Advertisement

Sandalwood: ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

12:21 PM Mar 29, 2024 | Team Udayavani |

2024ರ ಮೂರು ತಿಂಗಳು ಕಳೆದು ಹೋಗಿದೆ. ಸಿನಿಮಾಗಳ ಬಿಡುಗಡೆಯ ಭರಾಟೆ ಕೂಡಾ ಜೋರಾಗಿಯೇ ಇದೆ. ಆದರೆ, ಸ್ಟಾರ್‌ಗಳು ಮಾತ್ರ ಯಾಕೋ ಚಿತ್ರಮಂದಿರಕ್ಕೆ ಬರುವ ಆಸಕ್ತಿ ತೋರಿಸುತ್ತಿಲ್ಲ. ನೀವೇ ಸೂಕ್ಷ್ಮವಾಗಿ ಗಮನಿಸಿ ಈ ಮೂರು ತಿಂಗಳಲ್ಲಿ ಚಿತ್ರಮಂದಿರದಲ್ಲಿ ಸ್ಟಾರ್‌ ಸಿನಿಮಾಗಳನ್ನು ನೋಡಿದ್ದು ಕೇವಲ ಒಂದೇ ಒಂದು. ಅದು ಶಿವರಾಜ್‌ಕುಮಾರ್‌ ನಟನೆಯ “ಕರಟಕ ದಮನಕ’. ಮಿಕ್ಕಂತೆ ಯಾವ ಸ್ಟಾರ್‌ಗಳ ಚಿತ್ರಗಳು ಬಿಡುಗಡೆಯಾಗಿಲ್ಲ.

Advertisement

ಸಿನಿಮಾದ ರಿಲೀಸ್‌ ಡೇಟ್‌ನ್ನಾದರೂ ಅನೌನ್ಸ್‌ ಮಾಡಿದರೆ ಚಿತ್ರರಂಗ, ಅಭಿಮಾನಿಗಳಿಗೆ ಒಂದು ಕ್ಲ್ಯಾರಿಟಿ ಸಿಗುತ್ತಿತ್ತು. ದರ್ಶನ್‌, ಸುದೀಪ್‌, ಶಿವರಾಜ್‌ಕುಮಾರ್‌, ಧ್ರುವ ಸರ್ಜಾ, ದುನಿಯಾ ವಿಜಯ್‌, ಉಪೇಂದ್ರ… ಹೀಗೆ ಲೆಕ್ಕ ಹಾಕುತ್ತಾ ಹೋದರೆ ನಮ್ಮಲ್ಲಿರುವ ಸ್ಟಾರ್‌ಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಆದರೆ, ಇವರೆಲ್ಲರ ಸಿನಿಮಾಗಳು ಸಿದ್ಧವಿದ್ದರೂ ಬಿಡುಗಡೆಯ ಕ್ಲಾರಿಟಿ ಮಾತ್ರ ಸಿಗುತ್ತಿಲ್ಲ. ಕೊನೆಯ ಪಕ್ಷ ಸಿನಿಮಾದ ರಿಲೀಸ್‌ ಡೇಟ್‌ ಆದರೂ ಅನೌನ್ಸ್‌ ಮಾಡಿದರೆ, ಅದನ್ನು ನೋಡಿಕೊಂಡು ಹೊಸಬರ ಹಾಗೂ ಇತರ ಹೀರೋಗಳು ತಮ್ಮ ಸಿನಿಮಾ ರಿಲೀಸ್‌ ಪ್ಲ್ರಾನ್‌ ಮಾಡಿಕೊಳ್ಳಬಹುದು. ಸದ್ಯ ಶಿವರಾಜ್‌ಕುಮಾರ್‌ ಅವರ “ಭೈರತಿ ರಣಗಲ್‌’ ಬಿಟ್ಟರೆ ಬೇರೆ ಯಾವ ಚಿತ್ರಗಳು ತಮ್ಮ ರಿಲೀಸ್‌ ಡೇಟ್‌ ಘೋಷಣೆ ಮಾಡಿಲ್ಲ. ಕೊನೆಗೆ ಎಲ್ಲರೂ ನಾ ಮುಂದು ತಾ ಮುಂದು ರಿಲೀಸ್‌ ಡೇಟ್‌ ಘೋಷಣೆ ಮಾಡಿ, ತಮ್ಮ ತಮ್ಮ ಮಧ್ಯೆಯೇ ತಿಕ್ಕಾಟಕ್ಕೆ ಕಾರಣವಾಗುತ್ತಾರೆ. ಜೊತೆಗೆ ಚಿತ್ರಮಂದಿರ ಸಮಸ್ಯೆ, ಪರಭಾಷಾ ರಿಲೀಸ್‌ ಕ್ಲಾಶ್‌, ಹೊಸಬರಿಗೆ ತೊಂದರೆ… ಹೀಗೆ ಹಲವು ಸಮಸ್ಯೆಗಳು ಎದುರಾಗುತ್ತವೆ.

ಸರತಿಯಲ್ಲಿವೆ ಸ್ಟಾರ್‌ ಸಿನಿಮಾಗಳು

ಈ ವರ್ಷ ಬಹುತೇಕ ಎಲ್ಲಾ ಸ್ಟಾರ್‌ಗಳ ಚಿತ್ರಗಳು ತೆರೆಗೆ ಬರಲಿವೆ. ಈ ಮೂಲಕ 2024ರ ಸೆಕೆಂಡ್‌ ಹಾಫ್ ಸಿನಿಧಮಾಕಾವಾಗಲಿದೆ. ಧ್ರುವ ಸರ್ಜಾ “ಮಾರ್ಟಿನ್‌’, “ಕೆಡಿ’, ಉಪೇಂದ್ರ “ಯು-ಐ’, “ಬುದ್ಧಿವಂತ-2′, ಶಿವರಾಜ್‌ ಕುಮಾರ್‌ “ಭೈರತಿ ರಣಗಲ್‌’, ದರ್ಶನ್‌ “ಡೆವಿಲ್‌’, ಸುದೀಪ್‌ “ಮ್ಯಾಕ್ಸ್‌’, ವಿಜಯ್‌ “ಭೀಮ’, ರಿಷಭ್‌ “ಕಾಂತಾರ-1’… ಹೀಗೆ ಅನೇಕ ನಟರ ಚಿತ್ರಗಳು ಈ ವರ್ಷವೇ ತೆರೆಗೆ ಬರಲಿವೆ.

ಇದರಲ್ಲಿ “ಮಾರ್ಟಿನ್‌’, “ಯು-ಐ’, “ಭೀಮ’, “ಮ್ಯಾಕ್ಸ್‌’, “ಕೆಡಿ’ ಚಿತ್ರಗಳ ಬಹುತೇಕ ಚಿತ್ರೀಕರಣ ಕೂಡಾ ಮುಗಿದಿದೆ. ಆದರೆ, ಈ ಚಿತ್ರತಂಡಗಳು ಮಾತ್ರ ರಿಲೀಸ್‌ ಡೇಟ್‌ ಅನೌನ್ಸ್‌ ಮಾಡಲು ಹಿಂದೇಟು ಹಾಕುತ್ತಿವೆ. ಶಿವರಾಜ್‌ ಕುಮಾರ್‌ ಅವರ “ಭೈರತಿ ರಣಗಲ್‌’ ಸಿನಿಮಾ ಆಗಸ್ಟ್‌ 15ಕ್ಕೆ ಬರುವುದಾಗಿ ಘೋಷಿಸಿಕೊಂಡಿದೆ. ಇದೇ ರೀತಿ ಒಂದಷ್ಟು ತಿಂಗಳ ಮುಂಚೆಯೇ ಡೇಟ್‌ ಕ್ಲಾರಿಟಿ ಕೊಟ್ಟರೆ ಇತರ ಚಿತ್ರತಂಡಗಳಿಗೆ ಸಹಾಯವಾಗುತ್ತದೆ.

Advertisement

ಚುನಾವಣೆ ಬಳಿಕ ಸಿನಿಟ್ರಾಫಿಕ್‌

ಚುನಾವಣೆ ಘೋಷಣೆಯಾಗಿರುವುದರಿಂದ ಸಹಜವಾಗಿಯೇ ಸಿನಿಮಾ ರಂಗದ ಚಟುವಟಿಕೆಗಳಿಗೆ ಕೊಂಚ ಬ್ರೇಕ್‌ ಬಿದ್ದಿದೆ. ಆದರೆ, ಎರಡನೇ ಹಂತದ ಮತದಾನವಾದ ಬಳಿಕ ಅಂದರೆ ಎರಡನೇ ವಾರದಿಂದ ಸಿನಿಮಾದ ಚಟುವಟಕೆಗಳು ಭರ್ಜರಿಯಾಗಿ ಗರಿಗೆದರಲಿವೆ. ಅದರಲ್ಲೂ ಸಾಲು ಸಾಲು ಸಿನಿಮಾಗಳು ಮೇನಲ್ಲಿ ರಿಲೀಸ್‌ ಆಗಲಿವೆ. ಈ ಹೊತ್ತಿಗೆ ಮತ್ತೆ ಸ್ಟಾರ್‌ ಸಿನಿಮಾಗಳ ಜಾತ್ರೆಯೂ ಆರಂಭವಾಗಿ, ಸಿನಿರಶ್‌ ಜೋರಾಗುವುದರಲ್ಲಿ ಎರಡು ಮಾತಿಲ್ಲ. ಇಂತಹ ಸಂದರ್ಭದಲ್ಲಿ ತೊಂದರೆ ಗೊಂದಲ ಹಾಗೂ ತೊಂದರೆಗೆ ಸಿಲುಕುವುದು ಹೊಸಬರು.

ಸ್ಟಾರ್‌ ಸಿನಿಮಾ ಎಂಬ ಜೋಶ್‌

ಚಿತ್ರರಂಗಕ್ಕೆ ಹೊಸಬರ, ಕಂಟೆಂಟ್‌ ಸಿನಿಮಾಗಳು ಹೇಗೆ ಮುಖ್ಯವೋ, ಅದರಂತೆ ಸ್ಟಾರ್‌ ಸಿನಿಮಾಗಳ ಅಗತ್ಯ ಕೂಡಾ ಇದೆ. ದೊಡ್ಡ ಮಟ್ಟದ ಬಿಝಿನೆಸ್‌ ಮಾಡುವಲ್ಲಿ, ಚಿತ್ರಮಂದಿರಕ್ಕೆ ಪ್ರೇಕ್ಷಕರನ್ನು ಕರೆತರುವಲ್ಲಿ ಸ್ಟಾರ್‌ ಸಿನಿಮಾಗಳ ಪಾತ್ರ ದೊಡ್ಡದು. ಒಬ್ಬ ಸ್ಟಾರ್‌ ಒಂದು ಸಿನಿಮಾ ಗೆದ್ದರೆ ಅದು ಚಿತ್ರರಂಗಕ್ಕೆ ಬೂಸ್ಟರ್‌ ಡೋಸ್‌ನಂತೆ ಕೆಲಸ ಮಾಡುತ್ತದೆ. ಇಡೀ ಚಿತ್ರರಂಗದಲ್ಲಿ ಹೊಸ ಚೈತನ್ಯ ಕಾಣುತ್ತದೆ. ಕನ್ನಡ ಚಿತ್ರರಂಗದ ಸ್ಟಾರ್‌ ನಟರು ವರ್ಷಕ್ಕೆರಡು ಸಿನಿಮಾ ಮಾಡಿದರೆ ಅಥವಾ ಕನಿಷ್ಠ ವರ್ಷಕ್ಕೊಂದು ಸಿನಿ ಮಾವಾದರೂ ಬಿಡುಗಡೆಯಾಗುವಂತೆ ನೋಡಿಕೊಂಡರೆ ಚಿತ್ರರಂಗದ ಹಾದಿ ಮತ್ತಷ್ಟು ಸುಗಮವಾಗಬಹುದು.

ಬಿಝಿನೆಸ್‌ ಲೆಕ್ಕಾಚಾರ…

ಸಾಮಾನ್ಯವಾಗಿ ಯಾವುದೇ ಸ್ಟಾರ್‌ ಸಿನಿಮಾ ಆದರೂ ಸಿನಿಮಾ ಬಿಡುಗಡೆಗೆ ಪೂರ್ವದಲ್ಲೇ ಬಿಝಿ ನೆಸ್‌ ಮಾತುಕತೆ ಮುಗಿಸಿ, ಥಿಯೇಟರ್‌ ಬಿಝಿನೆಸ್‌ನತ್ತ ಗಮನಹರಿಸುತ್ತವೆ. ಅದು ಓಟಿಟಿ, ಸ್ಯಾಟ್‌ಲೆçಟ್‌, ಹಿಂದಿ ಸೇರಿ ಇತರ ಭಾಷೆಯ ಡಬ್ಬಿಂಗ್‌ ರೈಟ್ಸ್‌ ಅನ್ನು ಮಾರಾಟ ಮಾಡಿ ಒಂದು ಹಂತಕ್ಕೆ ಸೇಫ್ ಆಗಿರುತ್ತವೆ. ಒಂದು ವೇಳೆ ತಾವು ಅಂದುಕೊಂಡ ಮಟ್ಟಕ್ಕೆ ಬಿಝಿನೆಸ್‌ ಮಾತುಕತೆ ಆಗದೇ ಹೋದಾಗ ಆ ಸಿನಿಮಾಗಳ ಬಿಡು ಗಡೆ ಕೂಡಾ ತಡವಾಗುತ್ತಾ ಹೋಗು ತ್ತದೆ. ಸದ್ಯ ಕೆಲವು ಸ್ಟಾರ್‌ ಸಿನಿಮಾಗಳು ಇಂತಹ “ಬಿಝಿನೆಸ್‌’ ಲೆಕ್ಕಾಚಾರದಲ್ಲಿ ತೊಡಗಿವೆ. ಆ ಕಾರಣದಿಂದಲೇ ರಿಲೀಸ್‌ ಡೇಟ್‌ಗೆ ಒಂದು ಕ್ಲಾéರಿಟಿ ಕೊಡಲಾ ಗುತ್ತಿಲ್ಲ ಎಂಬುದು ಸಿನಿಪಂಡಿತರ ಮಾತು.

 ರವಿಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next