅನ್ನು ನಮ್ಮದೇ ಚಾರಿಟೆಬಲ್ ಟ್ರಸ್ಟ್ ಮೂಲಕ ಸುಮಾರು 200ಕ್ಕೂ ಹೆಚ್ಚು ಮಕ್ಕಳಿಗೆ ಶಿಕ್ಷಣ ಸಾಮಗ್ರಿಗಳನ್ನು ಕೊಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಬೇಕು ಎಂದುಕೊಂಡಿದ್ದೇನೆ.:- ಶ್ವೇತಾ ಶ್ರೀವಾತ್ಸವ್