ನವದೆಹಲಿ: ಭಾರತದ ನಂ. 1 ಟಿವಿ ಬ್ರ್ಯಾಂಡ್ ಆಗಿರುವ ಸ್ಯಾಮ್ ಸಂಗ್, ತನ್ನ ಅಲ್ಟ್ರಾ ಪ್ರೀಮಿಯಂ 2022 ರ ನಿಯೋ ಕ್ಯುಎಲ್‍ಡಿ 8ಕೆ ಮತ್ತು ನಿಯೋ ಕ್ಯುಎಲ್ ಇಡಿ ಟಿವಿ ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.
ನಿಯೋ ಕ್ಯುಎಲ್ ಇಡಿ ಶ್ರೇಣಿಯನ್ನು ಗೇಮ್ ಕನ್ಸೋಲ್, ವರ್ಚುವಲ್ ಪ್ಲೇಗ್ರೌಂಡ್ ಗಳಲ್ಲಿ ಟಿವಿಗಿಂತ ಹೆಚ್ಚು ಅನುಕೂಲಗಳಿರುವಂತೆ ನ್ಯಾಸಗೊಳಿಸಲಾಗಿದೆ.
ಹೊಚ್ಚ ಹೊಸ ನಿಯೋ ಕ್ಯು ಎಲ್ ಇ ಡಿ ಟಿವಿ ಶ್ರೇಣಿ ಕ್ವಾಂಟಮ್ ಮ್ಯಾಟ್ರಿಕ್ಸ್ ತಂತ್ರಜ್ಞಾನ, ರಿಯಲ್ ಡೆಪ್ತ್ ಎನ್‍ಹಾನ್ಸರ್, ಡಾಲ್ಬಿ ಅಟ್ಮಾಸ್, ಎಐ ಧ್ವನಿ ಬೆಂಬಲ, ಪೂರ್ವನಿರ್ಮಿತ ಹೋಂ ಐಓಟಿ ಇತ್ಯಾದಿಗಳಿಂದ ಸುಸಜ್ಜಿತವಾಗಿದೆ. ಈ ಟೆಲಿವಿಷನ್ ಗಳು ಸ್ಮಾರ್ಟ್ ಮತ್ತು ಇಂಟೆಲಿಜೆಂಟ್ ವೈಶಿಷ್ಟ್ಯಗಳನ್ನು ಹೊಂದಿವೆ.
ಅತ್ಯಾಧುನಿಕ ನಿಯೋ ಕ್ಯುಎಲ್ ಇಡಿ 8ಕೆ ಸರಣಿ, 65-ಇಂಚಿನಿಂದ 85-ಇಂಚಿನವರೆಗಿನ ಸ್ಕ್ರೀನ್ ಗಾತ್ರಗಳೊಂದಿಗೆ ಮೂರು ಸರಣಿಗಳಲ್ಲಿ ಲಭ್ಯವಿದೆ. ನಿಯೋ ಕ್ಯುಎಲ್‌ಇಡಿ ಟಿವಿ ಯು 50-ಇಂಚಿನಿಂದ 85-ಇಂಚಿನವರೆಗಿನ ಸ್ಕ್ರೀನ್ ಗಾತ್ರಗಳೊಂದಿಗೆ ಮೂರು ಸರಣಿಗಳಲ್ಲಿ ಲಭ್ಯ. ಹೊಸ ಶ್ರೇಣಿಯ ನಿಯೋ ಕ್ಯುಎಲ್‌ಇಡಿ ಟಿವಿಗಳು ಎಲ್ಲಾ ಪ್ರಮುಖ ರೀಟೇಲ್ ಅಂಗಡಿಗಳಲ್ಲಿ ಮತ್ತು ಆನ್‌ಲೈನ್‌ನಲ್ಲಿ ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್ ಹಾಗೂ ಸ್ಯಾಮ್ ಸಂಗ್‌ನ ಅಧಿಕೃತ ಆನ್‌ಲೈನ್ ಸ್ಟೋರ್ ಸ್ಯಾಮ್ ಸಂಗ್ ಶಾಪ್‌ನಲ್ಲಿ ದೊರಕುತ್ತವೆ.
ಬೆಲೆ ಮತ್ತು ಲಭ್ಯತೆ :
ನಿಯೋ ಕ್ಯುಎಲ್ ಇಡಿ 8ಕೆ ಟಿವಿಗಳು: ಕ್ಯುಎನ್900ಬಿ(85-ಇಂಚು), ಕ್ಯುಎನ್800ಬಿ(65- ಮತ್ತು 75-ಇಂಚು), ಕ್ಯುಎನ್700ಬಿ(65-ಇಂಚು) ಮಾದರಿಗಳಲ್ಲಿ ಲಭ್ಯ. ರೂ 3,24,990 ರೂ.ಗಳಿಂದ ಪ್ರಾರಂಭವಾಗುತ್ತದೆ.
ನಿಯೋ ಕ್ಯುಎಲ್ ಇಡಿ ಟಿವಿಗಳು, ಕ್ಯುಎನ್95ಬಿ(55- 65ಇಂಚು), ಕ್ಯುಎನ್90ಬಿ (85-, 75-, 65-, 55-, 50-ಇಂಚು), ಕ್ಯುಎನ್85ಬಿ (55-, 65-ಇಂಚು) ಮಾದರಿಗಳ ಬೆಲೆ ರೂ. 1,14,990 ರಿಂದ ಪ್ರಾರಂಭವಾಗಲಿದೆ.
ಈ ಟಿವಿಗಳನ್ನು ಖರೀದಿಸುವ ಗ್ರಾಹಕರಿಗೆ 10 ವರ್ಷಗಳ ಸ್ಕ್ರೀನ್ ಬರ್ನಿಂಗ್ ರಹಿತ ವಾರಂಟಿ ನೀಡಲಾಗುತ್ತದೆ.