Advertisement

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

01:13 AM Dec 23, 2024 | Team Udayavani |

ಹೊಸದಿಲ್ಲಿ: ಮೊಬೈಲ್‌ ತಯಾರಕ ಸಂಸ್ಥೆ ಸ್ಯಾಮ್‌ಸಂಗ್‌ ಕೆಲವು ಮಂದಿ ಉದ್ಯೋಗಿಗಳನ್ನು ವಜಾ ಮಾಡಿದೆ. ಜ.22ರಂದು ಬಿಡುಗಡೆಯಾಗಲಿರುವ ಗ್ಯಾಲಕ್ಸಿ ಎಸ್‌ 25 ಮೊಬೈಲ್‌ನ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸೋರಿಕೆ ಆಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಈ ಕ್ರಮ ಕೈಗೊಳ್ಳಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದ ಫೋಟೋಗಳ ಮಾಹಿತಿ ಸಂಸ್ಥೆಗೆ ಲಭಿಸಿದೆ. ಅದರಲ್ಲಿ ಒಂದು ಫೋಟೋದಲ್ಲಿ ಪ್ರತೀ ಉದ್ಯೋಗಿಗೆ ನೀಡಲಾಗಿದ್ದ ಪರೀಕ್ಷಾರ್ಥ ಮಾದರಿಯ ಸಂಖ್ಯೆ ಇದ್ದು, ಆ ಸಂಖ್ಯೆಯ ಮಾದರಿ ಯಾವ ಉದ್ಯೋಗಿ­ಯದ್ದು ಎಂದು ಪತ್ತೆ ಹಚ್ಚಿ ವಜಾಗೊಳಿಸಲಾಗಿದೆ ಎನ್ನಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next