Advertisement

ಮಿರಾಕಲ್‌ ಮಂಜು ನಿರ್ದೇಶನದಲ್ಲಿ ‘ಸಂಸಾರ ಸಾಗರ’

04:29 PM Apr 14, 2022 | Team Udayavani |

samsara sagara, Kannada film, Sandalwood, miracle manju, Raghavendra Rajkumarಹೊಸ ಪ್ರತಿಭೆಗಳಾದ ದೀಕ್ಷಿತ್‌ ಧನುಷ್‌, ಆನಂದ್‌ ಆರ್ಯ, ರಕ್ಷಾ, ಭೂಮಿಕ, ಲಕ್ಷ್ಯ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿರುವ “ಸಂಸಾರ ಸಾಗರ’ ಚಿತ್ರ ಇತ್ತೀಚೆಗೆ ಸೆಟ್ಟೇರಿತು. ಕನ್ನಡ ಚಿತ್ರದಲ್ಲಿ ಗೀತ ಸಾಹಿತಿ ಮತ್ತು ಸಂಗೀತ ನಿರ್ದೇಶಕನಾಗಿ ಗುರುತಿಸಿಕೊಂಡಿರುವ ಮಿರಾಕಲ್‌ ಮಂಜು ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

Advertisement

ಉಳಿದಂತೆ ಹಿರಿಯ ನಟ ರಾಘವೇಂದ್ರ ರಾಜಕುಮಾರ್‌, ಎಸ್‌. ನಾರಾಯಣ್‌, ಟೆನ್ನಿಸ್‌ ಕೃಷ್ಣ, ರೇಖಾ ದಾಸ್‌, ಪ್ರಿಯಾ ತರುಣ್‌, ನಟರಾಜ್‌ ಮೊದಲಾ ದವರು “ಸಂಸಾರ ಸಾಗರ’ ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಮುಹೂರ್ತದ ಸಂದರ್ಭದಲ್ಲಿ ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ಮಿರಾಕಲ್‌ ಮಂಜು, “ಸಿನಿಮಾದ ಹೆಸರೇ ಹೇಳುವಂತೆ, ಇದೊಂದು ಸಾಂಸಾರಿಕ ಸಿನಿಮಾ. ಮೂರು ಜೋಡಿಗಳ ಸುತ್ತ ಇಡೀ ಸಿನಿಮಾದ ಕಥೆ ನಡೆಯುತ್ತದೆ. ಇತ್ತೀಚಿನ ದಿನಗಳಲ್ಲಿ ಪ್ರೀತಿಸಿ ಮದುವೆಯಾದಾಗ ಇದ್ದ ಪ್ರೀತಿ, ಕಾಳಜಿ ನಂತರ ಕಡಿಮೆಯಾಗುತ್ತಿದೆ. ಆ ರೀತಿ ಆದಾಗ ಸಂಸಾರದಲ್ಲಿ ಏನಾಗುತ್ತದೆ? ಎಂಬುದೇ ಚಿತ್ರದ ಕಥೆಯ ಒಂದು ಎಳೆ. ಎಂದು ಚಿತ್ರದ ಕಥಾಹಂದರದ ಬಗ್ಗೆ ಮಾಹಿತಿ ನೀಡಿದರು.

ಚಿತ್ರದ ಬಗ್ಗೆ ಮಾತನಾಡಿದ ಹಿರಿಯ ನಟ ರಾಘವೇಂದ್ರ ರಾಜಕುಮಾರ್‌,”ಕೆಲ ದಿನಗಳ ಹಿಂದೆ ನಿರ್ದೇಶಕರು ಬಂದು ಹೇಳಿದ ಕಥೆ ಇಷ್ಟವಾಯ್ತು. ಹಾಗಾಗಿ ಈ ಪಾತ್ರವನ್ನು ಮಾಡಲು ಒಪ್ಪಿಕೊಂಡೆ. ಒಳ್ಳೆಯ ತಂಡದ ಜೊತೆ ಕೆಲಸ ಮಾಡುತ್ತಿರುವುದಕ್ಕೆ ಖುಷಿಯಾಗುತ್ತಿದೆ. ನಿರ್ಮಾಪಕರಾದ ಕೋಮಲ ನಟರಾಜ್‌, ನಟರಾದ ಟೆನ್ನಿಸ್‌ ಕೃಷ್ಣ, ರೇಖಾದಾಸ್‌ ಮೊದಲಾದವರು ಚಿತ್ರದಲ್ಲಿನ ತಮ್ಮ ಪಾತ್ರ ಪರಿಚಯ ಮಾಡಿಕೊಟ್ಟರು. ಸದ್ಯ ಮುಹೂರ್ತವನ್ನು ಆಚರಿಸಿಕೊಂಡಿರುವ “ಸಂಸಾರ ಸಾಗರ’ ಚಿತ್ರದ ಬಹುತೇಕ ಚಿತ್ರೀಕರಣ ಬೆಂಗಳೂರು ಸುತ್ತಮುತ್ತ ನಡೆಯಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next