Advertisement
ಡಿಟೆಕ್ಟಿವ್ ರಚನಾ:
Related Articles
Advertisement
ಸಾಮಾನ್ಯವಾಗಿ ಸಿನಿಮಾ ಕ್ಷೇತ್ರಕ್ಕೆ ಎಂಟ್ರಿಕೊಡಬೇಕು ಅಂದರೆ ಒಂದು ಬ್ಯಾಗ್ರೌಂಡ್, ಮಾಡಲಿಂಗ್ ಅನುಭವ ಇರಬೇಕು. ಇಲ್ಲ ಅಂದರೆ ತುಸು ಕಷ್ಟ ಇಲ್ಲಿ ಉಳಿಯಲು ಅನ್ನೋ ಭಾವನೆಯಿದೆ. ಮಾಡೆಲಿಂಗ್ ಕ್ಷೇತ್ರದಲ್ಲಿ ಮಿಂಚಿ ಬಳಿಕ ನಟಿಯಾದವರ ಸಂಖ್ಯೆ ಬಹಳಷ್ಟಿದೆ. ಈ ನಿಟ್ಟಿನಲ್ಲಿ ತಾನು ಮಾಡೆಲಿಂಗ್ ಪ್ರವೇಶಿದರೆ ಸಿನಿರಂಗಕ್ಕೆ ಪ್ರವೇಶ ಪಡೆಯಬಹುದು ಎಂಬ ಆಸೆ ರಚನಾಗೆ. ಬಾಲ್ಯದ ದಿನಗಳಿಂದ ಅಭಿನಯ, ಸಿನಿಮಾ ಕ್ಷೇತ್ರದಲ್ಲಿ ಆಸಕ್ತಿ ಇದ್ದ ರಚನಾಗೆ ಮಾಡೆಲಿಂಗ್ ಮೂಲಕ ಸಿನಿರಂಗ ಪ್ರವೇಶಿಸಬಹುದು ಎಂದು ಮೊದಲು ಅದರ ತಯಾರಿ ಆರಂಭಿಸದರಂತೆ. ಮಾಡೆಲ್‌ಗಳಂತೆ ಫೋಟೋ ಶೂಟ್ ಕೂಡಾ ಮಾಡಿಸಿದ್ದರಂತೆ. ಅದರ ಪರಿಣಾಮ ಈಗ ಚಿತ್ರರಂಗದಲ್ಲಿ ಅವಕಾಶ ಸಿಕ್ಕಿ, ಬಿಝಿಯಾಗುತ್ತಿದ್ದಾರೆ. ಇಂಥದ್ದೇ ಪಾತ್ರ ಮಾಡಬೇಕು ಎಂದು ಗೆರೆ ಹಾಕಿಕೊಂಡಿಲ್ಲವಂತೆ ರಚನಾ. “ನಾನು ಪಾತ್ರ ಎಂಥದ್ದೇ ಆದರು ನನಗೆ ಅಭಿನಯದ ಅವಕಾಶ ವಿರಬೇಕು. ಆದರೆ ಆ್ಯಕ್ಷನ್ ಪಾತ್ರಗಳು, ಚಿತ್ರದ ಕಥೆಯನ್ನು ಪ್ರಭಾವಿಸುವ ಪಾತ್ರಗಳು ಮಾಡಬೇಕು. ತೆರೆ ಮೇಲೆ ಕೇವಲ ಬಂದು ಹೋಗುವ ಬದಲು ಅಭಿನಯನಕ್ಕೆ ಒತ್ತು ಇರುವ ಪಾತ್ರ ನನಗಿಷ್ಟ’ ಎನ್ನುವುದು ರಚನಾ ಅವರ ಆಶಯ.
ಬಯಸದೇ ಬಂದ ಭಾಗ್ಯ :
ತರಬೇತಿ ಕೇಂದ್ರದಲ್ಲಿ ಅಭಿನಯದ ಕುರಿತು ಪಳಗುವ ಮುನ್ನವೇ ಬಂದ ಮೊದಲ ಸಿನಿಮಾದ ಅವಕಾಶ ಅಭಿನಯದ ಕುರಿತು ಸಾಕಷ್ಟು ಕಲಿಯುವಂತೆ ಮಾಡಿತ್ತು. ಚಿತ್ರತಂಡ ಅಭಿನಯದ ಮತ್ತಷ್ಟು ಮಜಲುಗಳನ್ನು ರಚನಾಗೆ ತಿಳಿಸಿತ್ತು. “ಆಗ ತಾನೆ ನಟನಾ ತರಬೇತಿಗೆ ಸೇರಿದವಳು ನಾನು , ಈ ಚಿತ್ರಕ್ಕೆ ಆಯ್ಕೆ ಆದೆ. ಹಾಗಾಗಿ, ಅಭಿನಯದ ಕುರಿತು ಅಷ್ಟು ತಿಳಿದಿರಲಿಲ್ಲ . ಆದರೆ ಲವ್ ಮಾಕ್ಟೇಲ್‌ನಲ್ಲಿ ಅದರ ಅನುಭವ ಪಡೆದೆ. ಮೊದಲ ಚಿತ್ರದ ಮೂಲಕ ಕಲಿತೆ’ ಎನ್ನುವುದು ರಚನಾ ಮಾತು.