Advertisement

ಹಲೋ ಯಮ ಖ್ಯಾತಿಯ ನಿರ್ದೇಶಕ, ನಟ ಟಿ.ಆರ್‌.ಬಾಬು ಇನ್ನಿಲ್ಲ 

12:26 PM Dec 04, 2018 | |

ಬೆಂಗಳೂರು: ಕಳೆದ ಕೆಲ ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಸ್ಯಾಂಡಲ್‌ವುಡ್‌ ನಿರ್ದೇಶಕ, ನಟ ಟಿ.ಆರ್‌.ಬಾಬು ಅವರು ಮಂಗಳವಾರ ಅಪೋಲೋ ಆಸ್ಪತ್ರೆಯಲ್ಲಿ  ನಿಧನ ಹೊಂದಿದ್ದಾರೆ.ಅವರಿಗೆ 56 ವರ್ಷ ವಯಸ್ಸಾಗಿತ್ತು.

Advertisement

ಕಿಡ್ನಿ ವೈಫ‌ಲ್ಯದಿಂದ ಬಳಲುತ್ತಿದ್ದ ಬಾಬು ಅವರಿಗೆ ಡಯಾಲಿಸಿಸ್‌ ಮಾಡಲಾಗುತ್ತಿತ್ತು. 

ಹಲೋ ಯಮ ಚಿತ್ರದ ಮೂಲಕ ಬಾಬು ಅವರು ಗಮನ ಸೆಳೆದಿದ್ದರು. ಜಗ್ಗೇಶ್‌ ಅವರೊಂದಿಗೆ ಯಾರಧ್ದೋ ದುಡ್ಡು ಯಲ್ಲಮನ ಜಾತ್ರೆ, ಕಾಸಿದ್ದವನೇ ಬಾಸು,ಸಪ್ನೋಂಕಿ ರಾಣಿ, ಚಮ್ಕಾಯ್ಸಿ ಚಿಂದಿ ಉಡಾಯ್ಸಿ, ಕೂಲಿ,ರಾಜ ಮುಂತಾದ ಸಿನಿಮಾಗಳನ್ನು ಬಾಬು ನಿರ್ದೇಶಿಸಿದ್ದರು. 

ಬಾಬು ಅವರ ನಿಧನಕ್ಕೆ ಸ್ಯಾಂಡಲ್‌ವುಡ್‌ನ‌ ನೂರಾರು ಮಂದಿ ಸಂತಾಪ ಸೂಚಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next