Advertisement

ಸ್ಯಾಂಡಲ್‌ವುಡ್‌ ಡ್ರಗ್ಸ್‌ ಪ್ರಕರಣ: ಇಬ್ಬರು ನೈಜೀರಿಯಾ ಪ್ರಜೆಗಳ ಬಂಧನ

10:15 PM Oct 27, 2020 | mahesh |

ಬೆಂಗಳೂರು: ಸ್ಯಾಂಡಲ್‌ವುಡ್‌ ಡ್ರಗ್ಸ್‌ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಸೆನಗಲ್‌ ಮೂಲದ ಲೂಮ್‌ ಪೆಪ್ಪರ್‌ ಸಾಂಬಾ ಜತೆ ಸಂಪರ್ಕ ಹೊಂದಿದ್ದ ಇಬ್ಬರು ನೈಜೀರಿಯಾ ಪ್ರಜೆಗಳನ್ನು ಕಾಡುಗೋಡಿ ಪೊಲೀಸರು ಬಂಧಿಸಿದ್ದಾರೆ.

Advertisement

ನೈಜೀರಿಯಾ ಮೂಲದ ಚಿಕ್‌ ವಾಡ್‌ ವಿನ್ಸೆಂಟ್‌ (30) ಮತ್ತು ಏಮೆಕ್‌ ಚಿನಿಡು ಮಿಚೆಲ್‌ (45) ಬಂಧಿತರು. ನಾಲ್ಕು ಮೊಬೈಲ್‌ಗ‌ಳು, ತೂಕದ ಯಂತ್ರ, ಒಂದು ಬೈಕ್‌, ಒಂದು ಸಾವಿರ ರೂ.ನಗದು, 300 ಗ್ರಾಂ. ಗಾಂಜಾ, ಎಂಡಿಎಂ, ಹರಳಿನ ರೂಪದ ಮಾದಕ ವಸ್ತುಗಳು ಮತ್ತು ವಿಡ್‌ ಆಯಿಲ್‌ ಹಾಗೂ ಇತರೆ ವಿವಿಧ ಬಣ್ಣ ಮಾದಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಮಾದಕ ವಸ್ತು ಖರೀದಿಸಿ ಸೇವಿಸುತ್ತಿದ್ದ ಆರೋಪದಡಿ ಯಶವಂತ್‌, ಗೌತಮ್‌, ಫ‌ಕ್ರುದ್ದೀನ್‌, ವಿನಯ್‌, ರಘು ಎಂಬವರನ್ನು ಬಂಧಿಸಲಾಗಿದೆ ಎಂದು ವೈಟ್‌ಫೀಲ್ಡ್‌ ಡಿಸಿಪಿ ಡಿ.ದೇವರಾಜ್‌ ತಿಳಿಸಿದ್ದಾರೆ.

ಸ್ಯಾಂಡಲ್‌ವುಡ್‌ ಡ್ರಗ್ಸ್‌ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಲೂಮ್‌ ಪೆಪ್ಪರ್‌ ಸಾಂಬಾ ಜತೆ ಆರೋಪಿ ವಿನ್ಸೆಂಟ್‌ ಸಂಪರ್ಕದಲ್ಲಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಈತನ ಜತೆ ಹೆಣ್ಣೂರು-ಬಾಣಸವಾಡಿಯಲ್ಲಿ ವಾಸವಾಗಿರುವ ನೈಜೀರಿಯಾ ಹಾಗೂ ಇತರೆ ವಿದೇಶಿ ಪ್ರಜೆಗಳ ಪೈಕಿ ಕೆಲವರು ಪರಸ್ಪರ ಸಂಪರ್ಕದಲ್ಲಿದ್ದಾರೆ. ಈತನ ಮುಂದಿನ ವಿಚಾರಣೆಯಲ್ಲಿ ಇನ್ನಷ್ಟು ಮಾಹಿತಿ ಬಹಿರಂಗವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next