Advertisement
ಬ್ರಹ್ಮಾವರ: ಉಡುಪಿ ಜಿಲ್ಲಯಲ್ಲಿ ಮರಳಿನ ಕೊರತೆಯು ಕಟ್ಟಡ ನಿರ್ಮಾಣ ಕ್ಷೇತ್ರವನ್ನು ಅಗಾಧವಾಗಿ ತಟ್ಟಿದೆ. ಅದರಲ್ಲೂ ಇದರ ನೇರ ಬಿಸಿ ಅನುಭವಿಸುತ್ತಿರುವವರು ಕೂಲಿ ಕಾರ್ಮಿಕರು.
ಲ್ಲದರ ಪರಿಣಾಮ ಕಾರ್ಮಿಕ ವರ್ಗ ಕಂಗಾಲಾಯಿತು. ಈ ಪರಿಸ್ಥಿತಿ ಜಿಲ್ಲೆಯ ನಿರ್ದಿಷ್ಟ ಭಾಗಕ್ಕೆಂದಿಲ್ಲ. ಬಹುತೇಕ ಕಡೆ ಇದೇ ಸ್ಥಿತಿ. ಬ್ರಹ್ಮಾವರವನ್ನೇ ಉದಾಹರಣೆ ತೆಗೆದುಕೊಂಡರೆ, ಮೊದಲು ವಾರಪೂರ್ತಿ ಕೆಲಸವಿರುತ್ತಿತ್ತು. ಈಗ ಒಂದೆರಡು ದಿನಕ್ಕೂ ಕಷ್ಟ. ಕೆಲಸಕ್ಕೆ ರಜೆ ಮಾಡಿದರೆ ಬೈಯುವ ಕಾಲವಿತ್ತು. ಈಗ ಕಾರ್ಮಿಕರನ್ನು ಎಲ್ಲಿ ಕೆಲಸಕ್ಕೆ ಕಳುಹಿಸುವುದೆನ್ನುವುದೇ ಸಮಸ್ಯೆ ಎನ್ನುತ್ತಾರೆ ಮೇಸ್ತ್ರಿಯೊಬ್ಬರು.
Related Articles
ಪ್ರತಿನಿತ್ಯದ ಸಂಬಳವನ್ನೇ ನಂಬಿ ಸಂಘಗಳಲ್ಲಿ ಸಾಲ ಮಾಡಲಾಗಿತ್ತು. ಅದನ್ನು ತೀರಿಸಲು ಹಣವಿಲ್ಲದಾಗಿದೆ ಎಂಬುದು ಮತ್ತಷ್ಟು ಮಂದಿಯ ಸವಾಲಾದರೆ, ಮಕ್ಕಳ ಶಿಕ್ಷಣದ ವೆಚ್ಚ ನಿರ್ವಹಣೆ, ಮನೆಯಲ್ಲಿ ಹಿರಿಯರ ಆರೋಗ್ಯ ನಿರ್ವಹಣೆ, ಮನೆಯ ಖರ್ಚಿನ ನಿರ್ವಹಣೆ ಎಲ್ಲದಕ್ಕೂ ಆದಾಯದ ಕೊರತೆ ಉದ್ಭವಿಸಿದೆ.
Advertisement
ಪರಿಸ್ಥಿತಿ ಬದಲುಹಲವು ಮನೆಗಳಲ್ಲಿ ಮನೆಯೊಡತಿ ಮನೆಯನ್ನು ನಿರ್ವಹಿಸುತ್ತಿದ್ದರು. ಕೆಲಸಕ್ಕೆ ಹೋದರೂ ಮನೆಯ ಸುತ್ತ ಲಿನ ಕೆಲಸವಷ್ಟೇ. ಈಗ ಪತಿಗೂ ಕೆಲಸವಿಲ್ಲದ ಕಾರಣ, ಸ್ವಲ್ಪ ದೂರ ವಾದರೂ ಪರವಾಗಿಲ್ಲ ವೆಂದು ಆಕೆಯೂ ಕೆಲಸಕ್ಕೆ ಹೋಗುತ್ತಿರುವ ಪ್ರಕರಣ ಹೆಚ್ಚಾಗಿದೆ. ಭತ್ತದ ಕಟಾವು ಬಹುತೇಕ ಮುಗಿದಿದ್ದು, ಕೃಷಿ ಕೆಲಸವೂ ಮುಗಿಯುತ್ತಾ ಬಂದಿದೆ. ಮುಂದೇನು ಎಂಬುದೇ ಚಿಂತೆ ಎನ್ನುತ್ತಾರೆ ಬ್ರಹ್ಮಾವರ ಬಳಿಯ ಕೂಲಿ ಕಾರ್ಮಿಕರೊಬ್ಬರು. ಕ್ಷೇತ್ರವೇ ದೊಡ್ಡದು
ನಿರ್ಮಾಣ ಕಾರ್ಯ ಸ್ಥಗಿತದಿಂದ ಸಾವಿರಾರು ಕಾರ್ಮಿಕರಿಗೆ ಉದ್ಯೋಗವಿಲ್ಲ. ಕಲ್ಲು ಕೋರೆ, ಪಂಚಾಂಗ ಕಟ್ಟುವ, ಮಣ್ಣು ತುಂಬಿಸುವ, ಗಾರೆ, ಪೈಂಟಿಂಗ್ ಮಾಡುವವರಿಗೂ ಕೆಲಸವಿಲ್ಲದಾಗಿದೆ. ಪ್ರವೀಣ್ ಬ್ರಹ್ಮಾವರ