Advertisement

ಸ್ಯಾಂಡಲ್‌ವುಡ್‌ ಡ್ರಗ್ಸ್‌ ಪ್ರಕರಣದ 12ನೇ ಆರೋಪಿ ಬಂಧನ

12:16 PM Dec 22, 2020 | Suhan S |

ಬೆಂಗಳೂರು: ಸ್ಯಾಂಡಲ್‌ವುಡ್‌ ಡ್ರಗ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ 12ನೇ ಆರೋಪಿ ವಿನಯ್‌ಕುಮಾರ್‌ನನ್ನು ಬೆಂಗಳೂರುಕೇಂದ್ರ ಅಪರಾಧ ವಿಭಾಗ(ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ.

Advertisement

ರಾಜಾಜಿ ನಗರದ ಡಾ.ರಾಜ್‌ಕುಮಾರ್‌ ರಸ್ತೆಯಲ್ಲಿರುವ ಅಪಾರ್ಟ್‌ಮೆಂಟ್‌ ನಿವಾಸಿ ವಿನಯ್‌ ಕುಮಾರ್‌,ಪ್ರಕರಣದಲ್ಲಿ ಈಗಾಗಲೇ ಬಂಧನಕ್ಕೊಳಗಾಗಿದ್ದ ಸಂಜನಾ ಗಲ್ರಾನಿ ಹಾಗೂ ನಟಿ ರಾಗಿಣಿ, ದೆಹಲಿಯ ವಿರೇನ್ ‌ಖನ್ನಾ ಸೇರಿ ಎಲ್ಲ ಆರೋಪಿಗಳ ಜತೆ ನಿಕಟ ಸಂಪರ್ಕ ಹೊಂದಿದ್ದ. ಸಿಸಿಬಿ ಪೊಲೀ ಸರು ಕಾರ್ಯಾಚರಣೆ ನಡೆಸುತ್ತಿದ್ದಂತೆ ನೆರೆ ರಾಜ್ಯಗಳಾದ ಗೋವಾ, ಕೇರಳಕ್ಕೆ ಹೋಗಿ ತಲೆಮರೆಸಿಕೊಂಡಿದ್ದ.ಈ ಮಧ್ಯೆಆರೋಪಿನಿರೀ ಕ್ಷಣಾ ಜಾಮೀನು ಕೋರಿ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ. ಆದರೆ, ಕೋರ್ಟ್‌ ಅರ್ಜಿ ತಿರಸ್ಕರಿಸಿತ್ತು. ಈ ಸಂಬಂಧ ಆರೋಪಿ ವಿರುದ್ಧ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದ್ದು, ಆರೋಪಿ ಯನ್ನು ಕೋರ್ಟ್‌ಗೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ಡಿ.28ರವರೆಗೆ ವಶಕ್ಕೆ ಪಡೆಯಲಾಗಿದೆ ಎಂದು ಸಿಸಿಬಿ ಜಂಟಿ ಪೊಲೀಸ್‌ ಆಯುಕ್ತ ಸಂದೀಪ್‌ ಪಾಟೀಲ್‌ ಮಾಹಿತಿ ನೀಡಿದರು.

ಇದುವರೆಗೂ ಡ್ರಗ್ಸ್‌ ಪ್ರಕರಣದಲ್ಲಿ ನಟಿಯರಾದ ಸಂಜನಾ ಗಲ್ರಾನಿ, ರಾಗಿಣಿ ದ್ವಿವೇದಿ, ರವಿಶಂಕರ್‌, ರಾಹುಲ್‌ ಟೋನ್ಸೆ, ವಿರೇನ್‌ ಖನ್ನಾ, ಮೂವರು ನೈಜೀರಿಯಾ ಪ್ರಜೆಗಳು ಸೇರಿ 15 ಮಂದಿಯನ್ನು ಬಂಧಿಸಲಾಗಿದೆ.

ತಲೆಮರೆಸಿಕೊಂಡವರಿಗಾಗಿ ತೀವ್ರ ಹುಡುಕಾಟ :

ಬಳ್ಳಾರಿ ಜಿಲ್ಲೆಯ ವಿನಯ್‌ಕುಮಾರ್‌ ಕೆಲ ವರ್ಷಗಳಿಂದ ನಗರದಲ್ಲಿ ವಾಸವಾಗಿದ್ದಾನೆ. ಕುಣಿಗಲ್‌ ಬಳಿ ಸ್ವಂತ ಕಲ್ಲಿನ ಕ್ವಾರಿ ನಡೆಸುತ್ತಿದ್ದ. ಸ್ಯಾಂಡಲ್‌ವುಡ್‌ ಡ್ರಗ್ಸ್‌ ಪ್ರಕರಣದ ಆರೋಪಿಗಳಿಗೆ ಪಾರ್ಟಿ ಮಾಡಲು ಈತ ಸ್ಥಳ ಒದಗಿಸಿಕೊಡುತ್ತಿದ್ದ. ಫೇಜ್‌-3 ಪಾರ್ಟಿಗಳ ಆಯೋಜಕ ದೆಹಲಿ ಮೂಲದ ಆರೋಪಿ ವಿರೇನ್‌ ಖನ್ನಾ, ವೈಭವ್‌ ಜೈನ್‌ ಆಪ್ತನಾಗಿದ್ದ. ರೆಸಾರ್ಟ್‌, ಪಂಚತಾರಾ ಹೋಟೆಲ್‌, ತೋಟದ ಮನೆಗಳಲ್ಲಿ ವೈಭವ್‌ ಜೈನ್‌ ಆಯೋಜನೆ ಮಾಡುತ್ತಿದ್ದ ಪಾರ್ಟಿಗಳಿಗೆ ವಿನಯ್‌ ಕುಮಾರ್‌ ವಿದೇಶಿ ಮಾದಕ ವಸ್ತು ಪೂರೈಕೆ ಮಾಡುತ್ತಿದ್ದ ಎಂದು ಸಿಸಿಬಿ ಪೊಲೀಸರು ಹೇಳಿದರು.

Advertisement

ಇದೇ ಪ್ರಕರಣದಲ್ಲಿ ಮಾಜಿ ಸಚಿವ ದಿ.ಜೀವರಾಜ್‌ ಆಳ್ವಾ ಅವರ ಪುತ್ರ ಆದಿತ್ಯ, ಕಿಂಗ್‌ಪಿನ್‌ ಭಟ್ಕಳದ ಮೊಹಮ್ಮದ್‌ ಮೆಸ್ಸಿ, ರಾಗಿಣಿ ಗೆಳೆಯ ಶಿವ ಪ್ರಕಾಶ್‌, ಪ್ರಶಾಂತ್‌ ರಾಜ್‌, ಅಭಿಸ್ವಾಮಿ ಎಂಬವರು ತಲೆಮರೆಸಿಕೊಂ ಡಿದ್ದಾರೆ. ಅವರ ಬಂಧನಕ್ಕೆ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next