Advertisement

Samvidhan Sadan: ಹಳೆ ಸಂಸತ್ ಕಟ್ಟಡಕ್ಕೆ ಹೊಸ ಹೆಸರು ಬಹಿರಂಗಪಡಿಸಿದ ಪ್ರಧಾನಿ

03:01 PM Sep 19, 2023 | Team Udayavani |

ನವದೆಹಲಿ: ಸೋಮವಾರದಂದು ಹಳೆ ಸಂಸತ್‌ ಭವನದಲ್ಲಿ ಲೋಕಸಭೆ ಮತ್ತು ರಾಜ್ಯಸಭೆಯ ಕೊನೆಯ ಕಲಾಪಗಳು ನಡೆದ ಬಳಿಕ ಮಂಗಳವಾರ ಉಭಯ ಸದನಗಳು ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡಿದ್ದು ಇದಕ್ಕೂ ಮೊದಲು ಹಳೆಯ ಸಂಸದ್ ಕಟ್ಟಡದಲ್ಲಿ ನೆರವೇರಿದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಇತಿಹಾಸ ಪುಟ ಸೇರಲಿರುವ ಹಳೆಯ ಸಂಸತ್ ಭವನಕ್ಕೆ ಹೊಸದೊಂದು ಹೆಸರನ್ನು ಬಹಿರಂಗಪಡಿಸಿದ್ದಾರೆ.

Advertisement

ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ನೂತನ ಕಟ್ಟಡಕ್ಕೆ ಸ್ಥಳಾಂತರಗೊಳ್ಳುವ ಮುನ್ನ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ ಐದು ದಿನಗಳ ಕಾಲ ನಡೆದ ವಿಶೇಷ ಸಂಸತ್ ಅಧಿವೇಶನದ ಎರಡನೇ ದಿನವಾದ ಇಂದು ಗಣೇಶ ಚತುರ್ಥಿಯ ಶುಭ ಸಂದರ್ಭದಲ್ಲಿ ಹೊಸ ಸಂಸತ್ ಕಟ್ಟಡಕ್ಕೆ ಸ್ಥಳಾಂತರಗೊಂಡಿದ್ದೇವೆ ಎಂದು ಹೇಳಿದರು.

ಬಳಿಕ ಮಾತನಾಡಿದ ಪ್ರಧಾನಿ ಕಳೆದ 75 ವರ್ಷಗಳಿಂದ ಸಂಸತ್ ಅಧಿವೇಶನಗಳು ನಡೆಯುತ್ತಿರುವ ಕಟ್ಟಡವನ್ನು ಹಳೆಯ ಕಟ್ಟಡ ಎಂದು ಸುಮ್ಮನೆ ಉಲ್ಲೇಖಿಸಿ ಘನತೆಗೆ ಕುಂದು ಬರಬಾರದು ಹಾಗಾಗಿ ಹಳೆ ಸಂಸತ್ ಕಟ್ಟಡಕ್ಕೆ ‘ಸಂವಿಧಾನ ಸದನ್’ ಎಂದು ನಾಮಕರಣ ಮಾಡಲು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಸಲಹೆ ನೀಡಿದ್ದಾರೆ.

ಈ ಕಟ್ಟಡವನ್ನು ‘ಸಂವಿಧಾನ ಸದನ್’ ಎಂದು ಉಲ್ಲೇಖಿಸುವುದು ಸಂಸತ್ತಿನಲ್ಲಿ ಇತಿಹಾಸ ನಿರ್ಮಿಸಿದ ನಾಯಕರಿಗೆ ಗೌರವ ಸಲ್ಲಿಸುತ್ತದೆ ಎಂದು ಪ್ರಧಾನಿ ಹೇಳಿದರು. ಭವಿಷ್ಯದ ಪೀಳಿಗೆಗೆ ಈ ವರ್ತಮಾನವನ್ನು ನೀಡುವ ಅವಕಾಶವನ್ನು ನಾವು ಬಿಡಬಾರದು ಎಂದು ಅವರು ಹೇಳಿದರು.

ಪ್ರಧಾನಿ ಭಾಷಣದ ಬಳಿಕ ಪ್ರಧಾನಿ ಮೋದಿ ಮತ್ತು ಎಲ್ಲಾ ಸಂಸದರು ಹಳೆಯ ಕಟ್ಟಡದಿಂದ ಹೊಸ ಕಟ್ಟಡಕ್ಕೆ ನಡೆದು ಸಾಗಿದರು. ಹೊಸ ಸಂಸತ್ ಭವನದ ಉದ್ಘಾಟನೆಯ ದಿನದಂದು ಎಲ್ಲಾ ಸಂಸದರು ಸಂವಿಧಾನದ ಪ್ರತಿ, ಸಂಸತ್ತಿಗೆ ಸಂಬಂಧಿಸಿದ ಪುಸ್ತಕಗಳು, ಸ್ಮರಣಾರ್ಥ ನಾಣ್ಯ ಮತ್ತು ಅಂಚೆಚೀಟಿಗಳನ್ನು ಒಳಗೊಂಡ ಉಡುಗೊರೆಯನ್ನು ಸ್ವೀಕರಿಸಿದರು.

Advertisement

ಹೊಸ ಸಂಸತ್ ಕಟ್ಟಡಕ್ಕೆ ಸ್ಥಳಾಂತರ ಆಗುವುದರ ಜೊತೆಗೆ ಉಭಯ ಸದನಗಳ ಸಂಸತ್ತಿನ ಸಿಬ್ಬಂದಿಯ ಸಮವಸ್ತ್ರದಲ್ಲೂ ಬದಲಾವಣೆ ತರಲಿದೆ. ಚೇಂಬರ್ ಅಟೆಂಡೆಂಟ್‌ಗಳು, ಅಧಿಕಾರಿಗಳು, ಭದ್ರತಾ ಸಿಬ್ಬಂದಿ, ಚಾಲಕರು ಮತ್ತು ಮಾರ್ಷಲ್‌ಗಳು ವಿಶೇಷ ಅಧಿವೇಶನದಲ್ಲಿ ಹೊಸ ಸಮವಸ್ತ್ರವನ್ನು ಧರಿಸಲಿದ್ದಾರೆ.

ಇದನ್ನೂ ಓದಿ: Cauvery Water Dispute:ಕಾವೇರಿ ಬಿಕ್ಕಟ್ಟು ಚರ್ಚಿಸಲು ನಾಳೆ ದೆಹಲಿಯಲ್ಲಿ ಮಹತ್ವದ ಸಭೆ

Advertisement

Udayavani is now on Telegram. Click here to join our channel and stay updated with the latest news.

Next