Advertisement

ಶ್ರೀಗಂಧ ಅಕ್ರಮ ಸಾಗಾಟ: ಮೂವರ ಬಂಧನ

11:12 AM Mar 17, 2017 | Team Udayavani |

ಮಂಗಳೂರು: ಅಕ್ರಮ ಶ್ರೀಗಂಧ ಸಾಗಾಟ ಪ್ರಕರಣವನ್ನು ಮಂಗಳೂರು ಗ್ರಾಮಾಂತರ ಪೊಲೀಸರು ಪತ್ತೆ ಹಚ್ಚಿ ಮೂವರನ್ನು ಬಂಧಿಸಿ 45.1 ಕಿ.ಗ್ರಾಂ ತೂಕದ ಶ್ರೀಗಂಧ ಮತ್ತು  ಕೃತ್ಯಕ್ಕೆ ಬಳಸಿದ ಟಾಟಾ ಏಸ್‌ ವಾಹನವನ್ನು  ವಶ ಪಡಿಸಿಕೊಂಡಿದ್ದಾರೆ. ಶ್ರೀಗಂಧ ಮತ್ತು ವಾಹನದ ಒಟ್ಟು ಮೌಲ್ಯ 2,25,000 ಲಕ್ಷ ರೂ. ಗಳಾಗಿವೆ.  

Advertisement

ಕೊಪ್ಪಳದ ಜಂಬಯ್ಯ ಮಠಪತಿ (20)ಮತ್ತು ಅಮರಯ್ಯ (19) ಹಾಗೂ ಚಾಲಕ ಹಾಸನದ ದೀಪು (27) ಬಂಧಿತರು. 

ಪೊಲೀಸರು ಖಚಿತ ಮಾಹಿತಿಯಂತೆ ಗುರುವಾರ ಮಂಗಳೂರು ತಾಲೂಕು ಅರ್ಕುಳ ಗ್ರಾಮದ ವಳಚ್ಚಿಲ್‌ ಜಂಕ್ಷನ್‌ ಬಳಿ ಶ್ರೀಗಂಧ ಸಾಗಿಸುತ್ತಿದ್ದ  ಟಾಟಾ ಏಸ್‌ ವಾಹನವನ್ನು ತಡೆದು ನಿಲ್ಲಿಸಿ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡರು. ಅವರನ್ನು ಬಂಧಿಸಿದ ಬಳಿಕ ನ್ಯಾಯಾಲಯಕ್ಕೆ ಹಾಜರು ಪಡಿಸಿದರು. 
ಗ್ರಾಮಾಂತರ ಪೊಲೀಸ್‌ ಠಾಣೆಯ ಇನ್ಸ್‌ಪೆಕ್ಟರ್‌ ಮಹಮ್ಮದ್‌ ಶರೀಫ್‌ ರಾವುತರ್‌, ಅಪರಾಧ ವಿಭಾಗದ ಪಿ.ಎಸ್‌.ಐ  ವೆಂಕಟೇಶ್‌ ಐ. ಮತ್ತು  ಹೆಡ್‌ಕಾನ್‌ ಸ್ಟೆಬಲ್‌ಗ‌ಳಾದ ಸುಭಾಶ್ಚಂದ್ರ, ದಾಮೋದರ, ರವಿ ಕುಮಾರ್‌, ಕಾನ್‌ಸ್ಟೆಬಲ್‌ಗ‌ಳಾದ  ಕುಶಲ್‌ ಹೆಗ್ಡೆ,  ಸದಾಶಿವ, ಮತ್ತು  ರಫೀಕ್‌ ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
 

Advertisement

Udayavani is now on Telegram. Click here to join our channel and stay updated with the latest news.

Next