Advertisement

ಕೋವಿಡ್ ಜಾಗೃತಿ ವಿಡಿಯೋದಲ್ಲಿ ಸ್ಯಾಂಡಲ್ ವುಡ್ ನಟ ಪುನೀತ್‌

08:28 PM Jun 05, 2021 | Team Udayavani |

ನವದೆಹಲಿ: ಕೊರೊನಾ ಮಣಿಸುವಲ್ಲಿ ದೇಶದ ಜನತೆಯಲ್ಲಿ ಆತ್ಮವಿಶ್ವಾಸ ತುಂಬುವ ಸಲುವಾಗಿ, ವಿಡಿಯೋ ತುಣುಕೊಂದರ ಮೂಲಕ ಜನಜಾಗೃತಿ ಮೂಡಿಸುವ ವಿಭಿನ್ನ ಪ್ರಯತ್ನಕ್ಕೆ ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟ(ಫಿಕ್ಕಿ) ಕೈ ಹಾಕಿದೆ. ಕನ್ನಡ, ಹಿಂದಿ, ಮರಾಠಿ, ಪಂಜಾಬಿ, ತಮಿಳು, ತೆಲುಗು ಭಾಷೆಗಳಲ್ಲಿ ಈ ವಿಡಿಯೋ ನಿರ್ಮಿಸಲಾಗಿದ್ದು ಆಯಾ ಭಾಷೆಯ ವಿಡಿಯೋಗಳಲ್ಲಿ ಸ್ಥಳೀಯ ಖ್ಯಾತ ಕಲಾವಿದರು ನಟಿಸಿದ್ದಾರೆ. ಕನ್ನಡದ ಅವತರಣಿಕೆಯಲ್ಲಿ ನಟ ಪುನೀತ್‌ ರಾಜ್‌ಕುಮಾರ್‌ ಕಾಣಿಸಿಕೊಂಡಿದ್ದಾರೆ.

Advertisement

ಹಿಂದಿಯಲ್ಲಿ ಇದಕ್ಕೆ “ಹರ್‌ ಘರ್‌ ಮೇ ಥಾನಾ ಹೇ, ಕೊರೊನಾ ಕೋ ಹರಾನಾ ಹೇ’ ಎಂಬ ಧ್ಯೇಯ ವಾಕ್ಯದಡಿ ಈ ವಿಡಿಯೋ ತಯಾರಾಗಿದ್ದು, ಇದರಲ್ಲಿ ನಟಿಸಿರುವ ಕಲಾವಿದರು ಈ ವಾಕ್ಯವನ್ನು ಹೈಲೈಟ್‌ ಮಾಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಹಿಂದಿ, ಮರಾಠಿ ಹಾಗೂ ಪಂಜಾಬಿ ಭಾಷೆಗಳ ವಿಡಿಯೋದಲ್ಲಿ ಅಕ್ಷಯ್‌ ಕುಮಾರ್‌ ನಟಿಸಿದ್ದು, ತಮಿಳು ಅವತರಣಿಕೆಯಲ್ಲಿ ಆರ್ಯ, ತೆಲುಗಿನಲ್ಲಿ ಚಿರಂಜೀವಿ ಅಭಿನಯಿಲಿದ್ದಾರೆ. ಈ ವಿಡಿಯೋಗಳು ಮುದ್ರಣ ಮಾಧ್ಯಮ, ಟಿವಿ, ರೇಡಿಯೋ ಹಾಗೂ ಡಿಜಿಟಲ್‌ ಮಾಧ್ಯಮಗಳಲ್ಲಿ ಪ್ರಸಾರವಾಗಲಿದೆ.

ಇದನ್ನೂ ಓದಿ :ಉಡುಪಿ ಜಿಲ್ಲೆಯಲ್ಲಿ ಜೂ.14ರ ವರೆಗೆ ಮದುವೆ ಸಮಾರಂಭ ನಿಷೇಧ : ಜಿಲ್ಲಾಧಿಕಾರಿ

ದ ಫೆಡರೇಷನ್‌ ಆಫ್ ಇಂಡಿಯನ್‌ ಚೇಂಬರ್‌ ಆಫ್ ಕಾಮರ್ಸ್‌ ಆ್ಯಂಡ್‌ ಇಂಡಸ್ಟ್ರಿ (ಎಫ್ಸಿಸಿಐ) ಪರಿಕಲ್ಪನೆಯ ಈ ವಿಡಿಯೋ ಜಾಗೃತಿಗೆ ಇಂಡಿಯನ್‌ ಬ್ರಾಡ್‌ಕಾಸ್ಟಿಂಗ್‌ ಫೌಂಡೇಷನ್‌ (ಐಬಿಎಫ್), ಇಂಡಿಯನ್‌ ಅಡ್ವಟೈಸಿಂಗ್‌ ಅಸೋಸಿಯೇಷನ್‌ ಕೈ ಜೋಡಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next