Advertisement

ಕ್ಯಾಲಿಫೋರ್ನಿಯಾ: ಕೇಸರಿ ಬಣ್ಣಕ್ಕೆ ತಿರುಗಿದ ಆಕಾಶ, ಕಾರಣವೇನು ಗೊತ್ತಾ ?

08:08 PM Sep 11, 2020 | mahesh |

ಕ್ಯಾಲಿಫೋರ್ನಿಯಾ: ಕೋವಿಡ್‌ ಸಂಕಷ್ಟದಿಂದ ಹೈರಾಣವಾಗಿರುವ ವಿಶ್ವದ ದೊಡ್ಡಣ್ಣನಿಗೆ ಆರೋಗ್ಯ ಬಿಕ್ಕಟ್ಟಿನೊಂದಿಗೆ ಪ್ರಾಕೃತಿಕ ವಿಕೋಪದ ಸಮಸ್ಯೆಯೂ ಬೆನ್ನ ಬಿಡದಂತೆ ಕಾಡುತ್ತಿದೆ.

Advertisement

ಕೇಸರಿ ಬಣ್ಣಕ್ಕೆ ತಿರುಗಿದ ಆಕಾಶ
ಅಮೆರಿಕದ ಕ್ಯಾಲಿಫೋರ್ನಿಯಾ ಭಾಗಗಳಲ್ಲಿ ನಿರಂತವಾಗಿ ಕಾಳ್ಗಿಚ್ಚು ಕಾಣಿಸಿಕೊಳ್ಳುತ್ತಿದ್ದು, ಒಂದು ಪ್ರದೇಶದಿಂದ ಮತ್ತೂಂದು ಪ್ರದೇಶಕ್ಕೆ ವ್ಯಾಪಕವಾಗಿ ಹರಡುತ್ತಲ್ಲೇ ಇದೆ. ಈ ಹಿನ್ನೆಲೆಯಲ್ಲಿಯೇ ಇಲ್ಲಿನ ಸ್ಯಾನ್‌ಫ್ರಾನ್ಸಿಸ್ಕೋ ಹಾಗೂ ಕ್ಯಾಲಿಫೋರ್ನಿಯಾ ಪ್ರದೇಶಗಳಲ್ಲಿ ಆಕಾಶ ಕೇಸರಿ ಬಣ್ಣಕ್ಕೆ ತಿರುಗಿದ್ದು, ಕಳೆದೊಂದು ವಾರದಿಂದ ಈ ವಿಚಿತ್ರ ಘಟನೆ ಉಂಟಾಗಿದೆ.

ಕಾರಣವೇನು ?
ಈ ಪ್ರಕೃತಿ ಅಸಮತೋಲನಕ್ಕೆ ಕ್ಯಾಲಿಫೋರ್ನಿಯಾದಲ್ಲಿ ಹೊತ್ತಿ ಉರಿಯುತ್ತಿರುವ ಕಾಳ್ಗಿಚ್ಚು ಕಾರಣವಾಗಿದ್ದು, ಈಗಾಗಲೇ ಬಿರುಗಾಳಿಗೆ ಅಮೆರಿಕದ ಉತ್ತರ ಭಾಗದಲ್ಲಿ ಕ್ಯಾಲಿಫೋರ್ನಿಯಾದ 30ಕ್ಕೂ ಹೆಚ್ಚು ಕಡೆ ಕಾಡ್ಗಿಚ್ಚು ಹೊತ್ತಿ ಉರಿದಿದೆ. ಇನ್ನು ಪರಿಸ್ಥಿತಿ ಹೀಗೆ ಮುಂದುವರೆದರೆ 2049ರ ವೇಳೆಗೆ ಸ್ಯಾನ್‌ಫ್ರಾನ್ಸಿಸ್ಕೋನಲ್ಲಿ ಹವಮಾನ ವೈಪರೀತ್ಯ ಸಮಸ್ಯೆ ಕಾಡಲಿದೆ ಎಂದು ಅಧ್ಯಯನ ವರದಿ ಹೇಳಿದೆ.

3 ವಾರಗಳಿಂದ ಹರಡುತ್ತಲ್ಲೇ ಇದೆ
ಉತ್ತರ ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು ಮೂರು ವಾರಗಳಿಗಿಂತ ಹರಡುತ್ತಲೇ ಸಾಗಿದ್ದು, ಹೆಚ್ಚಿನ ಅನಾಹುತವಾಗುವ ಸಂಭವವಿದೆ. ಇದಾಗಲೇ ಅರಣ್ಯದಲ್ಲಿ ಇರುವ ವನ್ಯಮೃಗಗಳು ದಹಿಸಿ ಹೋಗಿದ್ದು, ಎಂಟು ರಾಷ್ಟ್ರೀಯ ಅರಣ್ಯ ಪ್ರದೇಶಗಳನ್ನು ಮುಚ್ಚಲಾಗಿದೆ.

2 ದಶಲಕ್ಷ ಎಕರೆ ಅರಣ್ಯ ಪ್ರದೇಶ ವಿನಾಶ
ಕಳೆದ ವಾರವಷ್ಟೇ ಸುಮಾರು ಎರಡು ದಶಲಕ್ಷ ಎಕರೆಯಷ್ಟು ಅರಣ್ಯ ಪ್ರದೇಶ ಬೆಂಕಿಯಲ್ಲಿ ದಹಿಸಿ ಹೋಗಿತ್ತು. ಇದೀಗ ಸ್ಯಾಕ್ರಾಮೆಂಟೊದ ಉತ್ತರಕ್ಕೆ ಕಾಳ್ಗಿಚ್ಚು ರೌದ್ರಾವತಾರ ತೋರಿದ್ದು, ನಿನ್ನೆ ಒಂದೇ ದಿನ ಮೂರು ಮಂದಿಯನ್ನು ಬಲಿ ಪಡೆದಿದೆ. ಇಲ್ಲಿಯವರೆಗೆ ಕಾಳ್ಗಿಚ್ಚಿನಿಂದ ಸತ್ತವರ ಸಂಖ್ಯೆ 11ಕ್ಕೆ ಏರಿದೆ.

Advertisement

ಕಳವಳ ವ್ಯಕ್ತಪಡಿಸಿದ ಒಬಾಮಾ
ಕಾಳ್ಗಿಚ್ಚಿನ ಸಮಸ್ಯೆಯಿಂದ ಹಗಲಲ್ಲೂ ರಾತ್ರಿಯ ವಾತಾವರಣ ಕಂಡುಬರುತ್ತಿದೆ. ಇದರ ಫೋಟೋವನ್ನು ಟ್ವಿಟರ್‌ ಮೂಲಕ ಹಂಚಿಕೊಂಡಿರುವ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್‌ ಒಬಾಮಾ ಕಳವಳ ವ್ಯಕ್ತಪಡಿಸಿದ್ದಾರೆ, ಜತೆಗೆ ಎಚ್ಚರಿಕೆಯನ್ನೂ ನೀಡಿದ್ದಾರೆ. ಪ್ರತಿ ಘಟನೆಗಳೂ ಹವಾಮಾನದ ಮೇಲೆ ಪರಿಣಾಮ ಬೀರುತ್ತವೆ ಎಂಬುದಕ್ಕೆ ಈ ಅವಘಡಗಳೇ ಸಾಕ್ಷಿ ಎಂದಿರುವ ಒಬಾಮಾ ಪರಿಸರವನ್ನು ನಾವೆಷ್ಟು ಕಾಳಜಿಯಿಂದ ನೋಡಿಕೊಳ್ಳಬೇಕು ಎನ್ನುವುದನ್ನು ಇದು ಸೂಚಿಸುತ್ತದೆ. ಪರಿಸರದ ಮೇಲೆ ಪ್ರತಿಕೂಲ ಉಂಟಾಗದಂತೆ ಎಚ್ಚರಿಕೆ ವಹಿಸಬೇಕು. ಇಲ್ಲದಿದ್ದರೆ ಹೇಗೆ ಅವಘಡಗಳು ಸಂಭವಿಸುತ್ತವೆ ಎನ್ನುವುದಕ್ಕೆ ಇದು ಉದಾಹರಣೆ ಎಂದಿದ್ದಾರೆ.

ಬೆಂಕಿಯು 24 ಗಂಟೆಗಳಲ್ಲಿ ಸುಮಾರು 400 ಚದರ ಮೈಲಿ (1,036 ಚದರ ಕಿಲೋಮೀಟರ್‌) ಹರಡಿದೆ ಎಂದು ಲಾಸ್‌ ಏಂಜಲೀಸ್‌ನ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಹವಾಮಾನ ವಿಜ್ಞಾನಿ ಡೇನಿಯಲ್‌ ನ್‌ ಹೇಳಿದ್ದಾರೆ. ಸಮೀಪ ಇರುವ ವಿದ್ಯುತ್‌ ಪರಿಕರಗಳು ಸುಟ್ಟು ಕರಕಲಾಗಿವೆ.

 

Advertisement

Udayavani is now on Telegram. Click here to join our channel and stay updated with the latest news.

Next