Advertisement
ಸಿಆರ್‌ಝೆಡ್ ವಲಯದ ಮರಳುಗಾರಿಕೆಯ ಪರವಾನಿಗೆ ಮುಗಿದು ನಾಲ್ಕು ತಿಂಗಳಾದರೂ ಹೊಸ ಪರವಾನಿಗೆ ಲಭ್ಯವಾಗದ ಹಿನ್ನೆಲೆಯಲ್ಲಿ ಮರಳಿನ ಕೊರತೆ ಹೆಚ್ಚಾಗಿದೆ. ನಾನ್ ಸಿಆರ್‌ಝಡ್ ವಲಯದಲ್ಲಿ ಮರಳುಗಾರಿಕೆ ನಡೆಯುತ್ತಿದೆಯಾದರೂ ಕಾರ್ಮಿಕರ ಕೊರತೆಯಿಂದಾಗಿ ಬೇಡಿಕೆ ಇರುವಷ್ಟು ಮರಳು ದೊರೆಯುತ್ತಿಲ್ಲ ಎಂದು ಕಟ್ಟಡ ನಿರ್ಮಾಣ ಕ್ಷೇತ್ರದವರು ದೂರಿದ್ದಾರೆ.
ಸಿಆರ್‌ಝಡ್ ವ್ಯಾಪ್ತಿಯ ಮರಳು ದಿಬ್ಬಗಳನ್ನು ಗುರುತಿಸಿ ಜಿಲ್ಲಾ ಮಟ್ಟದ ಅಗತ್ಯ ಪ್ರಕ್ರಿಯೆಗಳನ್ನು ನಡೆಸಿ ಕರ್ನಾಟಕ ಕರಾವಳಿ ವಲಯ ನಿಯಂತ್ರಣ ಪ್ರಾಧಿಕಾರಕ್ಕೆ (ಕೆಸಿಝಡ್‌ಎಂಎ) ಕಳುಹಿಸಿಕೊಡಲಾಗಿದೆ. ಕೊರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಕೆಸಿಝೆಡ್‌ಎಂಎಗೆ ಕಳುಹಿಸುವಾಗಲೂ ವಿಳಂಬವಾಗಿತ್ತು. ಇದೀಗ ಬೆಂಗಳೂರು ಮಟ್ಟದಲ್ಲಿ ಬಾಕಿಯಾಗಿದೆ. 13 ಬ್ಲಾಕ್‌ಗಳು
ಸಿಆರ್‌ಝಡ್ ವ್ಯಾಪ್ತಿಯಲ್ಲಿ 13 ಬ್ಲಾಕ್‌ಗಳನ್ನು ಗುರುತಿಸಲಾಗಿದೆ. ಕಳೆದ ಬಾರಿ 105 ಮಂದಿ ಪರವಾನಿಗೆದಾರರಿಗೆ ಅನುಮತಿ ನೀಡಲಾಗಿತ್ತು. ನಾನ್ ಸಿಆರ್‌ಝಡ್ ವ್ಯಾಪ್ತಿಯಲ್ಲಿ 15 ಸಾರ್ವಜನಿಕ ಮತ್ತು 6 ಸರಕಾರಿ ಬ್ಲಾಕ್ ಸೇರಿದಂತೆ ಒಟ್ಟು 21 ಬ್ಲಾಕ್‌ಗಳಲ್ಲಿ ಮರಳುಗಾರಿಕೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿ ದ್ದಾರೆ. ಆದರೆ ನಾನ್ ಸಿಆರ್‌ಝಡ್ ವ್ಯಾಪ್ತಿಯಲ್ಲಿ ಕಾರ್ಮಿಕರ ಕೊರತೆಯಿಂದಾಗಿ ಮರಳುಗಾರಿಕೆ ಸಮರ್ಪಕವಾಗಿ ನಡೆಯುತ್ತಿಲ್ಲ. ನಾನ್ ಸಿಆರ್‌ಝಡ್ ಮರಳಿನ ದರವೂ ಹೆಚ್ಚಾಗಿದೆ. ಸಿಆರ್‌ಝಡ್ ಮರಳಿನಂತೆ ನಾನ್‌ಸಿಆರ್‌ಝಡ್ ಮರಳನ್ನು ಕೂಡ ಆ್ಯಪ್ ಮೂಲಕವೇ ವಿತರಿಸಬೇಕು ಎಂಬುದು ಬಿಲ್ಡರ್‌ಗಳ ಒತ್ತಾಯ.