Advertisement
ಅಂದಹಾಗೆ, ಇದು ರಜಿನಿ ನಟಿಸಿರುವ ಚೊಚ್ಚಲ ಚಿತ್ರ. ಮೊದಲ ಚಿತ್ರದಲ್ಲೇ ಟೈಟಲ್ ರೋಲ್ನಲ್ಲಿ ಕಾಣಿಸಿಕೊಂಡಿರುವ ರಜಿನಿ ಈ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟಿದ್ದಾರೆ. ತಮ್ಮ ಪಾತ್ರದ ಬಗ್ಗೆ ಮಾತನಾಡುವ ಅವರು, “ಭಾವನಾತ್ಮಕವಾಗಿ ಎಲ್ಲರನ್ನೂ ಕಾಡುವ ಪಾತ್ರ. ಒಂದು ಕಡೆ ಸೆಂಟಿಮೆಂಟ್, ಇನ್ನೊಂದು ಕಡೆ ರಗಡ್ ಲುಕ್ ಇದೆ. ಎಲ್ಲಾ ಪಾತ್ರಗಳ ಮಧ್ಯೆ ಎದ್ದು ಕಾಣುವ ಪಾತ್ರವಿದು. ನಾನಿಲ್ಲಿ ಅಂಬುಜ ಎಂಬ ಟೈಟಲ್ ರೋಲ್ ಮಾಡಿದ್ದೇನೆ. ಅಂಬುಜ ಪಾತ್ರಕ್ಕೆ ಸಾಕಷ್ಟು ಶೇಡ್ಸ್ ಇದೆ. ನಿರ್ದೇಶಕರು ಅದನ್ನು ಸಿನಿಮಾದುದ್ದಕ್ಕೂ ತೋರಿಸಿದ್ದಾರೆ’ ಎನ್ನುತ್ತಾರೆ ರಜಿನಿ.
Related Articles
Advertisement
ಮೊದಲ ಚಿತ್ರದಲ್ಲೇ ಟೈಟಲ್ ರೋಲ್ನಲ್ಲಿ ಕಾಣಿಸಿಕೊಂಡಿರುವ ಖುಷಿ ರಜಿನಿ ಅವರದು. “ಇವತ್ತು ಮಹಿಳಾ ಪ್ರಧಾನ ಚಿತ್ರಗಳು ಕಡಿಮೆಯಾಗುತ್ತಿವೆ. ಇಂತಹ ಸಂದರ್ಭದಲ್ಲಿ ನನಗೆ ಟೈಟಲ್ ರೋಲ್ ಸಿಕ್ಕಿರೋದು ನಿಜಕ್ಕೂ ತುಂಬಾ ಖುಷಿಯಾಗಿದೆ. ನನ್ನ ಪಾತ್ರಕ್ಕೆ ನ್ಯಾಯ ಸಲ್ಲಿಸಲು ನಾನು ಪ್ರಯತ್ನಿಸಿದ್ದೇನೆ. ಸಿನಿಮಾ ನೋಡಿದವರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ’ ಎನ್ನುವ ರಜಿನಿ ಕೈಯಲ್ಲಿ ಇನ್ನೊಂದಿಷ್ಟು ಸಿನಿಮಾಗಳಿವೆ. ಎಲ್ಲವೂ ನಟನೆಗೆ ಅವಕಾಶವಿರುವ ಪಾತ್ರಗಳೇ. “ನನಗೆ ಸಣ್ಣಪಾತ್ರವಾದರೂ ಸರಿ, ಅದನ್ನು ಜನ ಗುರುತಿಸುವಂತಿರಬೇಕು. ಇವತ್ತು ಲೀಡ್ರೋಲ್, ಹೀರೋಯಿನ್ ಎನ್ನುವುದಕ್ಕಿಂತ ಪಾತ್ರದ ತೂಕ ಮುಖ್ಯವಾಗುತ್ತಿದೆ. ನಾನು ಕೂಡಾ ಅಂತಹ ಪಾತ್ರಗಳನ್ನು ಎದುರು ನೋಡುತ್ತಿದ್ದೇನೆ’ ಎನ್ನುತ್ತಾರೆ.