“ಕೆಮಿಸ್ಟ್ರಿ ಆಫ್ ಕರಿಯಪ್ಪ’ ಸಿನಿಮಾದ ಮೂಲಕ ಸ್ಯಾಂಡಲ್ ವುಡ್‌ಗೆ ಪರಿಚಯವಾದ ಹುಡುಗಿ ಸಂಜನಾ ಆನಂದ್. ಮೊದಲ ಸಿನಿಮಾದಲ್ಲೇ ಸಿನಿಮಂದಿಯ ಗಮನ ಸೆಳೆದ ಸಂಜನಾ ಆನಂದ್, ಬಳಿಕ ನಿಧಾನವಾಗಿ ಒಂದರ ಹಿಂದೊಂದು ಸಿನಿಮಾಗಳಲ್ಲಿ ಅವಕಾಶಗಳನ್ನು ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾದ ನಟಿ. ಕಳೆದ ಎರಡು – ಮೂರು ವರ್ಷಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಒಂದಷ್ಟು ಭರವಸೆ ಮೂಡಿಸಿರುವ ನವ ನಾಯಕಿಯರ ಸಾಲಿನಲ್ಲಿ ಸಂಜನಾ ಕೂಡ ಒಬ್ಬರು.
ಸದ್ಯ ದುನಿಯಾ ವಿಜಯ್ ನಾಯಕನಾಗಿ ಅಭಿನಯಿಸಿರುವ, ಚೊಚ್ಚಲ ನಿರ್ದೇಶನದ “ಸಲಗ’ ಚಿತ್ರದಲ್ಲಿ ಸಂಜನಾ ಆನಂದ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ “ಸಲಗ’ದ ಬಹುತೇಕ ಕೆಲಸಗಳು ಪೂರ್ಣಗೊಂಡಿದ್ದು, ಇದೇ ಮೇ ತಿಂಗಳಿನಲ್ಲಿ ಚಿತ್ರ ತೆರೆಗೆ ಬರುವ ಯೋಚನೆಯಲ್ಲಿದೆ.
ಇದನ್ನೂ ಓದಿ:ಕಲರ್ ಫುಲ್ ಲುಕ್ ನಲ್ಲಿ ‘ಓಲ್ಡ್ ಮಾಂಕ್’: ರೊಮ್ಯಾಂಟಿಕ್ ಕಾಮಿಡಿ ಸಿನಿಮಾ
ಇದರ ಬೆನ್ನಲ್ಲೆ ನಿರೂಪ್ ಭಂಡಾರಿ ನಾಯಕನಾಗಿರುವ “ವಿಂಡೋ ಸೀಟ್’ ಚಿತ್ರದಲ್ಲೂ ಸಂಜನಾ ಆನಂದ್ ನಾಯಕಿಯಾಗಿ ಅಭಿನಯಿಸಿದ್ದಾರೆ. “ವಿಂಡೋ ಸೀಟ್’ ಕೂಡ ಬಿಡುಗಡೆಗೆ ಸಿದ್ಧವಾಗಿದ್ದು, ಇದೇ ಮೇ – ಜೂನ್ ತಿಂಗಳಿನಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ.
ಇದಲ್ಲದೆ ಅಜೇಯ್ ರಾವ್ ಅಭಿನಯದ “ಶೋಕಿವಾಲಾ’ ಚಿತ್ರದಲ್ಲೂ ಸಂಜನಾ ನಾಯಕಿಯಾಗಿ ಅಭಿನಯಿಸುತ್ತಿದ್ದು, ಈ ಚಿತ್ರ ಚಿತ್ರೀಕರಣದ ಹಂತದಲ್ಲಿದೆ. “ಕಿಸ್’ ಚಿತ್ರದ ಖ್ಯಾತಿಯ ವಿರಾಟ್ ನಾಯಕನಾಗಿರುವ ಎರಡನೇ ಚಿತ್ರ “ಅದ್ಧೂರಿ ಲವರ್’ ಚಿತ್ರ ಕೂಡ ಇತ್ತೀಚೆಗೆ ಸೆಟ್ಟೇರಿದ್ದು, ಈ ಚಿತ್ರದಲ್ಲೂ ವಿರಾಟ್‌ಗೆ ನಾಯಕಿಯಾಗಿ ಸಂಜನಾ ಆನಂದ್ ಜೋಡಿಯಾಗಿ ಅಭಿನಯಿಸುತ್ತಿದ್ದಾರೆ.
ಇದನ್ನೂ ಓದಿ: ‘ಕಸ್ತೂರ್ ಬಾ’ ಪಾತ್ರದಲ್ಲಿ ಹರಿಪ್ರಿಯಾ: ಬಿಝಿ ನಟಿಯ ಅಕೌಂಟ್‌ಗೆ ಮತ್ತೂಂದು ಸಿನಿಮಾ
ಒಟ್ಟಾರೆ ಸಂಜನಾ ನಾಯಕಿಯಾಗಿ ಅಭಿನಯಿಸಿರುವ ಮೂರು ಚಿತ್ರಗಳು ಬಿಡುಗಡೆಗೆ ಸಿದ್ಧವಿದ್ದರೆ, ಇನ್ನು ಎರಡು ಚಿತ್ರಗಳು ಚಿತ್ರೀಕರಣದ ಹಂತದಲ್ಲಿವೆ. ತೆರೆಗೆ ಬರಲಿರುವ ಈ ನಾಲ್ಕೂ ಸಿನಿಮಾಗಳಲ್ಲೂ ಸಂಜನಾಗೆ ನಾಲ್ಕು ಥರದ ವಿಭಿನ್ನ ಪಾತ್ರಗಳಿದ್ದು, ಪ್ರತಿ ಪಾತ್ರಗಳೂ ಪ್ರೇಕ್ಷಕರಿಗೆ ಇಷ್ಟವಾಗಲಿದೆ ಅನ್ನೋದು ಸಂಜನಾ ನಂಬಿಕೆ.