Advertisement
ನಾನು ಮಂತ್ರಿಯಾಗಿದ್ದಾಗ ಉಡುಪಿ ನಗರಕ್ಕೆ ಉತ್ತಮ ನೀರು ಸಂಗ್ರಹಿಸಲು ಸ್ವರ್ಣಾ ನದಿಯ ಯಾಂತ್ರಿಕೃತ ಹೂಳೆತ್ತಲು ಅವಕಾಶ ನೀಡು ವಂತೆ ಪರಿಸರ ಸಚಿವಾಲಯಕ್ಕೆ ಪ್ರಸ್ತಾವನೆಯನ್ನು ಕಳುಹಿಸಲು ಅಂದಿನ ಜಿಲ್ಲಾಧಿಕಾರಿ ಪ್ರಿಯಾಂಕಾ ಅವರನ್ನು ಕೇಳಿದ್ದೆ. ಸ್ವರ್ಣಾ ನದಿಯ ನೀರನ್ನು ಇನ್ನೂ ಉತ್ತಮವಾಗಿ ಸಂಗ್ರಹಿ ಸಿಟ್ಟುಕೊಳ್ಳುವ ಕಾರಣಕ್ಕಾಗಿ ಸರಕಾರ ಹೂಳೆತ್ತಲು ಅವಕಾಶ ಕೊಟ್ಟ ಅನಂತರ ರಾಜಕೀಯವಾಗಿ ಸಂಪರ್ಕ ಹೊಂದಿದ ವ್ಯಕ್ತಿಗಳಿಗೆ ಉಡುಪಿ ನಗರಸಭೆ ಹೂಳೆತ್ತಲು ಅನುಮತಿ ನೀಡಿ ಸಂಗ್ರಹಿಸಿದ ಮರಳನ್ನು ಮಾರಾಟ ಮಾಡುವ ಹಕ್ಕುಗಳನ್ನು ಜಿಲ್ಲಾಡಳಿತಕ್ಕೆ ನೀಡಲಾಗಿದೆ. ಆದರೆ ಈಗ ಮರಳು ಕಳ್ಳಸಾಗಣೆ ನಡೆಯುತ್ತಿದೆ ಮತ್ತು ಲೋಕಾಯುಕ್ತ ಪೊಲೀಸರು ಇತ್ತೀಚೆಗೆ ದಾಳಿ ನಡೆಸಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು.ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ಸೇರಿ ದಂತೆ ಎಲ್ಲರ ವಿರುದ್ಧ ಪ್ರಕರಣ ದಾಖಲಿಸಬೇಕು. ಅವರ ಹಸ್ತಕ್ಷೇಪವಿಲ್ಲದೆ ಇಂತಹ ದೊಡ್ಡ ಪ್ರಮಾಣದ ಅಕ್ರಮ ನಡೆಯಲು ಸಾಧ್ಯವಿಲ್ಲ ಎಂದು ಪ್ರಮೋದ್ ಟ್ವೀಟ್ ಮಾಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕ ಕೆ. ರಘುಪತಿ ಭಟ್ ಅವರು ಸ್ವರ್ಣಾ ನದಿಯಿಂದ ತೆಗೆದಿರುವ ಮರಳಿನಲ್ಲಿ ಮಣ್ಣು ಮಿಶ್ರವಾಗಿರುತ್ತದೆ. ಇದನ್ನುತೆಗೆದ ತತ್‌ಕ್ಷಣ ದಡದಲ್ಲಿಟ್ಟು ಮರಳನ್ನು ಬೇರ್ಪಡಿಸಿ ಹಿರಿಯಡ್ಕದ ಯಾರ್ಡ್‌ಗೆ ಸ್ಥಳಾಂತರಿಸಲಾಗುತ್ತದೆ. ಅಲ್ಲಿ ವೈಜ್ಞಾನಿಕ ರೀತಿಯಲ್ಲಿ ವರ್ಗೀಕರಣ ಮಾಡಲಾಗುತ್ತಿದೆ. ಮಣ್ಣು ಇರುವ ಹೂಳನ್ನು ಕೊಂಡೊಯ್ದರೆ ಯಾರಿಗೆ ಲಾಭ? ಇದರಲ್ಲಿ ಏನು ಅಕ್ರಮವೆಂದು ತಿಳಿಯುತ್ತಿಲ್ಲ. ಇದರಲ್ಲಿ ಅಕ್ರಮ ಎಂದು ಕಂಡುಬಂದರೆ ಈ ಬಗ್ಗೆ ತನಿಖೆ ನಡೆಯಲಿ ಎಂದು ತಿಳಿಸಿದ್ದಾರೆ.