Advertisement

“ಸ್ಯಾಂಡ್‌ ಬಜಾರ್‌’ಬುಕ್ಕಿಂಗ್‌: ಮರಳು ಸರಬರಾಜು ಮಾಡದವರ ಮೇಲೆ 8 ಕೇಸ್‌

10:53 AM Jun 01, 2019 | keerthan |

ಮಂಗಳೂರು: ದ.ಕ. ಜಿಲ್ಲಾಡಳಿತ ಜಾರಿಗೊಳಿಸಿರುವ “ಸ್ಯಾಂಡ್‌ ಬಜಾರ್‌’ ಆ್ಯಪ್‌ ಮೂಲಕ ಬುಕ್ಕಿಂಗ್‌ ಮಾಡಿದವರಿಗೆ ನಿಗದಿತ ಅವಧಿಯೊಳಗೆ ಮರಳು ಸರಬರಾಜು ಮಾಡದವರ ವಿರುದ್ಧ ಈಗಾಗಲೇ 8 ಪ್ರಕರಣ ದಾಖಲಿಸಲಾಗಿದೆ.

Advertisement

ಸ್ಯಾಂಡ್‌ ಬಜಾರ್‌ ಆ್ಯಪ್‌ ಮೂಲಕಮರಳು ಬುಕ್ಕಿಂಗ್‌ ಮಾಡಿದವರಿಗೆ ಸೂಕ್ತ ಸಂದರ್ಭದಲ್ಲಿ ನಿಗದಿತ ಪ್ರಮಾಣದಲ್ಲಿ ಮರಳು ಪೂರೈಸಬೇಕು. ಈ ನಡುವೆ ಸಮಸ್ಯೆ ಉಂಟು ಮಾಡಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಡಳಿತ ಹೇಳಿತ್ತು.

ಹಳೆಯಂಗಡಿಯ ನಿವಾಸಿಯೊಬ್ಬರು ಮೇ 28ರಂದು 10 ಟನ್‌ ಮರಳು (ಎರಡೂವರೆ ಯುನಿಟ್‌) “ಸ್ಯಾಂಡ್‌ ಬಜಾರ್‌’ ಆ್ಯಪ್‌ ಮೂಲಕ ಬುಕ್ಕಿಂಗ್‌ ಮಾಡಿದ್ದರು. ಇದಕ್ಕೆ ಬೇಕಾದ ಹಣ ಅವರ ಖಾತೆಯಿಂದ ಆನ್‌ಲೈನ್‌ ಮುಖಾಂತರವೇ ಪಾವತಿಸಲಾಗಿತ್ತು. ಇದರ ಮಾಹಿತಿ ಫರಂಗಿಪೇಟೆ ಮರಳು ಧಕ್ಕೆಗೆ ತಲುಪಿತ್ತು. ಅದರಂತೆ “ಮರಳು ಮಂಜೂರಾತಿ ಆಗಿದೆ. ವಾಹನ ಸಿಕ್ಕ ಕೂಡಲೇ ಮರಳನ್ನು ಸರಬರಾಜು ಮಾಡಲಾಗುವುದು’ ಎಂದು ಧಕ್ಕೆಯವರು ತಿಳಿಸಿದ್ದರು.

ಆದರೆ, ನಾಲ್ಕು ದಿನ ಆದರೂ, ಮರಳು ಲಭ್ಯವಾಗಲಿಲ್ಲ. ಈ ಬಗ್ಗೆ ಮಂಗಳೂರಿನ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯನ್ನು ಸಂಪರ್ಕಿಸಿದಾಗ ಸೂಕ್ತ ಉತ್ತರ ಕೂಡ ದೊರೆತಿರಲಿಲ್ಲ. ಮತ್ತೆ ವಿಚಾರಿಸಿದಾಗ ಲಾರಿಯವರು ಬುಕ್ಕಿಂಗ್‌ಗೆ ಬಂದಿಲ್ಲ ಎಂಬ ಉತ್ತರ ಬಂದಿದೆ.

ಇದು ಜಿಲ್ಲಾಡಳಿತ ಗಮನಕ್ಕೆ ಬಂದಿದ್ದು, ಲಾರಿ ವ್ಯವಸ್ಥೆಗೆ ಸೂಚಿಸಿದೆ.ಜತೆಗೆ ಇನ್ನು ಮುಂದೆ ಬುಕ್ಕಿಂಗ್‌ ನಂತರ ಕಣ್ಣಿಡಲು ಅದು ನಿರ್ಧರಿಸಿದೆ. ಜತೆಗೆ ಸೂಕ್ತ ಕಾಲದಲ್ಲಿ ಮರಳು ಒದಗಿಸದ್ದಿರೆ ಅಂತಹವರ ಲೈಸೆನ್ಸ್‌ ರದ್ದು ಪಡಿಸಲು ನಿರ್ಧರಿಸಿದೆ. ಈ ಮೂಲಕ ಅಕ್ರಮಮರಳುಗಾರಿಕೆ ವಿರುದ್ಧ ಹದ್ದಿನ ಕಣ್ಣಿಡಲು ಉದ್ದೇಶಿಸಲಾಗಿದೆ.

Advertisement

ಏತನ್ಮಧ್ಯೆ ಆ್ಯಪ್‌ಗೆ ಹಲವರು ವಿರೋಧಿಸುತ್ತಿದ್ದಾರೆ. ಹಿಂದಿನಂತೆಯೇ ಮರಳು ಸರಬರಾಜು ನಡೆಯಲಿ ಎಂದು ಅವರ ವಾದ ಆದರೆ, ಸಾರ್ವಜನಿಕರಿಗೆ ಕಡಿಮೆ ದರದಲ್ಲಿ ಬೇಕಾದಸಂದರ್ಭದಲ್ಲಿ ಮರಳು ದೊರೆಯಬೇಕು ಎಂಬ ನೆಲೆಯಲ್ಲಿ ಆ್ಯಪ್‌ ಮಾಡಲಾಗಿದೆ ಎಂಬುದು ಜಿಲ್ಲಾಡಳಿತದ ಅಭಿಪ್ರಾಯ. ಮರಳು ಬುಕ್ಕಿಂಗ್‌ ಬಳಿಕ ಪ್ರತಿ ಹಂತ “ಟ್ರಾಕಿಂಗ್‌ ಸ್ಟೇಟಸ್‌’ ಮೂಲಕ ಆ್ಯಪ್‌ನಲ್ಲಿ ಸಿಗಲಿದೆ. ಇದರಿಂದಾಗಿ ಗ್ರಾಹಕರು ಆ್ಯಪ್‌ ಮುಖೇನ ಸುಲಭವಾಗಿ ಬುಕ್ಕಿಂಗ್‌ ಮಾಡಬಹುದಾಗಿದೆ ಎಂಬುದು ಜಿಲ್ಲಾಡಳಿತದ ಅಭಿಪ್ರಾಯ.

“ಮರಳು ಸಾಗಾಟ-ವಿಳಂಬಿಸಿದರೆ ಕ್ರಮ’
ಸ್ಯಾಂಡ್‌ ಬಜಾರ್‌ ಆ್ಯಪ್‌ನಲ್ಲಿ ಬುಕ್ಕಿಂಗ್‌ ಮಾಡಿದ ಮರಳನ್ನು ನಿಗದಿತ ಸಮಯದೊಳಗೆ ಸಂಬಂಧಪಟ್ಟ ಮರಳು ಲಾರಿಯವರು ಸಾಗಾಟ ಮಾಡಬೇಕು. ವಿಳಂಬ ಮಾಡಿದರೆ ಆ ಲಾರಿಯ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಜತೆಗೆ, ಆ್ಯಪ್‌ನಲ್ಲಿ ಬುಕ್ಕಿಂಗ್‌ ಆದ ಕ್ಷಣದಿಂದ ನಡೆಯುವ ಎಲ್ಲಾ ಬೆಳವಣಿಗೆಯ ಬಗ್ಗೆ ಜಿಲ್ಲಾಡಳಿತ ವಿಶೇಷ ನಿಗಾ ಇರಿಸಲಿದೆ. ಲಾರಿಯವರು ಆರ್ಡರ್‌ ತೆಗೆದುಕೊಳ್ಳದಿದ್ದ ಸಂದರ್ಭದಲ್ಲಿ ಜಿಲ್ಲಾಡಳಿತವೇ ನಿಗದಿತ ಲಾರಿಯವರನ್ನು ಮರಳು ಸಾಗಾಟಕ್ಕೆ ನಿರ್ದೇಶನ ಮಾಡಲಾಗುವುದು.
ಶಶಿಕಾಂತ ಸೆಂಥಿಲ್‌, ದ.ಕ. ಜಿಲ್ಲಾಧಿಕಾರಿ.

Advertisement

Udayavani is now on Telegram. Click here to join our channel and stay updated with the latest news.

Next