Advertisement

ಸಂಚಾರಿ ವಿಜಯ್ ಸಮಾಧಿಗೆ ಹಾಲು-ತುಪ್ಪ ಬಿಟ್ಟ ಕುಟುಂಬಸ್ಥರು

05:23 PM Jun 17, 2021 | Team Udayavani |

ಚಿಕ್ಕಮಗಳೂರು : ಬೈಕ್ ಅಪಾಘತದಲ್ಲಿ ಮೃತ ಪಟ್ಟ ನಟ ಸಂಚಾರಿ ವಿಜಯ್ ಅವರ ಸಾಮಾಧಿಗೆ ಹಾಲು-ತುಪ್ಪ ಬಿಡಲಾಯಿತು.

Advertisement

ಜಿಲ್ಲೆಯ ಕಡೂರು ತಾಲೂಕಿನ ಪಂಚನಹಳ್ಳಿಯಲ್ಲಿ ರುವ ಸಮಾಧಿಗೆ ತೆರಳಿದ ಕುಟುಂಬಸ್ಥರು ಮೂರನೇ ದಿನದ ಕಾರ್ಯ ನೆರವೇರಿಸಿದರು. ಹಾಲು-ತುಪ್ಪ ಬಿಡುವ ಕಾರ್ಯದಲ್ಲಿ ವಿಜಯ್ ಸಹೋದರರು, ಕುಟುಂಬಸ್ಥರು ಹಾಗೂ ಸ್ನೇಹಿತರು ಭಾಗಿಯಾಗಿದ್ದರು.

ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಅವರು ಸ್ನೇಹಿತನ ಜೊತೆ ತೆರಳುತ್ತಿದ್ದ ವೇಳೆ ಬೈಕ್ ಅಪಘಾತಕ್ಕೀಡಾಗಿದ್ದರು. ಅವರನ್ನು ಬೆಂಗಳೂರಿನ ಅಪೋಲೊ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಮೆದುಳು ನಿಷ್ಕ್ರೀಯಗೊಂಡಿದ್ದರಿಂದ ಅವರು ಬದುಕುಳಿಯಲಿಲ್ಲ. ಜೂನ್ 15 ರಂದು ಸಂಚಾರಿ ವಿಜಯ್ ಕೊನೆಯುಸಿರೆಳೆದರು. ಸಾವಿನ ಬಳಿಕ ಅವರ ಅಂಗಾಂಗಗಳನ್ನು ದಾನ ಮಾಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next