Advertisement

ಸ್ಯಾಮ್‌ ಸಂಗ್‌ ಡೆಬಿಟ್‌ ಕಾರ್ಡ್‌

08:19 AM Jun 08, 2020 | Lakshmi GovindaRaj |

ತಂತ್ರಜ್ಞಾನ ಸಂಸ್ಥೆಗಳು ಹಣಕಾಸು ಕ್ಷೇತ್ರಕ್ಕೆ ಕಾಲಿಡುವ ಟ್ರೆಂಡ್‌ ಮತ್ತೂಮ್ಮೆ ಚರ್ಚೆಗೆ ಬಂದಿದೆ. ಅದಕ್ಕೆ ಕಾರಣವಾಗಿರುವುದು ಎಲೆಕ್ಟ್ರಾನಿಕ್‌ ಉಪಕರಣ ತಯಾರಕ ಸಂಸ್ಥೆ ಸ್ಯಾಮ್‌ಸಂಗ್‌. ಅದು ಈಗ ಡೆಬಿಟ್‌ ಕಾರ್ಡ್‌ ಅನ್ನು ಹೊರತರಲು  ಮುಂದಾಗಿದೆ. ಈ ಹಿಂದೆ ಆಪಲ್‌ ಸಂಸ್ಥೆ “ಆ್ಯಪಲ್‌ ಕಾರ್ಡ್‌’ ಅನ್ನು ಹೊರತಂದಿತ್ತು. ಈಗಾಗಲೇ ಇರುವ ಡಿಜಿಟಲ್‌ ಪೇಮೆಂಟ್‌ ವ್ಯವಸ್ಥೆ ಸ್ಯಾಮ್‌ಸಂಗ್‌ ಪೇ ಸಹಯೋಗದಲ್ಲಿ, ಈ ಹೊಸ ಡೆಬಿಟ್‌  ಕಾರ್ಡ್‌ ಮೂಡಿಬರಲಿದೆ.

Advertisement

ಸ್ಯಾಮ್‌ಸಂಗ್‌ ಉತ್ಪನ್ನಗಳ ಬಳಕೆದಾರರು ಹಣಕಾಸು ವ್ಯವಹಾರ ಗಳನ್ನು ಸುಲಭವಾಗಿ ನಡೆಸಲು ಅನುಕೂಲವಾಗುವಂತೆ ಈ ವ್ಯವಸ್ಥೆ ಯನ್ನು ರೂಪಿಸಲಾಗುತ್ತಿದೆ ಎಂದು ಸ್ಯಾಮ್‌ಸಂಗ್‌ನ ಮೂಲಗಳು ತಿಳಿಸಿವೆ. “ಸ್ಯಾಮ್‌ ಸಂಗ್‌ ಪೇ’ ಸಹಾಯ ದಿಂದ,  ಈ ಹಿಂದಿನ ವಸ್ತು ಖರೀದಿ, ಅಕೌಂಟ್‌ ಬ್ಯಾಲೆನ್ಸ್‌, ಕಾರ್ಡನ್ನು ರದ್ದು ಪಡಿಸುವುದು ಮುಂತಾದ ಕಾರ್ಯಾ ಚರಣೆಗಳನ್ನು ನಡೆಸಬಹುದಾಗಿದೆ.

ಅಂದರೆ ಇನ್ನುಮುಂದೆ ಬರಲಿರುವ ಸ್ಯಾಮ್‌ಸಂಗ್‌ ಡೆಬಿಟ್‌ ಕಾರ್ಡ್‌ ಅನ್ನು, ಈಗಾಗಲೇ  ಇರುವ ಸ್ಯಾಮ್‌ ಸಂಗ್‌ ಪೇ ಜೊತೆ ವಿಲೀನಗೊಳಿಸಿ, ಅದರಿಂದಲೂ ಕಾರ್ಡ್‌ ಮೇಲೆ ನಿಯಂಂತ್ರಣ ಸಾಧಿಸುವಂತೆ ಮಾಡಲಾಗುವು ದು. ಈ ಹೊಸ ಹಣಕಾಸು ವ್ಯವಸ್ಥೆಯ ಕುರಿತು ಗ್ರಾಹಕರಲ್ಲಿ ವಿಶ್ವಾಸ ಮೂಡಿಸಲು ಡೆಬಿಟ್‌ ಕಾರ್ಡ್‌ ಖಾತೆಗೆ  ವಿಮೆಯ ರಕ್ಷಣೆಯನ್ನೂ ಒದಗಿಸುತ್ತಿದೆ. ಎಟಿಎಂಗಳಲ್ಲಿ ಯಾವುದೇ ಶುಲ್ಕವಿಲ್ಲದೆ ಹಣ ಡ್ರಾ ಮಾಡಿಕೊಳ್ಳುವ ವ್ಯವಸ್ಥೆ ಇದಾಗಿದೆ ಎಂದು ಸಂಸ್ಥೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next