Advertisement

ಸ್ಯಾಂಡಲ್ ವುಡ್; ಕಳೆದ 2 ತಿಂಗಳಲ್ಲಿ 50 ಕೋಟಿ ನಷ್ಟ!

01:00 PM Nov 27, 2017 | Sharanya Alva |

ಕನ್ನಡ ಚಿತ್ರರಂಗದ ಪಾಲಿಗೆ ಅಕ್ಟೋಬರ್‌ ಮತ್ತು ನವೆಂಬರ್‌ ತಿಂಗಳು ಅತ್ಯಂತ ದುರದೃಷ್ಟಕರ ತಿಂಗಳಾಗಿ ಪರಿಣಮಿಸಿವೆ. ಅಕ್ಟೋಬರ್‌ ತಿಂಗಳಲ್ಲಿ 18 ಮತ್ತು ನವೆಂಬರ್‌ ತಿಂಗಳಲ್ಲಿ 23 ಚಿತ್ರಗಳು ಬಿಡುಗಡೆಯಾಗಿವೆ. ಈ 41 ಚಿತ್ರಗಳಲ್ಲಿ ಯಾವೊಂದು ಚಿತ್ರ ಸಹ ಗೆದ್ದಿಲ್ಲ ಎನ್ನುವುದು ಒಂದು ಕಡೆಯಾದರೆ, ಇಷ್ಟು ಚಿತ್ರಗಳಿಂದಾಗಿ ಏನಿಲ್ಲವೆಂದರೂ 50ರಿಂದ 70 ಕೋಟಿಯವರೆಗೂ ಲಾಸ್‌ ಆಗಿದೆ.

Advertisement

ಹೌದು, ಕಳೆದ ಎರಡು ತಿಂಗಳಲ್ಲಿ ಒಟ್ಟು 41 ಚಿತ್ರಗಳು ಬಿಡುಗಡೆಯಾಗಿವೆ. ಈ ಪೈಕಿ ಮೊನ್ನೆ ಶುಕ್ರವಾರ ಬಿಡುಗಡೆಯಾದ “ಉಪ್ಪು ಹುಳಿ ಖಾರ’, “ಅತಿರಥ’, “ಮೋಂಬತ್ತಿ’ ಮತ್ತು “ಹನಿಹನಿ ಇಬ್ಬನಿ’ ಚಿತ್ರಗಳ ಕುರಿತಾಗಿ ಈಗಲೇ ತೀರ್ಪು ನೀಡುವುದು ಕಷ್ಟ. ಏಕೆಂದರೆ, ಚಿತ್ರ ಬಿಡುಗಡೆಯಾಗಿ ಕೇವಲ ಮೂರು ದಿನಗಳಾಗಿದ್ದು, ಅದರ ಗೆಲುವು-ಸೋಲು, ಲಾ¸‌-ನಷ್ಟದ ಕುರಿತು ಈಗಲೇ ಹೇಳುವುದು ಕಷ್ಟ. ಅದಕ್ಕೆ ಇನ್ನೊಂದಿಷ್ಟು ಸಮಯ ಬೇಕು. ಅದನ್ನು ಹೊರತುಪಡಿಸಿದರೂ, 39 ಚಿತ್ರಗಳು ಸಿಗುತ್ತವೆ.

ಈ ಪೈಕಿ ಎಲ್ಲವೂ ಲೋ ಬಜೆಟ್‌ ಚಿತ್ರಗಳಷ್ಟೇ ದೊಡ್ಡ ಬಜೆಟ್‌ನ ಚಿತ್ರಗಳೂ ಇವೆ. ಉಪೇಂದ್ರ ಅಭಿನಯದ “ಉಪೇಂದ್ರ ಮತ್ತೆ ಬಾ’, ಸತೀಶ್‌ ನೀನಾಸಂ ಅಭಿನಯದ “ಟೈಗರ್‌ ಗಲ್ಲಿ’, ಶರಣ್‌ ಅಭಿನಯದ “ಸತ್ಯ ಹರಿಶ್ಚಂದ್ರ’ ಚಿತ್ರಗಳನ್ನು ಹೆಸರಿಸಬಹುದು. ಇವೆಲ್ಲಾ ಕೆಲವು ಕೋಟಿ ಬಜೆಟ್‌ನ ಚಿತ್ರಗಳು. ಆದರೆ, ಬಿಡುಗಡೆಯಾದ ನಂತರ ನಿರ್ಮಾಪಕರಿಗೆ ಎಷ್ಟು ಹಣ ವಾಪಸ್ಸಾಯಿತು ಎಂದರೆ, ಉತ್ತರಿಸುವುದು ಕಷ್ಟ. ಈ ಪೈಕಿ “ಸತ್ಯ ಹರಿಶ್ಚಂದ್ರ’ ಮತ್ತು “ಟೈಗರ್‌ ಗಲ್ಲಿ’ ಚಿತ್ರಗಳು ಎರಡೇ ವಾರಕ್ಕೆ ಮುಖ್ಯ ಚಿತ್ರಮಂದಿರಗಳೂ ಸೇರಿದಂತೆ ಬಹುತೇಕ ಚಿತ್ರಮಂದಿರಗಳಿಂದ ನಾಪತ್ತೆಯಾಗಿದ್ದವು.

ಈಗ “ಉಪೇಂದ್ರ ಮತ್ತೆ ಬಾ’ ಸಹ ಅದೇ ಸುಳಿವು ನೀಡುತ್ತಿದೆ. ನವೆಂಬರ್‌ 17ರಂದಷ್ಟೇ ಬಿಡುಗಡೆಯಾದ ಚಿತ್ರವು ಈಗ ಎರಡನೆಯ ವಾರಕ್ಕೆ ಕಾಲಿಟ್ಟಿದೆ. ಈಗ ಎರಡನೆಯ ವಾರ ಮುಗಿಸಿ, ಮೂರನೆಯ ವಾರಕ್ಕೆ ಕಾಲಿಡುವ ಹೊತ್ತಿಗೆ ಮುಖ್ಯ ಚಿತ್ರಮಂದಿರವೇ ಮಿಸ್‌ ಆಗುವ ಸಾಧ್ಯತೆ ಇದೆ. ಏಕೆಂದರೆ, “ಉಪೇಂದ್ರ ಮತ್ತೆ ಬಾ’ ಪ್ರದರ್ಶನವಾಗುತ್ತಿರುವ ತ್ರಿವೇಣಿ ಚಿತ್ರಮಂದಿರದಲ್ಲಿ ಈ ವಾರ “ಗೌಡ್ರು ಹೋಟೆಲ್‌’ ಬಿಡುಗಡೆಯಾಗುತ್ತದೆ ಎಂದು ಹೇಳಲಾಗುತ್ತಿದೆ. ಮಿಕ್ಕಂತೆ ಇನ್ನೆಲ್ಲಾ ಹೊಸಬರ ಅಥವಾ ಕಡಿಮೆ ಬಜೆಟ್‌ನ ಚಿತ್ರಗಳೇ. ಈ ಚಿತ್ರಗಳನ್ನು ಅತ್ತ ಜನರೂ ನೋಡಲಿಲ್ಲ, ಇತ್ತ ಚಾನಲ್‌ ಅಥವಾ ಇನ್ನಾವುದೋ ಮೂಲದಿಂದ ವ್ಯಾಪಾರವೂ ಆಗಿಲ್ಲ. 

ಹಾಗಾಗಿ ನಿರ್ಮಾಪಕರಿಗೆ ದುಡ್ಡು ಹಾಕಿದ್ದಷ್ಟೇ ಬಂತು. ಲಾಭ ಬಿಡಿ, ಹಾಕಿದ ದುಡ್ಡು ಸಹ ಸರಿಯಾಗಿ ವಾಪಸ್ಸಾಗಲಿಲ್ಲ.
ಅಲ್ಲಿಗೆ ಈ ಎರಡೇ ತಿಂಗಳುಗಳಲ್ಲಿ ಏನಿಲ್ಲವೆಂದರೂ 50ರಿಂದ 70 ಕೋಟಿಯವರೆಗೂ ನಷ್ಟವಾಗಿದೆ. ಹೀಗಿರುವಾಗಲೇ ಈ ವಾರ ಮತ್ತೆ ಆರು ಚಿತ್ರಗಳು ಬಿಡುಗಡೆಯಾಗುತ್ತಿದೆ. ಶಿವರಾಜಕುಮಾರ್‌-ಮುರಳಿ ಅಭಿನಯದ “ಮಫ್ತಿ’, “ಗೌಡ್ರು ಹೋಟೆಲ್‌’, “ನಮ್ಮೂರಲಿ’, “ಮಂತ್ರಂ’, “ಡ್ರೀಮ್‌ ಗರ್ಲ್’ ಮತ್ತು “ಅರ್ಧ ತಿಕ್ಲು ಪುಕ್ಲು’ ಚಿತ್ರಗಳು ಬಿಡುಗಡೆಯಾಗುತ್ತಿವೆ ಎಂದು ಹೇಳಲಾಗುತ್ತಿದೆ. ಈ ಚಿತ್ರಗಳ ಪೈಕಿ ಎಷ್ಟು ಕೋಟಿ ಗಳಿಸುತ್ತವೋ, ಎಷ್ಟು ಕಳೆದುಕೊಳ್ಳುತ್ತವೋ ನೋಡಬೇಕು.

Advertisement

 ಅಕ್ಟೋಬರ್‌ ತಿಂಗಳಲ್ಲಿ ಬಿಡುಗಡೆಯಾದ ಚಿತ್ರಗಳು: ಹುಲಿರಾಯ, ಕಿಡಿ, ವೈರ, ಲಕ್ಷಿ ನಾರಾಯಣರ ಪ್ರಪಂಚವೇ ಬೇರೆ, ಏಪ್ರಿಲ್‌ನ ಹಿಮಬಿಂದು, ಗಾಯತ್ರಿ, ಕರಿಯ 2, ಕಟಕ, ಸಿತಾರ, ಆಡೂ ಆಟ ಆಡೂ, ತಿಕ್ಲ, ದಯವಿಟ್ಟು ಗಮನಿಸಿ, ಸತ್ಯ ಹರಿಶ್ಚಂದ್ರ, ಢಮ್ಕಿ ಢಮಾರ್‌, ಟೈಗರ್‌ ಗಲ್ಲಿ, ಸರ್ವಸ್ವ, ಮೋಜೋ ಮತ್ತು ಬ್ರಾಂಡ್‌.
 
ನವೆಂಬರ್‌ ತಿಂಗಳಲ್ಲಿ ಬಿಡುಗಡೆಯಾದ ಚಿತ್ರಗಳು: ಹಾಲು ತುಪ್ಪ, ಜಾಲಿ ಬಾರು ಮತ್ತು ಪೋಲಿ ಗೆಳೆಯರು, ಮತ್ತೆ ಬಂದ ಕೌರವ, ಜಯಸೂರ್ಯ, ಬಿಕೋ, ಕಾಲೇಜ್‌ ಕುಮಾರ್‌, ನುಗ್ಗೇಕಾಯಿ, ಸೈಕೋ ಶಂಕ್ರ, ರಾಜರು, ಸಂಯುಕ್ತ 2, ಅಸೂಚ¸, ನಂ. 9 ಹಿಲ್ಟನ್‌ ಹೌಸ್‌, ಕಾವೇರಿ ತೀರದ ಚರಿತ್ರೆ, ಕೆಂಪಿರ್ವೆ, ಮಹಾನುಬಾವರು, ನನ್‌ ಮಗಳೇ ಹೀರೋಯಿನ್‌, ಪಾನಿಪುರಿ, ಉಪೇಂದ್ರ ಮತ್ತೆ ಬಾ.

Advertisement

Udayavani is now on Telegram. Click here to join our channel and stay updated with the latest news.

Next