ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ 31 ಸ್ಮಾರ್ಟ್‌ಫೋನ್ ಇದೆ ಮೊದಲಬಾರಿಗೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೆ ಸಿದ್ಧವಾಗಿದೆ. ಕೆಲವು ದಿನಗಳ ಹಿಂದೆ ಎಂ ಸಿರೀಸ್‌ನ ಗ್ಯಾಲಕ್ಸಿ ಎಮ್ 30 ಬಿಡುಗಡೆಗೊಂಡು ಯಶಸ್ವಿಯಾದ ಹಿನ್ನೆಯಲ್ಲಿ ಇದೀಗ ಕೆಲವು ಹೊಸ ತಂತ್ರಾಶಗಳ ಅಳವಡಿಕೆ ಮತ್ತು ಬದಲಾವಣೆಯೊಂದಿಗೆ ಗ್ಯಾಲಕ್ಸಿ ಎಂ 31 ಆವೃತ್ತಿಯನ್ನು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಫೋನ್‌ನ ವಿವಿಧ ಸಂಗ್ರಹದ ಆಧಾರದ ಮೇಲೆ ಬೆಲೆಗಳಲ್ಲಿ ವ್ಯತ್ಯಯವಾಗಲಿದೆ. 6-64 ಜಿಬಿ ಸಂಗ್ರಹದ ಆವೃತ್ತಿಗೆ 15,999 ರೂ.ಮತ್ತು 6-128 ಜಿಬಿ ಆವೃತ್ತಿಗೆೆ 16,999 ರೂ. ಆರಂಭಿಕ ಬೆಲೆಯಲ್ಲಿ ಲಭ್ಯವಿವೆ. ಇಂದಿನಿಂದ ಗ್ರಾಹಕರಿಗೆ ಲಭ್ಯವಿರಲಿದ್ದು ಅಮೆಜಾನ್ ಮತ್ತು ಕೆಲವು ಆಯ್ದ ಮೊಬೈಲ್ ಮಾರಾಟ ಮಳಿಗೆಗಳಲ್ಲಿ ಮಾತ್ರ ಲಭ್ಯವಿರಲಿದೆ.
ಡ್ಯುಯಲ್ ನ್ಯಾನೊ ಸಿಮ್ ಅಳವಡಿಸಲು ಅವಕಾಶವಿದ್ದು , 6.4 ಇಂಚ್‌ನ ಫುಲ್ ಎಚ್‌ಡಿ ಅಮೊಲ್ಡ್ ಪರದೆ ಹೊಂದಿದೆ. ಆ್ಯಂಡ್ರಾಯ್ಡ 10 ತಂತ್ರಾಂಶವನ್ನು ಇದರಲ್ಲಿದ್ದು, ಆಂತರಿಕ ಸಂಗ್ರಹ ಮಾತ್ರವಲ್ಲದೇ ಅಗತ್ಯತೆಗೆ ತಕ್ಕಂತೆ 512 ಜಿಬಿವರೆಗೂ ಮೆಮೋರಿ ಕಾರ್ಡ್‌ನ್ನು ಅಳವಡಿಸಬಹುದಾಗಿದೆ. ಲಾಕ್ ತೆರೆಯಲು ಹಿಂಬದಿಯಲ್ಲಿ ಬೆರಳಚ್ಚು ಸೆನ್ಸಾರ್ ಅಳವಡಿಸಲಾಗಿದೆ.
ಉತ್ತಮ ಗುಣಮಟ್ಟದ ಕೆಮರಾ ವ್ಯವಸ್ಥೆಯನ್ನು ಇದು ಹೊಂದಿದೆ. ಹಿಂಬದಿಯಲ್ಲಿ 64 ಎಮ್‌ಪಿ, 8 ಎಂಪಿ ಮತ್ತು 5 ಎಂಪಿಯ ಎರಡು ಕೆಮರಾಗಳು ಸೇರಿ ನಾಲ್ಕು ಕೆಮರಾ ಅಳವಡಿಸಲಾಗಿದೆ. ಪ್ರತಿಯೊಂದು ಕೆಮರಾವೂ ಬೇರೆ ಬೇರೆ ಲೆನ್ಸ್ ಸಾಮರ್ಥ್ಯ ಹೊಂದಿರುವುದರಿಂದ ನಮಗೆ ಬೇಕಾದ ಹಾಗೆ ಛಾಯಾಚಿತ್ರ ಸೆರೆಹಿಡಿಯಲು ಇದು ಅತ್ಯಂತ ಉಪಯುಕ್ತ. ಮುಂಬದಿಯಲ್ಲಿ 32 ಮೆಗಾಪಿಕ್ಸೆಲ್‌ನ ಸೆಲ್ಫಿ ಕೆಮರಾ ಅಳವಡಿಸಲಾಗಿದೆ. ಅಲ್ಲದೇ ಇದು 4ಕೆ ವೀಡಿಯೋ ಚಿತ್ರೀಕರಣದ ಸಾಮರ್ಥ್ಯ ಹೊಂದಿದೆ.
ಓಶಿಯನ್ ಬ್ಲೂ ಮತ್ತು ಸ್ಪೇಸ್ ಬ್ಲಾಕ್ ಬಣ್ಣಗಳಲ್ಲಿ ಲಭ್ಯವಿದೆ. 6,000 ಮೆಗಾ ವ್ಯಾಟ್ ಸಾಮರ್ಥ್ಯದ ಸುಧೀರ್ಘ ಬಾಲಿಕೆ ಬ್ಯಾಟರಿ ಇರಲಿದೆ.