ನವದೆಹಲಿ : ವಿಶ್ವದ ಹಲವು ರಾಷ್ಟ್ರಗಳಲ್ಲಿ ಕಾಣಿಸಿಕೊಂಡಿರುವ ಮಂಕಿಪಾಕ್ಸ್ ನ ಶಂಕಿತ ಪ್ರಕರಣ ಉತ್ತರಪ್ರದೇಶದ ಗಾಜಿಯಾಬಾದ್‌ನಲ್ಲಿ ವರದಿಯಾಗಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ.
ಶಂಕಿತ ಮಂಕಿಪಾಕ್ಸ್ ಪ್ರಕರಣದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ, ಆದರೆ ಇದು ಅನಗತ್ಯ ಗಾಬರಿ ಹುಟ್ಟಿಸುವಂತಿದೆ. ಭಾರತದಲ್ಲಿ ಇದುವರೆಗೆ ಯಾವುದೇ ಮಂಕಿಪಾಕ್ಸ್ ಪ್ರಕರಣ ವರದಿಯಾಗಿಲ್ಲ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.
ಮುಂಜಾಗ್ರತಾ ಕ್ರಮವಾಗಿ 5 ವರ್ಷದ ಬಾಲಕಿಯ ಮಾದರಿಗಳನ್ನು ಪರೀಕ್ಷೆಗಾಗಿ ಸಂಗ್ರಹಿಸಲಾಗಿದೆ ಎಂದು ಗಾಜಿಯಾಬಾದ್‌ನ ಸಿಎಂಒ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಹುಡುಗಿಯ ದೇಹದ ಮೇಲೆ ತುರಿಕೆ ಮತ್ತು ದದ್ದುಗಳನ್ನು ಹೊಂದಿದ್ದಳು. ಆಕೆಗೆ ಬೇರೆ ಯಾವುದೇ ಆರೋಗ್ಯ ಸಮಸ್ಯೆಗಳಿಲ್ಲ ಮತ್ತು ಕಳೆದ 1 ತಿಂಗಳಲ್ಲಿ ಅವಳು ಅಥವಾ ಅವಳ ನಿಕಟ ಸಂಪರ್ಕದಲ್ಲಿ ಯಾರೂ ವಿದೇಶಕ್ಕೆ ಪ್ರಯಾಣಿಸಿಲ್ಲ ಎಂದು ಹೇಳಲಾಗಿದೆ.
ಅಮೆರಿಕಾದ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ಶುಕ್ರವಾರ 700 ಕ್ಕೂ ಹೆಚ್ಚು ಜಾಗತಿಕ ಮಂಗನ ಗುಳ್ಳೆ ಪ್ರಕರಣಗಳು ವರದಿಯಾದ ಬಗ್ಗೆ ಹೇಳಿದ್ದು, ಅಮೆರಿಕಾದಲ್ಲಿ 21 ಪ್ರಕರಣಗಳು ಸೇರಿದಂತೆ ಇತರ ದೇಶಗಳಲ್ಲಿ ಹರಡುತ್ತಿದೆ ಎಂದು ತಿಳಿದು ಬಂದಿದೆ.