Advertisement

ಬಿಂಗೋ ಚಿತ್ರೀಕರಣದಲ್ಲಿ ರಾಗಿಣಿ ಬಿಝಿ

03:16 PM Mar 10, 2023 | Team Udayavani |

ನಟಿ ರಾಗಿಣಿ ದ್ವಿವೇದಿ ಮುಖ್ಯಭೂಮಿಕೆಯಲ್ಲಿ ಅಭಿನಯಿಸುತ್ತಿರುವ “ಬಿಂಗೋ’ ಸಿನಿಮಾದ ಚಿತ್ರೀಕರಣ ಭರದಿಂದ ನಡೆಯುತ್ತಿದೆ.

Advertisement

ಚಿತ್ರದಲ್ಲಿ ಆರ್‌. ಕೆ ಚಂದನ್‌ ನಾಯಕನಾಗಿ ಅಭಿನಯಿಸುತ್ತಿದ್ದು, ಶಂಕರ್‌ ಕೋನಮಾನಹಳ್ಳಿ ನಿರ್ದೇಶನದಲ್ಲಿ “ಬಿಂಗೋ’ ಚಿತ್ರ ಮೂಡಿಬರುತ್ತಿದೆ.

ಸಸ್ಪೆನ್ಸ್‌-ಥ್ರಿಲ್ಲರ್‌ ಕಥಾಹಂದರ ಹೊಂದಿರುವ “ಬಿಂಗೋ’ ಸಿನಿಮಾದಲ್ಲಿ ರಾಗಿಣಿ ದ್ವಿವೇದಿ ಎರಡು ಶೇಡ್‌ಗಳಿರುವ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಸದ್ದಿಲ್ಲದೆ ಎರಡು ಹಂತಗಳ ಚಿತ್ರೀಕರಣ ಮುಗಿಸಿರುವ “ಬಿಂಗೋ’ ಸಿನಿಮಾದ ಮೂರನೇ ಹಂತದ ಚಿತ್ರೀಕರಣ ಬೆಂಗಳೂರಿನಲ್ಲಿ ಬಿರುಸಿನಿಂದ ಸಾಗಿದೆ. ನಗರದ ಹೊರವಲಯದಲ್ಲಿರುವ ದೇವರಾಜ್‌ ಎಸ್ಟೇಟ್‌ನಲ್ಲಿ ಸದ್ಯ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ.

ನಟಿ ರಾಗಿಣಿ ದ್ವಿವೇದಿ, ಆರ್‌. ಕೆ ಚಂದನ್‌, ರಕ್ಷಾ ನಿಂಬರ್ಗಿ, ರಾಜೇಶ್‌ ನಟರಂಗ, ಪವನ್‌, ಮುರಳಿ ಪೂರ್ವಿಕ್‌, ಅಪೂರ್ವಾ, ಆಶಾ ಸುಜಯ್, ಶ್ರವಣ್‌ ಸೇರಿದಂತೆ ಹಲವು ಕಲಾವಿದರು ಈ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ.

“ಆರ್‌.ಕೆ ಸ್ಟುಡಿಯೋಸ್‌’ ಮತ್ತು “ಮುತರಾ ವೆಂಚರ್’ ಬ್ಯಾನರಿನಲ್ಲಿ ಲಲಿತಾಸ್ವಾಮಿ ಮತ್ತು ಆರ್‌. ಪರಾಂಕುಶ “ಬಿಂಗೋ’ ಸಿನಿಮಾಕ್ಕೆ ಬಂಡವಾಳ ಹೂಡಿ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರದ ಹಾಡುಗಳಿಗೆ ಹಿತನ್‌ ಹಾಸನ್‌ ಸಂಗೀತ ಸಂಯೋಜನೆಯಿದ್ದು, ನಟರಾಜ್‌ ಮುದ್ದಾಲ್ ಛಾಯಾಗ್ರಹಣವಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next