Advertisement

ರಷ್ಯಾ ಜೊತೆ ಎಸ್-400 ಮಿಸೈಲ್ ಡೀಲ್: ಭಾರತದ ಮೇಲೆ ಅಮೆರಿಕ ನಿರ್ಬಂಧ ಹೇರಲಿದೆಯಾ?

01:29 PM Mar 03, 2022 | Team Udayavani |

ವಾಷಿಂಗ್ಟನ್: ಉಕ್ರೇನ್ ಮೇಲೆ ಯುದ್ಧ ಸಾರಿರುವ ರಷ್ಯಾದ ಮೇಲೆ ಅಮೆರಿಕ ಈಗಾಗಲೇ ಹಣಕಾಸು ಸೇರಿದಂತೆ ವಿವಿಧ ಬಗೆಯ ನಿರ್ಬಂಧಗಳನ್ನು ವಿಧಿಸಿದೆ. ಮತ್ತೊಂದೆಡೆ  ರಷ್ಯಾದ ವಿಚಾರದಲ್ಲಿ ತಟಸ್ಥ ನಿಲುವು ತಳೆದಿರುವ ಭಾರತ ರಷ್ಯಾದ ಜತೆಗೆ ರಕ್ಷಣಾ ವ್ಯವಸ್ಥೆಯ ಎಸ್.400 ಖರೀದಿಗೆ ಒಪ್ಪಂದ ಮಾಡಿಕೊಂಡಿದೆ. ಈ ನಿಟ್ಟಿನಲ್ಲಿ ಭಾರತದ ಮೇಲೆ ನಿರ್ಬಂಧ ಹೇರಬೇಕೆ ಅಥವಾ ಬೇಡವೇ ಎಂಬ ಬಗ್ಗೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ವರದಿ ಬಿವರಿಸದೆ.

Advertisement

ಇದನ್ನೂ ಓದಿ:ವೈದ್ಯಕೀಯ ಶಿಕ್ಷಣವನ್ನು ದುಬಾರಿಯನ್ನಾಗಿ ಮಾಡಿದ್ದು ಕಾಂಗ್ರೆಸ್: ಬಿಜೆಪಿ ಆರೋಪ

ಅಮೆರಿಕದ ವಿರೋಧಿ ದೇಶಗಳನ್ನು ನಿಗ್ರಹಿಸುವ ನಿರ್ಬಂಧಗಳ ದೇಶೀಯ ಕಾಯ್ದೆ(ಸಿಎಎಟಿಎಸ್ ಎ)ಯಡಿ ವಹಿವಾಟು ನಡೆಸುವ ಇರಾನ್, ಕೋರಿಯಾ ಅಥವಾ ರಷ್ಯಾ ಸೇರಿದಂತೆ ಯಾವುದೇ ದೇಶವಿರಲಿ ಅವುಗಳ ಮೇಲೆ ನಿರ್ಬಂಧ ಹೇರಬಹುದಾಗಿದೆ.

ಸಿಎಎಟಿಎಸ್ ಎ ಅಮೆರಿಕ ಕಠಿಣ ಕಾನೂನಾಗಿದ್ದು, ರಷ್ಯಾದಿಂದ ಯಾವುದೇ ದೇಶವಾಗಲಿ ಪ್ರಮುಖ ರಕ್ಷಣಾ ವ್ಯವಹಾರಗಳ ಕುರಿತು ಒಪ್ಪಂದ ಅಥವಾ ಖರೀದಿ ಮಾಡಿದರೆ ಆ ದೇಶಗಳ ಮೇಲೆ ಅಮೆರಿಕ ನಿರ್ಬಂಧ ವಿಧಿಸುತ್ತದೆ.

ಉಕ್ರೇನ್ ಮೇಲೆ ಯುದ್ಧ ಸಾರಿರುವ ರಷ್ಯಾದ ಮೇಲೆ ಅಮೆರಿಕ ಸೇರಿದಂತೆ ಬಹುತೇಕ ದೇಶಗಳು ಆರ್ಥಿಕ ಸೇರಿದಂತೆ ಹಲವು ಕಠಿಣ ನಿರ್ಬಂಧ ಹೇರಿದೆ. ಆದರೆ ಭಾರತ ತಟಸ್ಥ ನಿಲುವು ತಳೆದಿದೆ. ಅಲ್ಲದೇ ರಷ್ಯಾದ ಜತೆ ಎಸ್.400 ಮಿಸೈಲ್ ಖರೀದಿಗೆ ಒಪ್ಪಂದ ಮಾಡಿಕೊಂಡಿತ್ತು.

Advertisement

ಈ ಹಿನ್ನೆಲೆಯಲ್ಲಿ ಸಿಎಎಟಿಎಸ್ ಎ ಅಡಿಯಲ್ಲಿ ಭಾರತದ ಮೇಲೆ ನಿರ್ಬಂಧ ವಿಧಿಸುತ್ತೀರಾ ಎಂಬ ಪ್ರಶ್ನೆಗೆ ಅಮರಿಕ ಮತ್ತು ಮಧ್ಯ ಏಷ್ಯಾದ ಸದಸ್ಯ ಡೊನಾಲ್ಡ್ ಲೂ ಅವರು, ಭಾರತದ ಮೇಲೆ ನಿರ್ಬಂಧ ಹೇರಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರು ನಿರ್ಧರಿಸಲಿದ್ದಾರೆ ಎಂದು ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next