Advertisement
ಇದರ ದರ 6 ಜಿಬಿ ರ್ಯಾಮ್ ಮತ್ತು 128 ಜಿಬಿ ಆಂತರಿಕ ಸಂಗ್ರಹ ಮಾದರಿಗೆ 17,999 ರೂ. ಹಾಗೂ 8 ಜಿಬಿ ರ್ಯಾಮ್ ಮತ್ತು 128 ಜಿಬಿ ಆಂತರಿಕ ಸಂಗ್ರಹ ಮಾದರಿಗೆ 19,499 ರೂ. ಇದೆ.
Related Articles
Advertisement
ಪ್ರೊಸೆಸರ್ : ಇದರಲ್ಲಿ ಸ್ಯಾಮ್ಸಂಗ್ ತಯಾರಿಕೆಯ ಎಕ್ಸಿನಾಸ್ 1280 ಪ್ರೊಸೆಸರ್ ಅಳವಡಿಸಲಾಗಿದೆ.ನ ಇದು 12 ಬ್ಯಾಂಡ್‌ಗಳ 5ಜಿ ನೆಟ್ ವರ್ಕ್ ಅನ್ನು ಬೆಂಬಲಿಸುತ್ತದೆ. 16 ಜಿಬಿವರೆಗೆ ರ್ಯಾಮ್ ವಿಸ್ತರಣೆ ಮಾಡಿಕೊಳ್ಳಬಹುದು. 5 ಎನ್‌ಎಂ ಪ್ರೊಸೆಸರ್ ಇದಾಗಿದ್ದು, ಮೊಬೈಲ್ ಹೆಚ್ಚು ಬಿಸಿಯಾಗದಂತೆ ತಡೆಯಲು ಪವರ್ ಕೂಲಿಂಗ್ ತಂತ್ರಜ್ಞಾನ ಅಳವಡಿಸಲಾಗಿದೆ. ಒಂದ್ ಮಧ್ಯಮ ದರ್ಜೆಯ ಫೋನಿನಲ್ಲಿ ನಿರೀಕ್ಷಿಸಬಹುದಾದ ವೇಗದ ಕಾರ್ಯಾಚರಣೆ ತೋರುತ್ತದೆ. ಆಂಡ್ರಾಯ್ಡ್ 12 ಕಾರ್ಯಾಚರಣೆ ವ್ಯವಸ್ಥೆ ಇದ್ದು, ಇದಕ್ಕೆ ಸ್ಯಾಮ್‌ಸಂಗ್ ನ ಒನ್ ಯೂಐ 4 ಸೇರಿಸಲಾಗಿದೆ.
ಇದನ್ನೂ ಓದಿ : ಇತಿಹಾಸ ಓದಿಕೊಳ್ಳಿ : ಸಚಿವ ಕೋಟ ಟ್ವೀಟ್ ಗೆ ದಿನೇಶ್ ಗುಂಡೂರಾವ್ ತಿರುಗೇಟು
ಕ್ಯಾಮರಾ : 50 ಮೆ.ಪಿ ಮುಖ್ಯ ಕ್ಯಾಮರಾ ಇದ್ದು, ಇದಕ್ಕೆ 5 ಮೆಪಿ, 2 ಮೆಪಿ, 2 ಮೆಪಿ ಹೆಚ್ಚುವರಿ ಲೆನ್ಸ್ ಗಳನ್ನು ನೀಡಲಾಗಿದೆ. ಮುಂಬದಿ ಕ್ಯಾಮರಾ 8 ಮೆ.ಪಿ. ಇದೆ. ಹಿಂಬದಿ ಕ್ಯಾಮರಾ ಚಿತ್ರ ಹಾಗೂ ವಿಡಿಯೋ ಗುಣಮಟ್ಟ ಈ ದರಕ್ಕೆ ಹೋಲಿಸಿದರೆ ಪರವಾಗಿಲ್ಲ. ಹೊರಾಂಗಣದಲ್ಲಿ ಉತ್ತಮವಾಗಿ ಚಿತ್ರಗಳು ಮೂಡಿಬಂದವು. ಮಂದ ಬೆಳಕಿನ ಚಿತ್ರಗಳು ಇನ್ನಷ್ಟು ಸ್ಪಷ್ಟತೆ ಬಯಸುತ್ತವೆ. ಮುಂಬದಿ ಕೇವಲ 8 ಮೆ.ಪಿ. ಲೆನ್ಸ್ ಇದ್ದು, ಅದರಲ್ಲಿ ಹೆಚ್ಚಿನ ಗುಣಮಟ್ಟ ನಿರೀಕ್ಷಿಸಲಾಗದು. ಕನಿಷ್ಟ 16 ಮೆಪಿ ಕ್ಯಾಮರಾ ಅಗತ್ಯವಿತ್ತು.
ಬ್ಯಾಟರಿ : ಸ್ಯಾಮ್ ಸಂಗ್ ಮೊಬೈಲ್ ಗಳ ಪ್ಲಸ್ ಪಾಯಿಂಟ್ ಎಂದರೆ ದೊಡ್ಡ ಬ್ಯಾಟರಿ. ಇದರಲ್ಲಿ 6000 ಎಂಎಎಚ್ ಬ್ಯಾಟರಿ ಇದೆ. ಎರಡು ದಿನಗಳ ಸಾಮಾನ್ಯ ಬಳಕೆಗೆ ಅಡ್ಡಿಯಿಲ್ಲ. ಆದರೆ ಇದರ ಜೊತೆ ಚಾರ್ಜರ್ ಕೊಟ್ಟಿಲ್ಲ. 25 ವ್ಯಾಟ್ಸ್ ಚಾರ್ಜರ್ ಅನ್ನು ಇದು ಬೆಂಬಲಿಸುತ್ತದೆ. 25 ವ್ಯಾಟ್ಸ್ ಚಾರ್ಜರ್ ನಲ್ಲಿ 6000 ಎಂಎಎಚ್ ಬ್ಯಾಟರಿ ಪೂರ್ತಿ ಚಾರ್ಜ್ ಆಗಲು 1 ಗಂಟೆ 35 ನಿಮಿಷ ಸಮಯ ಹಿಡಿಯುತ್ತದೆ. 30 ನಿಮಿಷ ಚಾರ್ಜ್ ಮಾಡಿದರೆ 38% ಚಾರ್ಜ್ ಆಗುತ್ತದೆ. 60 ನಿಮಿಷಕ್ಕೆ 73% ಚಾರ್ಜ್ ಆಗುತ್ತದೆ.
ಒಟ್ಟಾರೆ, ಈ ಮೊಬೈಲ್ ಬಗ್ಗೆ ಹೇಳುವುದಾದರೆ 20 ಸಾವಿರ ರೂ.ಗಳೊಳಗೆ 5ಜಿ ಸೌಲಭ್ಯ ಇರುವ ಮೊಬೈಲ್ ಇದು. 5ಜಿ ಇರುವುದರಿಂದ ಪರದೆ, ಪ್ರೊಸೆಸರ್, ವಿನ್ಯಾಸದಲ್ಲಿ ಕೊಂಚ ಹೊಂದಾಣಿಕೆ ಮಾಡಿಕೊಳ್ಳಲಾಗಿದೆ. 5ಜಿ ಇರಬೇಕು. 20 ಸಾವಿರದೊಳಗಿನ ಬಜೆಟ್ ಇದ್ದು, ಸ್ಯಾಮ್ ಸಂಗ್ ಮೊಬೈಲ್ ಬೇಕು ಎನ್ನುವವರು ಇದನ್ನು ಪರಿಗಣಿಸಬಹುದು.
-ಕೆ.ಎಸ್. ಬನಶಂಕರ ಆರಾಧ್ಯ