ಬೆಂಗಳೂರು: ರಕ್ಷಿತ್ ಶೆಟ್ಟಿ ವೃತ್ತಿ ಜೀವನದಲ್ಲಿ ‘777 ಚಾರ್ಲಿ’ ಸಿನಿಮಾ ವಿಶೇಷ. ಈ ಸಿನಿಮಾ ದೊಡ್ಡ ಹಿಟ್ ತಂದುಕೊಟ್ಟದ್ದು ಮಾತ್ರವಲ್ಲದೆ. ಹಲವರ ಮೆಚ್ಚುಗೆ ಪೆಡದು ರಾಷ್ಟ್ರ ಪ್ರಶಸ್ತಿ, ಪುರಸ್ಕಾರವನ್ನು ಪಡೆದಿದೆ.
ಚಾರ್ಲಿ ಸಿನಿಮಾದ ಎರಡನೇ ಭಾಗ ಬರಬೇಕೆಂದು ಅನೇಕರು ಬಯಸಿದ್ದರು. ಯಾಕೆ ಸಿನಿಮಾದ ಸೀಕ್ವೆಲ್ ಮಾಡಿಲ್ಲ ಎನ್ನುವುದನ್ನು ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿಯವರೇ ಬಹಿರಂಗಪಡಿಸಿದ್ದಾರೆ.
6ನೇ ಇನ್ನೋವೇಟೀವ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, “777 ಚಾರ್ಲಿ ನನ್ನ ವೃತ್ತಿ ಜೀವನದಲ್ಲಿ ಸ್ಪೆಷೆಲ್ ಸಿನಿಮಾ. ಪರಂವಃ ಸ್ಟುಡಿಯೋದಲ್ಲಿ ನಿರ್ಮಿಸಿದ ಸಿನಿಮಾವೊಂದು ಪ್ಯಾನ್ ಇಂಡಿಯಾದಲ್ಲಿ ಮಿಂಚಿತು. ನಮ್ಮ ನಿರ್ಮಾಣ ಸಂಸ್ಥೆ ಆರಂಭವಾದಾಗ ಬಜೆಟ್ ಕಮ್ಮಿಯಿದ್ದ ಕಾರಣದಿಂದ ನಾವು ಶಾರ್ಟ್ ಫಿಲ್ಮ್ಸ್ ನ್ನು ಮಾತ್ರ ಮಾಡುತ್ತಿದ್ದಿವಿ. ಮೊದಲ ಶಾರ್ಟ್ ಮೂವಿ 20 ಸಾವಿರದಲ್ಲಿ ಮಾಡಿದ್ದೆವು. ಮೂರನೇ ಶಾರ್ಟ್ ಫಿಲ್ಮ್ ಸಿನಿಮಾಕ್ಕೆ ಒಂದೂವರೆ ಲಕ್ಷ ಬಂಡವಾಳ ಹಾಕಿದ್ದೆವು. ಶಾರ್ಟ್ ಮೂವಿಗಳಿಂದ ಶುರುವಾದ ನಮ್ಮ ಪಯಣಕ್ಕೆ ರಾಷ್ಟ್ರಪ್ರಶಸ್ತಿ ತಂದುಕೊಟ್ಟಂತಹ ಸಿನಿಮಾ ಮಾಡಿದ್ದು ಖುಷಿಯ ವಿಚಾರ” ಎಂದರು.
ನನಗೆ ರಾಷ್ಟ್ರ ಪ್ರಶಸ್ತಿ ಕೊಟ್ಟದ್ದಕ್ಕೆ ಧನ್ಯವಾದ ಹೇಳುತ್ತೇನೆ. ಯಾಕೆಂದರೆ ಮನುಷ್ಯ ಜೊತೆ ನಟಿಸಬಹುದು. ನಿಜ ಜೀವನದಲ್ಲಿ ನಾವು ಹಾಗೆ ಇರುತ್ತೇವೆ. ಆದರೆ ಚಾರ್ಲಿ ಜೊತೆ ನಟಿಸೋದು ಅಷ್ಟು ಸುಲಭದ ಕೆಲಸ ಆಗಿರಲಿಲ್ಲ. 120 ದಿನ ಚಿತ್ರೀಕರಣ, ಪ್ರತಿಬಾರಿಯೂ 40 ಟೀಕ್ ಮಾಡಬೇಕಿತ್ತು. ಯಾಕೆಂದರೆ ಚಾರ್ಲಿ ಯಾವಾಗ ಚೆನ್ನಾಗಿ ಆ್ಯಕ್ಟ್ ಮಾಡುತ್ತಾಳೆ ಅಂಥ ಹೇಳೋಕೆ ಆಗುತ್ತಿರಲಿಲ್ಲ. ಹಾಗಾಗಿ ಈ ಕೆಲಸ ತುಂಬಾ ಸವಾಲಿನಿಂದ ಕೂಡಿತ್ತು” ಎಂದರು.
“ಚಿತ್ರೀಕರಣದ ಕೊನೆಯಲ್ಲಿ ನಿರ್ದೇಶಕ ಕಿರಣ್ ರಾಜ್ ಚಾರ್ಲಿ-2 ಸಿನಿಮಾ ಮಾಡೋಣ ಒಂದೊಳ್ಳೆ ಐಡಿಯಾ ಇದೆ ಎಂದರು. ಆದರೆ ನಾನು ನೀವು ಪಾರ್ಟ್ 2 ಮಾಡಿ ನಾನು ಬರಲ್ಲ ಎಂದೆ. ನಮ್ಮ ಕೆಲಸ ಅದು. ಹಿಂಸೆಯಂಥ ಹೇಳಬಾರದು. ಒಬ್ಬ ನಟನ ಜೊತೆ ನಟಿಸುವಾಗ ನೀವು ಎಷ್ಟು ಎಂಜಾಯ್ ಮಾಡಿತ್ತೀರೋ ಅಷ್ಟೇ ಕಷ್ಟ ಚಾರ್ಲಿ ಜೊತೆ ಆ್ಯಕ್ಟ್ ಮಾಡುವಾಗ ಆಗ್ತಾ ಇತ್ತು. ಅದರೆ ಆ ಕಷ್ಟ ಮೆಚ್ಚುಗೆ ಪಡೆಯುವಾಗ ಮರೆತು ಹೋಗುತ್ತದೆ” ಎಂದರು ಸಿಂಪಲ್ ಸ್ಟಾರ್.
ಸದ್ಯ ರಕ್ಷಿತ್ ಶೆಟ್ಟಿ ‘ಸಪ್ತ ಸಾಗರಾದಾಚೆ ಎಲ್ಲೋ” ಸಿನಿಮಾದ ಯಶಸ್ಸಿನ ಖುಷಿಯಲ್ಲಿದ್ದು, ಈ ಸಿನಿಮಾದ ಸೀಕ್ವೆಲ್ ಅಕ್ಟೋಬರ್ 27 ರಂದು ರಿಲೀಸ್ ಆಗಲಿದೆ. ಇದರ ರಿಲೀಸ್ ಡೇಟ್ ಮುಂದೂಡಿಕೆ ಆಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಆದರೆ ಅದು ಅಧಿಕೃತವಾಗಿಲ್ಲ.
ಇದನ್ನೂ ಓದಿ: Tragedy: ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ, ಇಬ್ಬರು ಸ್ಥಳದಲ್ಲೇ ಮೃತ್ಯು