Advertisement
ಕೆಲವು ಮೊಬೈಲ್ ಫೋನ್ ಕೊಳ್ಳುವಾಗ ಗ್ರಾಹಕರು ಈ ಕಂಪೆನಿ ಒಳ್ಳೆಯದೇ? ಗುಣಮಟ್ಟ ಚೆನ್ನಾಗಿದೆಯೇ? ಅಯ್ಯೋ! ಅದರ ಸಹವಾಸ ಬೇಡಪ್ಪ ಎಂದೆಲ್ಲಾ ತಕರಾರು ತೆಗೆಯುತ್ತಾರೆ. ಆದರೆ ಸ್ಯಾಮ್‌ಸಂಗ್ ಹೆಸರು ಹೇಳಿದರೆ ಸಾಮಾನ್ಯ ಗ್ರಾಹಕ ಅನುಮಾನ ವ್ಯಕ್ತಪಡಿಸುವುದಿಲ್ಲ. ಹಲವಾರು ಮಂದಿ, ಫೀಚರ್ ಕಡಿಮೆ ಇದ್ದರೂ ಪರವಾಗಿಲ್ಲ ನನಗೆ ಸ್ಯಾಮ್‌ಸಂಗ್ ಆದರೆ ಓಕೆ ಎನ್ನುತ್ತಾರೆ. ಕೊರಿಯಾದ ಸ್ಯಾಮ್‌ಸಂಗ್ ಹೀಗೆ ತನ್ನ ಹೆಸರು ಉಳಿಸಿಕೊಂಡು ಬಂದಿದೆ.
Related Articles
ಹಿಂಬದಿ ಕ್ಯಾಮರಾ ನಾಲ್ಕು ಲೆನ್ಸ್‌ಗಳನ್ನು ಹೊಂದಿದೆ. 64 ಮೆಗಾ ಪಿಕ್ಸಲ್ ಮುಖ್ಯ ಕ್ಯಾಮರಾ. 8 ಮೆ.ಪಿ + 5 ಮೆಪಿ. +5 ಮೆ.ಪಿ. ಹೆಚ್ಚುವರಿ ಲೆನ್ಸ್‌ಗಳಿವೆ. ಮುಂಬದಿ ಸೆಲ್ಫಿà ಕ್ಯಾಮರಾ 32 ಮೆಗಾಪಿಕ್ಸಲ್‌ಗಳನ್ನು ಹೊಂದಿದೆ.
Advertisement
ಪರದೆ:6.4 ಇಂಚಿನ ಅಮೋಲೆಡ್ ಪರದೆಯನ್ನು ಈ ಮೊಬೈಲ್ ಹೊಂದಿದೆ. ಎಫ್ಎಚ್‌ಡಿ ಪ್ಲಸ್ ಡಿಸ್‌ಪ್ಲೇ ಇದ್ದು, ಪರದೆಯ ಮಧ್ಯದಲ್ಲಿ ಸೆಲ್ಫಿà ಕ್ಯಾಮರಾಕ್ಕಾಗಿ ನೀರಿನ ಹನಿ ಹೋಲುವ ಜಾಗವನ್ನು ಖಾಲಿ ಬಿಡಲಾಗಿದೆ. ಪರದೆಗೆ ಗೊರಿಲ್ಲಾ ಗಾಜಿನ ರಕ್ಷಣೆಯನ್ನು ನೀಡಿದೆ. ಪ್ರೊಸೆಸರ್:
ಈ ಮೊಬೈಲ್‌ಗೆ ಸ್ಯಾಮ್‌ಸಂಗ್‌ನ ಸ್ವಂತ ತಯಾರಿಕೆಯಾದ ಎಕ್ಸಿನಾಸ್ 9611 ಎಂಟು ಕೋರ್‌ಗಳ ಪ್ರೊಸೆಸರ್ ಅಳವಡಿಸಲಾಗಿದೆ. ಅಂಡ್ರಾಯ್ಡ 10 ಕಾರ್ಯಾಚರಣೆ ವ್ಯವಸ್ಥೆ ಒಳಗೊಂಡಿದೆ. ಭರ್ಜರಿ ಬ್ಯಾಟರಿ:
ಒಂದು ಮೊಬೈಲ್‌ನಲ್ಲಿ 4 ಸಾವಿರ ಎಂಎಎಚ್ ಬ್ಯಾಟರಿ ಇದ್ದರೆ ಗ್ರಾಹಕನಿಗೆ ಸ್ವಲ್ಪ ಸಮಾಧಾನ. ಸ್ಯಾಮ್‌ಸಂಗ್ ಎಂ.31 ಮೊಬೈಲು 6 ಸಾವಿರ ಎಂಎಎಚ್ ಬ್ಯಾಟರಿ ಹೊಂದಿದೆ!ಯುಎಸ್‌ಬಿ ಟೈಪ್ ಸಿ ಪೋರ್ಟ್ ಅನ್ನು ಹೊಂದಿದ್ದು, ಇದಕ್ಕೆ 15 ವ್ಯಾಟ್ಸ್‌ನ ವೇಗದ ಚಾರ್ಜರ್ ನೀಡಲಾಗಿದೆ. 6 ಸಾವಿರ ಎಂಎಎಚ್ ಬ್ಯಾಟರಿ ಕೊಟ್ಟು ಅದಕ್ಕೆ ವೇಗದ ಚಾರ್ಜಿಂಗ್ ಸೌಲಭ್ಯ ನೀಡದಿದ್ದರೆ, ಗ್ರಾಹಕ ರಾತ್ರಿಯಿಡೀ ಮೊಬೈಲ್ ಚಾರ್ಜ್ ಮಾಡಬೇಕಾಗುತ್ತದೆ! ಸದ್ಯ! ಸ್ಯಾಮ್‌ಸಂಗ್ ವೇಗದ ಚಾರ್ಜರ್ ನೀಡಿದೆ! ಮೊಬೈಲ್‌ನ ಹಿಂಬದಿ ಬೆರಳಚ್ಚು ಸ್ಕ್ಯಾನರ್ ನೀಡಲಾಗಿದೆ. ಈ ಮೊಬೈಲ್ ಕಪ್ಪು ಮತ್ತು ನೀಲಿ ಬಣ್ಣಗಳಲ್ಲಿ ಲಭ್ಯ. ಅಮೆಜಾನ್.ಇನ್ ಮತ್ತು ಸ್ಯಾಮ್‌ಸಂಗ್ ಸ್ಟೋರ್‌ಗಳಲ್ಲಿ ಲಭ್ಯ. ನೀಲಿ ಬಣ್ಣದ ಸ್ಯಾಮ್‌ಸಂಗ್ ಮೊಬೈಲನ್ನು ನೀಲ ಮೇಘ ಸ್ಯಾಮ ಎನ್ನಬಹುದೇ?!! ಮನೆ ಬಾಗಿಲಿಗೇ ಮೊಬೈಲ್ ರಿಪೇರಿ!
ಒನ್ ಪ್ಲಸ್ ಒಂದು ಹೆಜ್ಜೆ..
ಗ್ರಾಹಕರು ಮೊಬೈಲ್ ಕೊಳ್ಳುವಾಗ ಮುಖ್ಯವಾಗಿ ಗಮನಿಸಬೇಕಾದ್ದು ತಾನು ಕೊಳ್ಳುವ ಮೊಬೈಲ್ ಕಂಪೆನಿಯ ಸರ್ವೀಸ್ ಸೆಂಟರ್ (ರಿಪೇರಿ ಸೇವಾ ಕೇಂದ್ರ) ತನಗೆ ಹತ್ತಿರವಾದ ಊರಿನಲ್ಲಿದೆಯೇ? ಎಂದು. ಇಂದು ಅನೇಕ ಕಂಪೆನಿಗಳು ಜಿಲ್ಲಾ ಕೇಂದ್ರಗಳಲ್ಲಿ ಸರ್ವೀಸ್ ಸೆಂಟರ್ ಹೊಂದಿವೆ. ಪ್ರೀಮಿಯಂ ಮೊಬೈಲ್ ಮಾರಾಟದಲ್ಲಿ ಭಾರತದಲ್ಲಿ ನಂ.1 ಆಗಿರುವ ಒನ್‌ಪ್ಲಸ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಇದೇ ಮೊದಲ ಬಾರಿಗೆ ಮನೆ ಬಾಗಿಲಿಗೆ ಹೋಗಿ ರಿಪೇರಿ ಮಾಡುವ ಸೇವೆಯನ್ನು ಘೋಷಿಸಿದೆ! ಗೂಗಲ್ ಪ್ಲೇಸ್ಟೋರ್‌ನಲ್ಲಿ ಲಭ್ಯವಿರುವ ಒನ್‌ಪ್ಲಸ್ ಕೇರ್ ಆ್ಯಪ್ ಅನ್ನು ಗ್ರಾಹಕರು ಡೌನ್‌ಲೋಡ್ ಮಾಡಿಕೊಂಡು ಈ ಸೇವೆಯನ್ನು ಪಡೆಯಬಹುದಾಗಿದೆ. ಅದರಲ್ಲಿ ಗ್ರಾಹಕರು ತಮ್ಮ ಡಿವೈಸ್‌ಗಳನ್ನು ರಿಪೇರಿ ಮಾಡಲು ಇಂಜಿನಿಯರ್ ಭೇಟಿ ನೀಡಬೇಕಾದ ಸಮಯವನ್ನು ನಮೂದು ಮಾಡುವ ಅವಕಾಶವಿದೆ. ಇದಲ್ಲದೇ, ಒನ್‌ಪ್ಲಸ್ ತನ್ನ ಗ್ರಾಹಕರಿಗೆ ಉಚಿತ ಪಿಕ್-ಅಪ್ ಮತ್ತು ಡ್ರಾಪ್-ಆಫ್ ಸೇವೆಯನ್ನೂ ನೀಡುತ್ತಿದೆ. -ಕೆ.ಎಸ್. ಬನಶಂಕರ ಆರಾಧ್ಯ