Advertisement
ಅನುಮತಿಕಳೆದ ವರ್ಷ ಕಂಡಲೂರು, ಬಸ್ರೂರಿನಲ್ಲಿ ಸಿಹಿನೀರ ಮರಳುಗಾರಿಕೆಗೆ ಅವಕಾಶ ನೀಡಲಾಗಿತ್ತು. ಈ ಪೈಕಿ ಗುಲ್ವಾಡಿ, ಕಂಡಲೂರು, ಹಳ್ನಾಡು ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿ, ಜಪ್ತಿ, ಬಸ್ರೂರು ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿ. ಇಲ್ಲಿ 1 ಟನ್‌ಗೆ 7 ಸಾವಿರ ರೂ.ಗಳಂತೆ ಮರಳನ್ನು ನೀಡಬೇಕು. ಇದರಲ್ಲಿ ಸಾಗಾಣಿಕೆ ವೆಚ್ಚ ಸೇರಿಲ್ಲ.
ಉಡುಪಿ ಜಿಲ್ಲೆಯಲ್ಲಿ ಸಿಆರ್‌ಝಡ್ ವ್ಯಾಪ್ತಿಯಲ್ಲಿ ತೆಗೆಯುವ ಮರಳು ಧಕ್ಕೆಯಲ್ಲಿ ಒಂದು ಮೆಟ್ರಿಕ್ ಟನ್‌ಗೆ 550 ರೂ. ದರ ನಿಗದಿಪಡಿಸಲಾಗಿದೆ. ಅದೇ ರೀತಿ ಮೂರು ಯುನಿಟ್ (10 ಮೆಟ್ರಿಕ್ ಟನ್) ಮರಳು 5,500 ರೂ.ಗಳಿಗೆ ಗ್ರಾಹಕರಿಗೆ ಲಭ್ಯವಾಗ ಬೇಕು. ಇದರಲ್ಲಿ ಸರಕಾರದ ರಾಜಸ್ವವೂ ಸೇರಿದೆ. ಲಾರಿಯಲ್ಲಿ 20 ಕಿ.ಮೀ. ವ್ಯಾಪ್ತಿಯಲ್ಲಿ ಮರಳು ಸಾಗಾಟಕ್ಕೆ 2,500 ರೂ. ದರ ನಿಗದಿಗೊಳಿಸಲಾಗಿದೆ. ಅನಂತರದ ಪ್ರತೀ ಕಿ.ಮೀ.ಗೆ 50 ರೂ. ಹೆಚ್ಚುವರಿ ದರ ನಿಗದಿಯಾಗಿದೆ. ಮರಳು ಬುಕ್ಕಿಂಗ್ ಆ್ಯಪ್ ಗೊಂದಲಮಯ ವಾಗಿದ್ದು, ಸರ್ವರ್ ತೊಂದರೆ, ಒಟಿಪಿ ಸರಿಯಾಗಿ ಬರದೇ ಇರುವುದು ಅನೇಕ ತಾಂತ್ರಿಕ ಸಮಸ್ಯೆ ಗಳಿದ್ದವು. ಆ್ಯಪ್ ಮೂಲಕ ಬುಕ್ಕಿಂಗ್ ಮಾಡಿದರೆ ಮರಳಿನ ದರ 5,500 ರೂ., ಲಾರಿ ಬಾಡಿಗೆ, ಜಿಎಸ್‌ಟಿ ಇತ್ಯಾದಿ ಸೇರಿ 9 ಸಾವಿರ ರೂ. ಬರಬೇಕು. ಆದರೆ ಬುಕ್ಕಿಂಗ್ ಮಾಡುತ್ತಾ ಹೋದಂತೆ ಅದು 13, 149 ರೂ.ಗೆ ತಲುಪುತ್ತಿತ್ತು. ಜತೆಯಲ್ಲಿ ಆ್ಯಪ್ ಶುಲ್ಕ ಮತ್ತು ಇತರ ಶುಲ್ಕದ ಜತೆ 10 ಮೆ.ಟ. ಮರಳಿಗೆ ಸರಿ ಸುಮಾರು 13,000ದಿಂದ 16,000 ರೂ.ಗಳನ್ನು ಖರೀದಿದಾರ ಭರಿಸುವ ಸ್ಥಿತಿ ಬಂದಿತ್ತು. ಜತೆಗೆ ಅವ್ಯವಹಾರದ ದೂರುಗಳೂ ಇದ್ದವು. ಈ ಬಾರಿಯಾದರೂ ಇದನ್ನು ಸರಿಪಡಿಸಿದರೆ ಗ್ರಾಹಕರು ದರ ಹೊರೆಯಿಂದ ಪಾರಾಗಬಹುದು.
Related Articles
ಒಂದು ಬ್ಲಾಕಿನಲ್ಲಿ 27,218 ಮೆ.ಟ. ಮರಳಿಗೆ ಅನುಮತಿ ನೀಡಿದ್ದು ಅಷ್ಟೂ ವಿತರಿಸಲಾಗಿದೆ. ಇನ್ನೊಂದು ಬ್ಲಾಕ್‌ನಲ್ಲಿ 56,821 ಮೆ.ಟ. ಮರಳು ತೆಗೆಯಲು ಅನುಮತಿ ನೀಡಿದ್ದು 48 ಸಾವಿರ ಮೆ.ಟ. ವಿತರಿಸಲಾಗಿದೆ. ಮಾ. 31ರೊಳಗೆ ವಿತರಣೆಯಾಗದೇ 8,821 ಮೆ.ಟ. ಬಾಕಿಯಾಗಿದೆ. ಇದರ ವಿಲೇ ಹೇಗೆ ಎನ್ನುವುದು ನಿಶ್ಚಯವಾಗಿಲ್ಲ ಈ ವರ್ಷವೂ ಇಷ್ಟೇ ಪ್ರಮಾಣದ ಮರಳು ವಿತರಣೆಯಾಗಬೇಕಿದ್ದು ಮರಳುಗಾರಿಕೆಗೆ ಐದು ವರ್ಷಕ್ಕೆ ಅನುಮತಿ ದೊರೆತಿದೆ. ಆವರೆಗೆ ಆ್ಯಪ್ ಮೂಲಕ ಮರಳು ವಿತರಿಸಬೇಕು.
Advertisement
ಹೊಸ ನಿಯಮರಾಜ್ಯ ಸರಕಾರ ಹೊಸ ಮರಳು ನೀತಿಯನ್ನು ಜೂನ್‌ನಲ್ಲಿ ಜಾರಿಗೆ ತಂದಿದ್ದು ಅದರಂತೆ ರಾಜ್ಯದಲ್ಲಿ ಗಣಿಗಾರಿಕೆಗೆ ಎರಡು ಸಂಸ್ಥೆಗಳಿಗೆ ಅನುಮತಿ ನೀಡಲಾಗಿದೆ. ಜನರಿಗೆ ಕಡಿಮೆ ದರದಲ್ಲಿ ಸುಲಭ ಮತ್ತು ಪಾರದರ್ಶಕವಾಗಿ ಮರಳು ದೊರಕುವಂತೆ ರಾಜ್ಯ ಸರಕಾರ ಈ ಹೊಸ ಮರಳು ನೀತಿ ಜಾರಿಗೊಳಿಸಿದೆ. ಇದರನ್ವಯ ಗ್ರಾ.ಪಂ. ವ್ಯಾಪ್ತಿಯಲ್ಲಿ ಸಾಂಪ್ರ ದಾಯಿಕ ಮರಳುಗಾರಿಕೆಗೆ ಅವಕಾಶ ಕಲ್ಪಿಸಲಾಗಿದೆ. ನದಿ, ಅಣೆಕಟ್ಟುಗಳ ಹಿನ್ನೀರಿನ ಪ್ರದೇಶಗಳಲ್ಲಿ ಇರುವ ಮರಳು ನಿಕ್ಷೇಪಗಳ ನಿರ್ವಹಣೆಯನ್ನು ಸರಕಾರಿ ಸ್ವಾಮ್ಯದ ಕರ್ನಾಟಕ ಸ್ಟೇಟ್ ಮಿನರಲ್ ಕಾರ್ಪೊರೇಶನ್ (ಕೆಎಸ್‌ಎಂಸಿ)ನಡೆಸಲಿದೆ. ಅಕ್ರಮ ಮರಳುಗಾರಿಕೆ
ಪ್ರಸ್ತುತ ಕಾನೂನುಬದ್ಧ ಮರಳು ದೊರೆಯದ ಕಾರಣ ವಿವಿಧ ನದಿ ತೀರಗಳಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿರುವ ದೂರುಗಳಿವೆ. 18 ಸಾವಿರ ರೂ.ವರೆಗೆ ದರ ವಿಧಿಸಿ ಮರಳು ತಂದು ಹಾಕಲಾಗುತ್ತಿದೆ. ಜಿಲ್ಲಾಡಳಿತದ ಪಾತ್ರವಿಲ್ಲ
ಮರಳುಗಾರಿಕೆಯಲ್ಲಿ ಇನ್ನು ಜಿಲ್ಲಾಡಳಿತದ ಪಾತ್ರವಿಲ್ಲ. ಕರಾವಳಿಯಲ್ಲಿ ಕರ್ನಾಟಕ ಸ್ಟೇಟ್ ಮಿನರಲ್ ಕಾರ್ಪೊರೇಷನ್ ನಿಗಮ ಮರಳುಗಾರಿಕೆ ಮಾಡಲಿದ್ದು ಕಂದಾಯ ಇಲಾಖೆ ಮರಳುದಿಬ್ಬಗಳನ್ನು ಗುರುತಿಸಿ ಹಸ್ತಾಂತರಿಸಿದೆ. ಜಿಲ್ಲಾ ಮರಳು ಸಮಿತಿಯ ತೀರ್ಮಾನದ ಬಳಿಕ ಈಗಾಗಲೇ ಮರಳುಗಾರಿಕೆ ಅನುಮತಿ ಪಡೆದವರು ಮರು ಆರಂಭಿಸಬಹುದು.
-ಜಿ. ಜಗದೀಶ್ ಜಿಲ್ಲಾಧಿಕಾರಿ, ಉಡುಪಿ ದರ ವ್ಯತ್ಯಾಸ ಬೇಡ
ಸರಕಾರ ವಿಧಿಸಿದ ದರಕ್ಕಿಂತ ಹೆಚ್ಚುವರಿಯಾಗಿ ಮರಳು ಮಾರಾಟ ನಡೆಸಬಾರದು. ಅದು ದಂಧೆಯಾಗಬಾರದು. ಬಡವರಿಗೆ ಮರಳು ಸುಲಭವಾಗಿ, ಕಡಿಮೆ ದರದಲ್ಲಿ ದೊರೆಯಬೇಕೆನ್ನುವುದು ನಮ್ಮ ಆಶಯ. ಗ್ರಾಮ ಗ್ರಾಮಗಳಲ್ಲಿ ಮರಳು ದೊರೆಯಲು ಹೊಸ ಮರಳು ನೀತಿ ಬಂದಿದ್ದು ಅನುಷ್ಠಾನ ಹಂತದಲ್ಲಿದೆ.
-ಬಿ.ಎಂ. ಸುಕುಮಾರ್ ಶೆಟ್ಟಿ ಬೈಂದೂರು ಶಾಸಕರು