Advertisement

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ನೋಟ್‌ 10 ಮತ್ತು ನೋಟ್‌ 10 ಪ್ಲಸ್‌ ಬಿಡುಗಡೆ

10:24 AM Aug 13, 2019 | sudhir |

ಎಸ್‌ ಪೆನ್‌ ಎನ್ನುವ ಡಿಜಿಟಲ್‌ ಲೇಖನಿ ಜೊತೆ ಬಿಡುಗಡೆಯಾಗುತ್ತಿರುವ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ನೋಟ್‌, ಸ್ಮಾರ್ಟ್‌ಪೋನುಗಳಲ್ಲಿ ಉತ್ಕೃಷ್ಟ ಗುಣಮಟ್ಟವನ್ನು ಬಯಸುವ ಪ್ರೊಫೆಷಲ್‌ಗ‌ಳು, ಕಲಾವಿದರ ಕುತೂಹಲವನ್ನು ಕೆರಳಿಸಿದೆ. ಈ ಫೋನ್‌ ಭಾರತದಲ್ಲಿ ಅಗಸ್ಟ್‌ 23ರಿಂದ ಲಭ್ಯವಾಗಲಿದೆ.

Advertisement

– ಎಕ್ಸಿನಾಸ್‌ 9845 ಪ್ರೊಸೆಸರ್‌
– 256- 512 ಜಿ.ಬಿ ಇಂಟರ್ನಲ್‌ ಮೆಮೊರಿ
– 1 ಟಿಬಿ ಎಕ್ಸ್‌ಟರ್ನಲ್‌ ಮೆಮೊರಿ ಸಾಮರ್ಥ್ಯ

ವಿಶ್ವದಲ್ಲಿ ಮೊಬೈಲ್‌ ಮಾರಾಟದಲ್ಲಿ ಮೊದಲ ಸ್ಥಾನದಲ್ಲಿರುವ ಸ್ಯಾಮ್‌ಸಂಗ್‌, ತನ್ನ ಎರಡು ಫ್ಲಾಗ್‌ಶಿಪ್‌ (ಅತ್ಯುನ್ನತ ದರ್ಜೆ) ಫೋನ್‌ಗಳನ್ನು ನ್ಯೂಯಾರ್ಕ್‌ನಲ್ಲಿ ಇದೀಗ ತಾನೇ ಬಿಡುಗಡೆ ಮಾಡಿದೆ. ಸ್ಯಾಮ್‌ಸಂಗ್‌ನಲ್ಲಿ ಅತ್ಯುನ್ನತ ದರ್ಜೆಯ ಫೋನ್‌ಗಳನ್ನು ನಿರೀಕ್ಷಿಸುವ, ಹೆಚ್ಚು ಬೆಲೆಯ ಫೋನ್‌ಗಳನ್ನು ಕೊಳ್ಳುವ ವರ್ಗ ಈ ಫೋನ್‌ಗಳಿಗಾಗಿ ಎದುರು ನೋಡುತ್ತಿತ್ತು.

ಗ್ಯಾಲಕ್ಸಿನೋಟ್‌ 10 ಮತ್ತು ಗ್ಯಾಲಕ್ಸಿನೋಟ್‌ 10ಪ್ಲಸ್‌ ಹೆಸರಿನ ಈ ಮೊಬೈಲ್‌ಗ‌ಳು ಭಾರತದಲ್ಲಿ ಆ. 23ರಿಂದ ಮಾರಾಟಕ್ಕೆ ಲಭ್ಯವಾಗುತ್ತವೆ.

ಗ್ರಾಹಕರು ಈ ಫೋನ್‌ಗಳನ್ನು ಈಗ ಮುಂಗಡವಾಗಿ ಬುಕ್ಕಿಂಗ್‌ ಮಾಡಬಹುದು ಈ ಎರಡೂ ಮಾಡೆಲ್‌ಗ‌ಳು, ಮೊಬೈಲ್‌ ಅಂಗಡಿಗಳಲ್ಲಿ ಮಾತ್ರವಲ್ಲದೇ ಫ್ಲಿಪ್‌ಕಾರ್ಟ್‌, ಅಮೆಜಾನ್‌, ಪೇ ಟಿಮ್‌ ಹಾಗೂ ಟಾಟಾ ಕ್ಲಿಕ್‌ ಆನ್‌ಲೈನ್‌ ಸ್ಟೋರ್‌ಗಳಲ್ಲಿ ಸಿಗಲಿವೆ.

Advertisement

ಪ್ಲಸ್‌ ಪಾಯಿಂಟುಗಳು
ಇದು 6.3 ಇಂಚಿನ ಎಫ್ಎಚ್‌ಡಿ ಪ್ಲಸ್‌ ಡೈನಾಮಿಕ್‌ ಅಮೋಲೆಡ್‌ ಪರದೆಯನ್ನು ಹೊಂದಿದೆ. ಸೆಲ್ಫಿà ಕ್ಯಾಮರಾಕ್ಕಾಗಿ ಪಂಚ್‌ ಹೋಲ್‌ ಅನ್ನು ಪರದೆಯ ಮಧ್ಯ ಇಡಲಾಗಿದೆ. ಕೆಳಗೆ ಎಸ್‌ ಪೆನ್‌ ಇಡುವ ಸ್ಲಾಟ್‌ ನೀಡಲಾಗಿದೆ. ಎಸ್‌ ಪೆನ್‌ ಸ್ಯಾಮ್‌ಸಂಗ್‌ ಫೋನ್‌ಗಳ ವಿಶೇಷತೆ. ಪೆನ್‌ನಂತೆಯೇ ಮೊಬೈಲ್‌ನಲ್ಲಿ ನೋಟ್‌ ಬರೆಯಬಹುದು. ಅನೇಕರು, ಎಸ್‌ ಪೆನ್‌ ವಿಶೇಷತೆಗಾಗಿಯೇ ಸ್ಯಾಮ್‌ಸಂಗ್‌ನ ಫ್ಲಾಗ್‌ಶಿಪ್‌ ಫೋನ್‌ ಬಯಸುತ್ತಾರೆ.
ಎರಡೂ ಮಾಡೆಲ್‌ಗ‌ಳಲ್ಲಿ ಪರದೆಯ ಮೇಲೆ ಬೆರಳಚ್ಚು ಸ್ಕ್ಯಾನರ್‌ ಇದೆ.

ಗ್ಯಾಲಕ್ಸಿ ನೋಟ್‌ 10 ಮಾದರಿ 2280×1080 ಪಿಕ್ಸಲ್‌, 401 ಪಿಪಿಐ ಪರದೆ ಹೊಂದಿದೆ. ನೋಟ್‌ 10 ಪ್ಲಸ್‌ ಪರದೆ 498 ಪಿಪಿಐ ಹೊಂದಿದ್ದು, 3040×1440 ಪಿಕ್ಸಲ್‌ ರೆಸ್ಯೂಲೇಷನ್‌ ಒಳಗೊಂಡಿದೆ.

ಗ್ಯಾಲಕ್ಸಿ ನೋಟ್‌ ಟೆನ್‌, 8 ಜಿಬಿ ರ್ಯಾಮ್‌ ಮತ್ತು 256 ಜಿಬಿ ಆಂತರಿಕ ಮೆಮೊರಿ ಹೊಂದಿದೆ. ಸ್ಯಾಮ್‌ಸಂಗ್‌ನ ಮಾತೃ ದೇಶವಾದ ದಕ್ಷಿಣ ಕೊರಿಯಾಕ್ಕೆ 5ಜಿ ಆವೃತ್ತಿ ಸಹ ನೀಡಿದ್ದು, ಆ ಆವೃತ್ತಿಗಳಿಗೆ 12 ಜಿಬಿ ರ್ಯಾಮ್‌ ನೀಡಲಾಗಿದೆ. ಗ್ಯಾಲಕ್ಸಿನೋಟ್‌ 10ಗೆ ಮೆಮೊರಿ ಕಾರ್ಡ್‌ ಆಯ್ಕೆ ಇಲ್ಲ.

ಬ್ಯಾಟರಿ ಸಮಾಚಾರ
ಗ್ಯಾಲಕ್ಸಿನೋಟ್‌ 10 ಪ್ಲಸ್‌ ಗೆ 4300 ಎಂಎಎಚ್‌ ಬ್ಯಾಟರಿ ಇದ್ದು, 45 ವ್ಯಾಟ್‌ ವೇಗದ ಚಾರ್ಜಿಂಗ್‌ ಸೌಲಭ್ಯವಿದೆ. ಗ್ಯಾಲಕ್ಸಿನೋಟ್‌ 10 ಗೆ 3500 ಎಂಎಎಚ್‌ ಬ್ಯಾಟರಿಯಿದ್ದು 25 ವ್ಯಾಟ್‌ ವೇಗದ ಚಾರ್ಜಿಂಗ್‌ ಇದೆ. ಎರಡೂ ಫೋನ್‌ಗಳು ಅಂಡ್ರಾಯ್ಡ 9.0 ಪೀ ಆವೃತ್ತಿ ಹೊಂದಿದ್ದು, ಸ್ಯಾಮ್‌ಸಂಗ್‌ನ ಒನ್‌ ಯುಐ 1.5 ಕಾರ್ಯಾಚರಣೆ ವ್ಯವಸ್ಥೆಯಿದೆ.

ಬೆಲೆ ಇಷ್ಟು
ಎಲ್ಲ ಸರಿ ಇದರ ಬೆಲೆ ಎಷ್ಟು ಎಂಬ ಮುಖ್ಯ ಪ್ರಶ್ನೆ ಬಂದೇ ಬರುತ್ತದೆ. ಸ್ಯಾಮ್‌ಸಂಗ್‌ ಗ್ಯಾಲಕ್ಸಿನೋಟ್‌ ಟೆನ್‌ 8 ಜಿಬಿ ರ್ಯಾಮ್‌ 256 ಜಿಬಿ ಆಂತರಿಕ ಸಂಗ್ರಹದ ಆವೃತ್ತಿಯ ಬೆಲೆ 70 ಸಾವಿರ ರೂ.!

ಸ್ಯಾಮ್‌ಸಂಗ್‌ ಗ್ಯಾಲಕ್ಸಿನೋಟ್‌ 10 ಪ್ಲಸ್‌ ಬೆಲೆ 12 ಜಿಬಿ ರ್ಯಾಮ್‌ ಮತ್ತು 256 ಜಿಬಿ ಆಂತರಿಕ ಸಂಗ್ರಹದ ಮಾದರಿಯ ಬೆಲೆ 80 ಸಾವಿರ ರೂ.! 12 ಜಿಬಿ ರ್ಯಾಮ್‌ ಮತ್ತು 512 ಆಂತರಿಕ ಸಂಗ್ರಹದ ಆವೃತ್ತಿಯ ಬೆಲೆ 90 ಸಾವಿರ ರೂ.!

ಮೆಮೊರಿ ಪವರ್‌
ಗ್ಯಾಲಕ್ಸಿನೋಟ್‌ 10 ಪ್ಲಸ್‌ ಮಾಡೆಲ್‌ ಮೈಕ್ರೋ ಎಸ್‌ಡಿ ಕಾರ್ಡ್‌ (ಮೆಮೊರಿ ಕಾರ್ಡ್‌) ಆಯ್ಕೆ ಹೊಂದಿದೆ. ನೀವು ಅದಕ್ಕೆ 1 ಟಿಬಿಯವರೆಗೂ ಕಾರ್ಡ್‌ ಹಾಕಿಕೊಳ್ಳಬಹುದು. ಈ ಮಾಡೆಲ್‌ನಲ್ಲಿ 12 ಜಿಬಿ ರ್ಯಾಮ್‌ ಮತ್ತು 256 ಜಿಬಿ ಅಥವಾ 512 ಜಿಬಿ ಆಂತರಿಕ ಮೆಮೊರಿಯ ಆಯ್ಕೆಯಿದೆ. ನೋಟ್‌ 10 ಪ್ಲಸ್‌ ಮಾಡೆಲ್‌ 6.8 ಇಂಚಿನ, ಕ್ವಾಡ್‌ ಎಚ್‌ ಡಿ ಪ್ಲಸ್‌ ಪರದೆ ಹೊಂದಿದೆ. ಎರಡೂ ಮಾದರಿಗಳು ಸ್ಯಾಮ್‌ಸಂಗ್‌ನದೇ ತಯಾರಿಕೆಯ ಎಕ್ಸಿನಾಸ್‌ 9845 ಪ್ರೊಸೆಸರ್‌ ಹೊಂದಿವೆ.

ಕ್ಯಾಮೆರಾ ಕಣ್ಣು
ಗ್ಯಾಲಕ್ಸಿನೋಟ್‌10 ಹಿಂಬದಿಯಲ್ಲಿ ಮೂರು ಕ್ಯಾಮರಾಗಳನ್ನು ಹೊಂದಿದೆ. 12 ಮೆ.ಪಿ. ಪ್ರಾಥಮಿಕ (ಎರಡು ಅಪರ್ಚರ್‌ ಸೆನ್ಸರ್‌ ಇದೆ), 12 ಮೆಗಾಪಿಕ್ಸಲ್‌ ಟೆಲಿಫೋಟೋ ಲೆನ್ಸ್‌ ಮತ್ತು 16 ಮೆ.ಪಿ. ವೈಡ್‌ ಆ್ಯಂಗಲ್‌ ಸೆನ್ಸರ್‌. ಇದೇ ಕ್ಯಾಮರಾ ಅಂಶಗಳು ನೋಟ್‌ 10 ಪ್ಲಸ್‌ನಲ್ಲೂ ಇವೆ. ದರಲ್ಲಿ 3ಡಿ ಟಿಓಎಫ್ ಡೆಪ್ತ್ ವಿಷನ್‌ ವಿಜಿಎ ಸೆನ್ಸರ್‌ ಹೆಚ್ಚುವರಿ ಇದೆ. ಸೆಲ್ಫಿಗಾಗಿ ಎರಡೂ ಫೋನ್‌ನಲ್ಲಿ 10 ಮೆಗಾಪಿಕ್ಸಲ್‌ ಕ್ಯಾಮರಾ ಇದೆ!

Advertisement

Udayavani is now on Telegram. Click here to join our channel and stay updated with the latest news.

Next