Advertisement

ಮರಳು ಅಡ್ಡೆಗೆ ದಾಳಿ: ಅಪಾರ ಸೊತ್ತು ವಶ

02:36 AM May 04, 2019 | Team Udayavani |

ಬಂಟ್ವಾಳ: ಅಕ್ರಮ ಮರಳು ಅಡ್ಡೆಗೆ ಮೇ 3ರಂದು ದಾಳಿ ನಡೆಸಿದ ಬಂಟ್ವಾಳ ಉಪವಿಭಾಗ ಎಎಸ್‌ಪಿ ಸೈದುಲ್‌ ಅದಾವತ್‌ ನೇತೃತ್ವದ ತಂಡ 1.67 ಕೋ. ರೂ. ಮೊತ್ತದ ಸೊತ್ತುಗಳನ್ನು ವಶಕ್ಕೆ ಪಡೆದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಹಸ್ತಾಂತರಿಸಿದೆ.

Advertisement

ಪುದು ಗ್ರಾಮದ ಸುಜೀರ್‌ನಲ್ಲಿ ನೇತ್ರಾವತಿ ನದಿಯ ಹಿನ್ನೀರಿನಿಂದ ಅಕ್ರಮವಾಗಿ ಮರಳು ತೆಗೆದು ಅದನ್ನು ಫಿಲ್ಟರ್‌ ಮಾಡಿ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆಗೆ ಮಾರುತ್ತಿದ್ದ ಬಗ್ಗೆ ಖಚಿತ ಮಾಹಿತಿಯಂತೆ ಕಾರ್ಯಾಚರಣೆ ನಡೆಸಲಾಗಿತ್ತು. ಕಾರ್ಮಿಕರು ಸ್ಥಳ ದಿಂದ ಪರಾರಿಯಾಗಿದ್ದಾರೆ.

ಸ್ಥಳದಲ್ಲಿದ್ದ 24 ಲ.ರೂ. ಮೌಲ್ಯದ 3 ಟಿಪ್ಪರ್‌ ಲಾರಿಗಳು, 55 ಲ.ರೂ. ಮೌಲ್ಯದ ಎಲ್‌ ಆ್ಯಂಡ್‌ ಟಿ ಕಂಪೆನಿಯ ಒಂದು ಹಿಟಾಚಿ, 80 ಲ.ರೂ. ಮೌಲ್ಯದ ಕೊಬಿಲ್‌ ಕೋ ಕಂಪೆನಿಯ ಒಂದು ಹಿಟಾಚಿ, 6 ಲ. ರೂ. ಮೌಲ್ಯದ ಗ್ರೀನ್‌ ವಿಕ್‌ ಕಂಪೆನಿಯ ಒಂದು ಜನರೇಟರ್‌, 80 ಸಾ.ರೂ. ಮೌಲ್ಯದ ಮರಳು ಫಿಲ್ಟರ್‌ ಮಾಡುವ ಯುನಿಟ್‌, 1.10 ಲ. ರೂ. ಮೌಲ್ಯದ 35 ಲೋಡ್‌ ಮರಳನ್ನು ವಶಕ್ಕೆ ಪಡೆಯ ಲಾಗಿದೆ ಎಂದು ಪೊಲೀ ಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next