Advertisement

ಮರಳು ಸಮಸ್ಯೆ: ತೀವ್ರ ಹೋರಾಟಕ್ಕೆ ನಿರ್ಧಾರ

10:34 PM Oct 08, 2020 | mahesh |

ಮಂಗಳೂರು: ದ.ಕ. ಜಿಲ್ಲೆಯಲ್ಲಿ ಮರಳು ಕೊರತೆಯಿಂದ ನಿರ್ಮಾಣ ಕ್ಷೇತ್ರ ಹಾಗೂ ಅವಲಂಬಿತ ಉದ್ದಿಮೆಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ತತ್‌ಕ್ಷಣ ಕ್ರಮ ಕೈಗೊಂಡು ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಆಗ್ರಹಿಸಿರುವ ನಿರ್ಮಾಣ ಕ್ಷೇತ್ರಕ್ಕೆ ಸಂಬಂಧಪಟ್ಟ ವಿವಿಧ ಸಂಘಟನೆಗಳು ಇದಕ್ಕೆ ಪೂರಕ ಸ್ಪಂದನೆ ದೊರಕದಿದ್ದರೆ ತೀವ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದಿವೆ.

Advertisement

ಸಿವಿಲ್‌ ಗುತ್ತಿಗೆದಾರರ ಅಸೋಸಿ ಯೇಶನ್‌, ಕ್ರೆಡೈ, ಎಂಜಿನಿಯರ್ ಅಸೋಸಿಯೇಶನ್‌, ಬಿಲ್ಡರ್ ಅಸೋಸಿ ಯೇಶನ್‌, ಸಿಮೆಂಟ್‌, ಸ್ಟೀಲ್‌ ಅಸೋಸಿಯೇಶನ್‌, ಹಾರ್ಡ್‌ವೇರ್‌ ಅಸೋಸಿಯೇಶನ್‌, ಮರಳು ಸಾಗಾಟದಾರರ ಒಕ್ಕೂಟ ಸೇರಿದಂತೆ ವಿವಿಧ ಸಂಘಟನೆಗಳು ಗುರುವಾರ ನಗರದಲ್ಲಿ ಜಂಟಿ ಪತ್ರಿಕಾಗೋಷ್ಠಿ ನಡೆಸಿದರು.

ಮರಳಿಗೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಅ. 10 ರಂದು ಸಭೆ ಕರೆದಿದ್ದು, ಇದರಲ್ಲಿ ಸಮಸ್ಯೆಗೆ ಪರಿಹಾರ ದೊರಕದಿದ್ದರೆ ಮಂದಿನ ವಾರದಿಂದ ನಿರ್ಮಾಣ ಕ್ಷೇತ್ರಕ್ಕೆ ಸಂಬಂಧಿಸಿದ ಚಟುವಟಿಕೆಗಳನ್ನು ಸ್ಥಗಿತಗೊಳಿಸಿ ಹೋರಾಟದ ಹಾದಿ ಹಿಡಿಯಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next