Advertisement

Sandalwood ನಲ್ಲಿ ಮತ್ತೊಂದು ಡಿವೋರ್ಸ್ ಕೇಸ್… ದುನಿಯಾ ವಿಜಯ್- ನಾಗರತ್ನ ತೀರ್ಪು ಇಂದು

03:11 PM Jun 13, 2024 | Team Udayavani |

ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ದಿನಕ್ಕೊಂದು ಶಾಕಿಂಗ್ ವರದಿಗಳು ಬಿತ್ತರಗೊಳ್ಳುತ್ತಿದ್ದು ಇದೀಗ ಮತ್ತೊಂದು ಪ್ರಕರಣ ಮುನ್ನೆಲೆಗೆ ಬಂದಿದೆ ಸ್ಯಾಂಡಲ್ ವುಡ್ ನಟ ದುನಿಯಾ ವಿಜಯ್ ಪತ್ನಿ ನಾಗರತ್ನ ಅವರ ವಿಚ್ಛೇದನ ತೀರ್ಪು ಇಂದು ಹೊರ ಬರಲಿದೆ.

Advertisement

6 ವರ್ಷಗಳ ಹಿಂದೆ ಅಂದರೆ 2018ರಲ್ಲಿ ವಿಚ್ಛೇದನ ಕೋರಿ ನಟ ದುನಿಯಾ ವಿಜಯ್ ಅರ್ಜಿ ಸಲ್ಲಿಸಿದ್ದರು ಅಂದಿನಿಂದ ಅರ್ಜಿಯ ವಿಚಾರಣೆ ನಡೆಯುತ್ತಿದ್ದು ಇಂದು ಅಂತಿಮ ತೀರ್ಪು ಹೊರ ಬರಲಿದೆ ಎಂದು ಹೇಳಲಾಗಿದೆ.

2018 ರಲ್ಲಿ ದುನಿಯಾ ವಿಜಯ್ ಪತ್ನಿ ನಾಗರತ್ನಾರಿಂದ ವಿಚ್ಛೇದನ ಬೇಕು ಎಂದು ಕೋರ್ಟ್ ಮೊರೆ ಹೋಗಿದ್ದರು. ಈ ನಡುವೆ ಪತ್ನಿ ನಾಗರತ್ನ ತನಗೆ ಗಂಡ ಬೇಕು ಎಂದು ಹಠ ಹಿಡಿದಿದ್ದರು ಆದರೆ ದುನಿಯಾ ವಿಜಯ್ ತನಗೆ ನಾಗರತ್ನ ಜೊತೆ ಜೀವನ ನಡೆಸಲು ಸಾಧ್ಯವಿಲ್ಲ ಎಂದು ಹೇಳಿಕೊಂಡಿದ್ದರು ಇದರ ನಡುವೆ ರಾಜಿ ಸಂಧಾನದ ಮೂಲಕ ದುನಿಯಾ ವಿಜಯ್ ಕೀರ್ತಿ ಗೌಡರನ್ನು ವಿಚ್ಛೇದನ ಪಡೆಯದೇ ಮದುವೆ ಆಗಿದ್ದರು.

ನಾಗರತ್ನಗೆ ಜೀವನಾಂಶ ನೀಡಿದ್ದೇನೆ ಎಂದ ವಿಜಯ್
ದುನಿಯಾ ವಿಜಯ್ ಪತ್ನಿ ನಾಗರತ್ನ ಜೊತೆ ಬಾಳಲು ಸಾಧ್ಯವಿಲ್ಲ ತನಗೆ ವಿಚ್ಛೇದನ ಬೇಕು, ಮಕ್ಕಳನ್ನು ನಾನು ನೋಡಿಕೊಳ್ಳುತ್ತೇನೆ ಅಲ್ಲದೆ ಆಕೆಗೆ ನಾನು ಜೀವನಾಂಶವನ್ನು ನೀಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ ಆದರೆ ಇದಕ್ಕೆ ಪ್ರತಿಕ್ರಿಯಿಸಿದ ನಾಗರತ್ನ ಜೀವನಾಂಶ ನೀಡಿದ ಕುರಿತು ದಾಖಲೆಗಳನ್ನು ನೀಡಿ ಎಂದು ಕೇಳಿದ್ದರು. ಇದಾದ ಬಳಿಕ ಇಬ್ಬರು ಕೆಲವು ವರ್ಷಗಳಿಂದ ಬೇರೆ ಬೇರೆಯಾಗಿಯೇ ಜೀವನ ನಡೆಸುತ್ತಿದ್ದಾರೆ.

ಅದರಂತೆ ಇಂದು ದುನಿಯಾ ವಿಜಯ್ ಹಾಗೂ ಅವರ ಮೊದಲನೇ ಪತ್ನಿ ನಾಗರತ್ನ ಅವರ ವಿಚ್ಛೇದನ ಅರ್ಜಿಯಾ ತೀರ್ಪು ಬೆಂಗಳೂರಿನ ಶಾಂತಿನಗರ ಕೌಟುಂಬಿಕ ನ್ಯಾಯಾಲಯದಲ್ಲಿ ಇಂದು ಮಧ್ಯಾಹ್ನ 3 ಗಂಟೆಗೆ ಹೊರಬೀಳಲಿದೆ.

Advertisement

ಇದನ್ನೂ ಓದಿ: Harshika and Bhuvanಗೆ ಹಲ್ಲೆ: ಆರೋಪಿಗಳ ಜಾಮೀನು ಅರ್ಜಿ ವಜಾ

Advertisement

Udayavani is now on Telegram. Click here to join our channel and stay updated with the latest news.

Next