Advertisement
ಇದಕ್ಕೆ ಇತ್ತೀಚಿನ ಸೇರ್ಪಡೆಯೆಂದರೆ Samsung Galaxy F54 5G. ಇದು ದೀರ್ಘ ಕಾಲದ ಬ್ಯಾಟರಿ ಮತ್ತು ಉತ್ತಮ ಕ್ಯಾಮೆರಾ ಹೊಂದಿದೆ. ಸ್ಯಾಮ್‌ಸಂಗ್‌ನ ಎಫ್ ಸರಣಿ ಬ್ಯಾಟರಿ ಬಾಳಿಕೆಗೆ ಹೆಸರಾಗಿದೆ. ಈ ಹೊಸ ಫೋನ್ ಒಂದೇ ಆವೃತ್ತಿಯದಾಗಿದ್ದು, 8 ಜಿಬಿ ರ್ಯಾಮ್ ಮತ್ತು 256 ಜಿಬಿಯಷ್ಟು ಭರ್ಜರಿ ಆಂತರಿಕ ಸಂಗ್ರಹ ಹೊಂದಿದೆ.
Related Articles
Advertisement
ಪ್ರೊಸೆಸರ್ ಮತ್ತು ಕಾರ್ಯಾಚರಣೆ: ಸ್ಯಾಮ್‌ಸಂಗ್ ಗ್ಯಾಲಕ್ಸಿ F54 5G Exynos 1380 ಪ್ರೊಸೆಸರ್ ಹೊಂದಿದೆ. ಇದು 10 5G ಬ್ಯಾಂಡ್‌ಗಳನ್ನು ಬೆಂಬಲಿಸುತ್ತದೆ. Wi-Fi 6, ಬ್ಲೂಟೂತ್ 5.3, NFC ಹೊಂದಿದೆ. ಈ ಫೋನ್ ಗೆ ನಾಲ್ಕು ವರ್ಷಗಳ ಆಂಡ್ರಾಯ್ಡ್ ಅಪ್ ಡೇಟ್ ಮತ್ತು ಐದು ವರ್ಷಗಳ ಸೆಕ್ಯುರಿಟಿ ಪ್ಯಾಚ್ ನೀಡುವ ಭರವಸೆಯನ್ನು ಸ್ಯಾಮ್ ಸಂಗ್ ನೀಡಿದೆ. Android 13 ಆಧಾರಿತ One UI 5.1 ಇದ್ದು, Samsung ಫೋನ್‌ಗಳಲ್ಲಿ ಇರುವ ಎಲ್ಲಾ ಸಾಮಾನ್ಯ ಶಾರ್ಟ್‌ಕಟ್‌ಗಳು, ಗೆಸ್ಚರ್‌ಗಳು ಮತ್ತು ಸೆಟಿಂಗ್ ಆಯ್ಕೆಗಳನ್ನು ಒಳಗೊಂಡಿದೆ.
ಇದು ಒಂದು ಮಧ್ಯಮ ವಿಭಾಗದ ಫೋನ್ ನಲ್ಲಿರಬಹುದಾದ ವೇಗದ ಕಾರ್ಯಾಚರಣೆ ಹೊಂದಿದೆ. ಆಪ್ ಗಳೇ ಇರಬಹುದು, ಮೇಲ್, ಫೇಸ್ ಬುಕ್, ಗ್ಯಾಲರಿ ತೆರೆಯುವಿಕೆ ವೇಗವಾಗಿ ಸರಾಗವಾಗಿ ಆಗುತ್ತದೆ. ಗೇಮಿಂಗ್ ಗೂ ಸೂಕ್ತವಾಗಿದೆ.
ಬ್ಯಾಟರಿ: Samsung Galaxy F54 5G ಭರ್ಜರಿ 6,000mAh ಬ್ಯಾಟರಿ ಹೊಂದಿದೆ. 25W ವೇಗದ ಚಾರ್ಜ್ ಅನ್ನು ಬೆಂಬಲಿಸುತ್ತದೆ. ಆದರೆ, ಎಂದಿನಂತೆ ಬಾಕ್ಸ್ ನಲ್ಲಿ ಚಾರ್ಜರ್ ನೀಡಿಲ್ಲ. ಬ್ಯಾಟರಿ ಬಾಳಿಕೆ ಹೆಚ್ಚು ಬಯಸುವವರಿಗೆ ಇದು ಸೂಕ್ತವಾಗಿದೆ.
ಒಂದು ಪೂರ್ಣ ಚಾರ್ಜ್‌ನೊಂದಿಗೆ ಸುಮಾರು ಎರಡು ದಿನ ಬಳಸಬಹುದು. ಬ್ಯಾಟರಿಯನ್ನು ಸಂಪೂರ್ಣವಾಗಿ ಚಾರ್ಜ್ ಮಾಡಲು ಸುಮಾರು ಒಂದೂವರೆ ಗಂಟೆ ಕಾಲ ತೆಗೆದುಕೊಳ್ಳುತ್ತದೆ.
ಕ್ಯಾಮರಾ:
Samsung Galaxy F54 5G, ಆಪ್ಟಿಕಲ್ ಸ್ಟೆಬಿಲೈಸೇಶನ್ (OIS) ಜೊತೆಗೆ ಪ್ರಾಥಮಿಕ 108-ಮೆಗಾಪಿಕ್ಸೆಲ್ ಲೆನ್ಸ್ ಹೊಂದಿದೆ. ಇದರೊಂದಿಗೆ 8-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಕ್ಯಾಮೆರಾ ಮತ್ತು 2-ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾ ಇದೆ. ಸೆಲ್ಫಿಗಳಿಗಾಗಿ 32-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾ ಇದ್ದು, ಅದು 4K ವೀಡಿಯೊ ರೆಕಾರ್ಡಿಂಗ್ ಅನ್ನು ಬೆಂಬಲಿಸುವುದು ವಿಶೇಷ.
ಹಗಲಿನ ವೇಳೆಯಲ್ಲಿ, ನೈಸರ್ಗಿಕ ಬಣ್ಣಗಳು, HDR ಮತ್ತು ಉತ್ತಮ ವಿವರಗಳೊಂದಿಗೆ ಲ್ಯಾಂಡ್‌ಸ್ಕೇಪ್ ಶಾಟ್‌ಗಳು ಉತ್ತಮವಾಗಿ ಕಾಣುತ್ತವೆ. ಡಿಜಿಟಲ್ ಜೂಮ್ 10X ವರೆಗೆ ಮಾತ್ರ ಇದೆ. ಕಡಿಮೆ ಬೆಳಕಿನಲ್ಲಿ ಸಹ ಮುಖ್ಯ ಕ್ಯಾಮರಾ ಉತ್ತಮವಾಗಿ ದೃಶ್ಯಗಳನ್ನು ಸೆರೆ ಹಿಡಿಯುತ್ತದೆ. ನೈಟ್ ಮೋಡ್ ನಲ್ಲಿ ಲಾಂಗ್ ಶಾಟ್ ಗಳಲ್ಲಿ ಸಹ ಸಬ್ಜೆಕ್ಟ್ ಮಸುಕಾಗದೇ ಉತ್ತಮವಾಗಿ ಮೂಡಿ ಬರುತ್ತದೆ. 32 ಮೆ. ಪಿ. ಸೆಲ್ಫಿ ಕ್ಯಾಮೆರಾ ಸಹ ಉತ್ತಮ ಚಿತ್ರಗಳನ್ನು ನೀಡುತ್ತದೆ.
ಈ ಫೋನಿನಲ್ಲಿ 4K ರೆಸಲ್ಯೂಶನ್ ವೀಡಿಯೊಗಳನ್ನು ರೆಕಾರ್ಡ್ ಮಾಡಬಹುದು. ಕಡಿಮೆ ಬೆಳಕಿನಲ್ಲಿಯೂ ಸಹ ಉತ್ತಮ ವಿಡಿಯೋ ದೊರಕುತ್ತದೆ. ಆದರೆ 4ಕೆ ವಿಡಿಯೋ ಚಿತ್ರೀಕರಣಕ್ಕೆ ಇಮೇಜ್ ಸ್ಟೆಬಿಲೈಸೇಷನ್ ಇಲ್ಲ. 1080p 30fps ಗೆ ಬದಲಿಸಿಕೊಂಡರೆ ಸ್ಟೆಬಿಲೈಸೇಷನ್ (ಅಲುಗಾಟವಿಲ್ಲದ ವಿಡಿಯೋ) ಸೌಲಭ್ಯ ದೊರಕುತ್ತದೆ.
ಒಟ್ಟಾರೆ, ದೀರ್ಘಾವಧಿ ಬ್ಯಾಟರಿ ಇರಬೇಕು. ಕ್ಯಾಮರಾ ಚೆನ್ನಾಗಿರಬೇಕು ಎಂದು ಬಯಸುವವರು Samsung Galaxy F54 5G ಯನ್ನು ಪರಿಗಣಿಸಬಹುದು.