Advertisement

ಆ್ಯಪ್‌ ಮೂಲಕ ಮರಳು ಬುಕ್‌; ಯೋಜನಾ ವಿವರ ಅಗತ್ಯ: ಡಿಸಿ

01:46 AM Jul 20, 2019 | Sriram |

ಮಂಗಳೂರು: ಜಿಲ್ಲೆಯ ಜನರಿಗೆ ಸರಕಾರಿ ದರದಲ್ಲಿ ಮರಳು ಪೂರೈಕೆ ಮಾಡುವ ಹಿನ್ನೆಲೆಯಲ್ಲಿ ರೂಪಿಸಲಾದ ಸ್ಯಾಂಡ್‌ ಬಜಾರ್‌ ಮೊಬೈಲ್‌ ಆ್ಯಪ್‌ನಿಂದ ಮರಳು ಪಡೆದು ಹೆಚ್ಚಿನ ಹಣಕ್ಕೆ ಮಾರಾಟ ಮಾಡುತ್ತಿರುವ ಪ್ರಕರಣ ಕಂಡು ಬಂದಿದ್ದು, ಅಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಶಶಿಕಾಂತ ಸೆಂಥಿಲ್‌ ತಿಳಿಸಿದ್ದಾರೆ.

Advertisement

ಜನಸಾಮಾನ್ಯರಿಗೆ ಕಡಿಮೆ ದರದಲ್ಲಿ ಮರಳು ಪೂರೈಕೆ ಮಾಡುವ ಉದ್ದೇಶದಿಂದ ಆ್ಯಪ್‌ ಮಾಡಲಾಗಿದೆ. ಆದರೆ ಕೆಲವರು ಇದರ ದುರುಪಯೋಗ ಪಡೆದುಕೊಳ್ಳುತ್ತಿದ್ದಾರೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಇನ್ನು ಮುಂದೆ ಆ್ಯಪ್‌ ಮೂಲಕ ಮರಳು ಬುಕ್‌ ಮಾಡುವಾಗ ದಾಖಲೆಗಳನ್ನು ನೀಡ ಬೇಕಾಗುತ್ತದೆ. ಮರಳು ಉಪಯೋಗಿಸುವ ಯೋಜನೆಯ ವಿವರ, ವಿಳಾಸ, ಲೈಸನ್ಸ್‌ನು° ಸಲ್ಲಿಸಿದರೆ ಮಾತ್ರ ಮರಳು ಸಿಗಲಿದೆ ಎಂದವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಮರಳು ಪಡೆಯುವವರ ವಿವರ ಇದ್ದರೆ ದುರುಪಯೋಗ ಮಾಡಿದರೆ ಸುಲಭವಾಗಿ ಪತ್ತೆ ಹಚ್ಚಲು ಸಾಧ್ಯವಾಗುತ್ತದೆ. ಆಗಾಗ ಪರಿಶೀಲನೆಯನ್ನೂ ನಡೆಸಲಾಗುತ್ತದೆ ಎಂದರು.

ಸಾವಿರಕ್ಕೂ ಅಧಿಕ ಅರ್ಜಿ
ಮರಳು ಆ್ಯಪ್‌ ಆರಂಭಿಸಿದ ಬಳಿಕ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, 1,000ಕ್ಕೂ ಅಧಿಕ ಮಂದಿ ಈಗಾಗಲೇ ಬುಕ್‌ ಮಾಡಿದ್ದಾರೆ. ಜನರು ಹೆಚ್ಚು ಹೆಚ್ಚು ಈ ಆ್ಯಪ್‌ನ ಪ್ರಯೋಜನ ಪಡೆಯಬೇಕು. ಆ್ಯಪ್‌ ಮೂಲಕ ಬುಕ್‌ ಮಾಡಿದರೆ ಸರಕಾರದ ದರದಲ್ಲಿ ಮನೆಗೇ ಮರಳು ಸರಬರಾಜು ಆಗಲಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next