Advertisement
ಎಲ್ಲರಿಗೂ ಗೊತ್ತಿರುವಂತೆ, ಸ್ಯಾಮ್ ಸಂಗ್ ಮೊಬೈಲ್‌ಗಳ ದರ ಸ್ವಲ್ಪ ಜಾಸ್ತಿ ಇರುತ್ತದೆ. ಆದರೂ, ಆ ಬ್ರಾಂಡ್ ಗಳಿಗೆ ಹೊಂದಿಕೊಂಡ ಗ್ರಾಹಕರು, ಬೆಲೆ ಹೆಚ್ಚಾದರೂಪರವಾಗಿಲ್ಲ ನಮಗೆ ಅದೇ ಬೇಕು ಎನ್ನುತ್ತಾರೆ. ಇಂತಿಪ್ಪ ಸ್ಯಾಮ್ ಸಂಗ್, ಈಗ ಭಾರತದಲ್ಲಿ ಹೊಸದೊಂದು ಫೋನ್ ಬಿಡುಗಡೆ ಮಾಡಿದೆ. ಅದುವೇ ಗೆಲಾಕ್ಸಿ ಎ52. ಇದರ ದರ 128 ಜಿಬಿ ಆಂತರಿಕ ಸಂಗ್ರಹ, 6 ಜಿಬಿ ರ್ಯಾಮ್ 26,500 ರೂ. ಇದ್ದರೆ, 128 ಜಿಬಿ ಆಂತರಿಕ ಸಂಗ್ರಹ, 8 ಜಿಬಿ ರ್ಯಾಮ್ ಆವೃತ್ತಿಗೆ 28000 ರೂ. ಇದೆ. ಈ ಹೊಸ ಫೋನಿನಲ್ಲಿರುವ ಅಂಶಗಳೇನು? ನೋಡೋಣ.
Related Articles
Advertisement
ಧೂಳು, ನೀರು ನಿರೋಧಕ: ಇನ್ನೊಂದು ವಿಶೇಷವೆಂದರೆ ಇದು ಐಪಿ67 ರೇಟೆಡ್ ಆಗಿದೆ. ಅಂದರೆ ಧೂಳು, ಮಣ್ಣಿನ ಕಣ ಒಳ ಹೋಗುವುದಿಲ್ಲ. ಜೊತೆಗೆ ನೀರು ನಿರೋಧಕ ಗುಣವುಳ್ಳದ್ದು. 1 ಮೀಟರ್ ಆಳದವರೆಗಿನ ನೀರಿನಲ್ಲಿ 30 ನಿಮಿಷ ಇದ್ದರೂ ನೀರು ಫೋನಿನ ಒಳ ಹೋಗುವುದಿಲ್ಲ. ಆಕಸ್ಮಿಕವಾಗಿ ನೀರು ಅಥವಾ ಮಳೆ ನೀರು ಬಿದ್ದರೆ ಫೋನಿಗೆ ರಕ್ಷಣೆ ಇದೆ.
ಪ್ರೊಸೆಸರ್: ಇದರಲ್ಲಿ ಕ್ವಾಲ್‌ಕಾಂ ಸ್ನಾಪ್ ಡ್ರಾಗನ್ 720 ಜಿ ಪ್ರೊಸೆಸರ್ ಇದೆ. 2.30 ಗಿ.ಹ. ವೇಗದ ಪ್ರೊಸೆಸರ್ ಇದಾಗಿದೆ. ಮಧ್ಯಮ ವಲಯದ ಮೊಬೈಲ್‌ಗಳಲ್ಲಿ ಇದೊಂದು ಉತ್ತಮ ಪ್ರೊಸೆಸರಾಗಿದ್ದು, ಫೋನಿನ ವೇಗ, ಕಾರ್ಯನಿರ್ವಹಣೆ ಸುಲಲಿತವಾಗಿದೆ. ಅಂಡ್ರಾಯ್ಡ್ 11 ಕಾರ್ಯಾಚರಣೆ ವ್ಯವಸ್ಥೆ ಇದ್ದು, ಇದಕ್ಕೆ ಸ್ಯಾಮ್ ಸಂಗ್‌ನ ಒನ್ ಯು ಐ ಇಂಟರ್‌ಫೇಸ್ ಜೋಡಿಸಲಾಗಿದೆ.
ಕ್ಯಾಮೆರಾ: ಇದರ ಕ್ಯಾಮೆರಾ ವಿಭಾಗ ಉತ್ತಮವಾಗಿದೆ. ಹಿಂಬದಿ 64 ಮೆ.ಪಿ. ಮುಖ್ಯ ಕ್ಯಾಮೆರಾ, 12 ಮೆ.ಪಿ. ಅಲ್ಟ್ರಾವೈಡ್, 5 ಮೆ.ಪಿ. ಮ್ಯಾಕ್ರೋ, 5 ಮೆ.ಪಿ. ಡೆಪ್ತ್ ಕ್ಯಾಮೆರಾ ಸೇರಿ ನಾಲ್ಕುಕ್ಯಾಮೆರಾ ಹೊಂದಿದೆ. ಇದಕ ಆ್ಯಪ್ಟಿಕಲ್ ಇಮೇಜ್ ಸ್ಟೆಬಿಲೈಜೇಷನ್ ಸೌಲಭ್ಯ ಇದೆ. ಹೀಗಾಗಿ ಫೋನ್ ಕೊಂಚ ಅಲುಗಾಡಿದಾಗಲೂದ್ದಷ್ಟು ಚಿತ್ರಗಳು ಮೂಡುತ್ತವೆ. ಕ್ಯಾಮೆರಾ ಗುಣಮಟ್ಟ ಚೆನ್ನಾಗಿದೆ. ಸೆಲ್ಫಿಗಾಗಿ 32 ಮೆ.ಪಿ. ಕ್ಯಾಮೆರಾ ನೀಡಿರುವುದು ವಿಶೇಷ.
ಬ್ಯಾಟರಿ: ಇದರಲ್ಲಿ 4500 ಎಂಎಎಚ್ ಬ್ಯಾಟರಿ ಇದೆ. ಸ್ಯಾಮ್‌ಸಂಗ್ ಫೋನ್ ಬಳಸುವವರಿಗೆ ಅದರ ಬ್ಯಾಟರಿ ಹೆಚ್ಚು ಸಮಯ ಬಾಳಿಕೆ ಬರುವುದು ಗೊತ್ತೇ ಇದೆ. ಸಾಧಾರಣ ಬಳಕೆಯಲ್ಲಿ ಒಂದೂವರೆ ದಿನದವರೆಗೂ ಬ್ಯಾಟರಿ ಬರುತ್ತದೆ. ಇದು 25 ವ್ಯಾಟ್ನ ಸೂಪರ್ ಫಾಸ್ಟ್ ಚಾರ್ಜರ್ ಅನ್ನು ಬೆಂಬಲಿಸುತ್ತದೆ. ಆದರೆ ಇದರ ಬಾಕ್ಸ್ ನಲ್ಲಿ ಕೊಟ್ಟಿರುವುದು 15 ವ್ಯಾಟ್ ಚಾರ್ಜರ್ ಮಾತ್ರ. ಈ ಫೋನಿನ ಮಾಲೀಕರಿಗೆಬೇಗ ಚಾರ್ಜ್ ಆಗಬೇಕೆಂದರೆ 25 ವ್ಯಾಟ್ಸ್ ಚಾರ್ಜರನ್ನು ಪ್ರತ್ಯೇಕವಾಗಿಕೊಳ್ಳಬೇಕು.
ಕೊರತೆಗಳು :
ಈ ಫೋನಿಗೆ 28,000 ರೂ. ದರವಿದ್ದರೂ ಇದರಲ್ಲಿ 5ಜಿ ಸೌಲಭ್ಯ ಇಲ್ಲದಿರುವುದು ಮುಖ್ಯ ಕೊರತೆ. ವೇಗದ ಚಾರ್ಜರ್ ಪ್ರತ್ಯೇಕವಾಗಿ ಕೊಳ್ಳಬೇಕು. ಇದರಲ್ಲಿರುವುದು ಒಂದೇ ಥೀಮ್ ಮತ್ತು ವಾಲ್‌ಪೇಪರ್, ಥೀಮ್ ಬೇಜಾರಾಗಿ ಬದಲಿಸಬೇಕೆಂದರೆ ಬೇರೆ ಥೀಮ್ ಡೌನ್‌ಲೋಡ್ ಮಾಡಲು ಹಣ ಕೊಡಬೇಕು.
-ಕೆ.ಎಸ್. ಬನಶಂಕರ ಆರಾಧ್ಯ