ಕಾಪು: ಉಡುಪಿ ಜಿಲ್ಲೆಯ ಪಾದೂರಿನಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಐಎಸ್‌ಪಿಆರ್‌ಎಲ್ ಕಚ್ಚಾ ತೈಲ ಶೇಖರಣಾ ಘಟಕಕ್ಕೆ ಮಂಗಳೂರಿನ ತೋಕೂರಿನಿಂದ ಪಾದೂರಿನವರೆಗೆ ಸುಮಾರು 24 ಗ್ರಾಮಗಳ ರೈತರ ಭೂಮಿಯ ಮಧ್ಯೆ ಹಾದು ಹೋಗುವ ಪೈಪ್‌ಲೈನ್ ಯೋಜನೆಯಿಂದ ರೈತರಿಗೆ ಸೂಕ್ತ ಪರಿಹಾರ ಒದಗಿಸುವಲ್ಲಿ ದಿಟ್ಟ ನಿರ್ಧಾರ ತೆಗೆದುಕೊಂಡ ಕಾರ್ಯ ದೇಶಕ್ಕೆ ಮಾದರಿ ಎಂದು ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆ ಪತ್ರಿಕಾಗೋಷ್ಠಿ ಯಲ್ಲಿ ಹೇಳಿದ್ದಾರೆ. ಕಾಪು ಮೂಬೂರು ಉಳಿಯಾರ ಗೋಳಿಯಲ್ಲಿ ನಡೆದ ಪಂಚಾಯತ್ ಮಟ್ಟದ ಮತ ಪ್ರಚಾರ ಮತ್ತು ಮನೆಮನೆ ಮತಪ್ರಚಾರ ಸಂದರ್ಭ ಅವರು ಮಾತನಾಡಿದರು.
ಹೋರಾಟಕ್ಕೆ ಸಂದ ಜಯ: ಉಭಯ ಜಿಲ್ಲೆಗಳ 24 ಗ್ರಾಮಗಳ ಜನರನ್ನು ರಾಜಕೀಯ ರಹಿತವಾಗಿ ಸಂಘಟಿಸಿ ಪೈಪ್‌ಲೈನ್ ಯೋಜನೆಯಿಂದ ರೈತರಿಗಾಗುವ ಅನ್ಯಾಯದ ವಿರುದ್ಧ ಜನಜಾಗೃತಿ ಮಾಡಲಾಗಿತ್ತು. ಕೇಂದ್ರ ಸರಕಾರದ 1962 ಪೈಪ್‌ಲೈನ್ ಕಾಯ್ದೆ ಅನ್ವಯ ರೈತರಿಗೆ ಭೂಮಿಯ ಸರಕಾರಿ ಮೌಲ್ಯದ ಕೇವಲ ಶೇ.10 ಮಾತ್ರ ಪರಿಹಾರ ನೀಡಲಾಗುವುದೆಂದು ಸೂಚಿಸಿದ್ದರು. ಆದರೆ ಇದನ್ನು ವಿರೋಧಿಸಿ ಬೃಹತ್ ಹೋರಾಟ ಆಯೋಜಿಸಲಾಗಿತ್ತು. ನಮ್ಮಲ್ಲಿ ಸಣ್ಣ ಹಿಡುವಳಿದಾರರೇ ಹೆಚ್ಚಿರುವುದರಿಂದ ಭೂಮಿ ಎರಡು ಹೋಳಾಗಲಿದ್ದು, ನಿಷ್ಪ್ರಯೋಜಕವಾಗಲಿದೆ. ನಮ್ಮ ಭೂಮಿಗೆ ಸೂಕ್ತ ಪರಿ ಹಾರ ನೀಡಬೇಕೆಂಬ ಬೇಡಿಕೆ ಸಲ್ಲಿಸ ಲಾಗಿತ್ತು. ನಾನು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸಂದರ್ಭದಲ್ಲಿ ಈ ಬಗ್ಗೆ ಹೋರಾಟ ನಡೆಸಿ ನ್ಯಾಯ ಒದಗಿಸಲಾಗಿದೆ ಎಂದು ಅವರು ಹೇಳಿದರು.
ಇದು ರಾಷ್ಟ್ರೀಯ ಭದ್ರತೆ ಹಿತದೃಷ್ಟಿಯಿಂದ ಅನುಷ್ಠಾನಗೊಳ್ಳು ವುದರಿಂದ ನಮ್ಮ ರೈತಪರವಾದ ಹೋರಾಟ ಸಮಿತಿ ರೈತರ ಅನುಕೂಲಕ್ಕಾಗಿ ಕೆಲವು ಸರಳ ಬೇಡಿಕೆಗೆ ಸ್ಪಂದಿಸುವಂತೆ ಒತ್ತಾಯಿ ಸಿತ್ತು. ಕೇಂದ್ರ ಸರಕಾರಿ ಸ್ವಾಮ್ಯದ ಯೋಜನೆ ಇದಾಗಿರುವುದರಿಂದ ಬಲಾತ್ಕಾರದಿಂದ ಹೋರಾಟ ಮಾಡಿ ರಾಜ್ಯ ಸರಕಾರದ ಅತೀ ಹೆಚ್ಚು ಪರಿಹಾರ ಮಾರುಕಟ್ಟೆ ಮೌಲ್ಯಧಾರಣೆ ಮೂಲಕ ರೈತರಿಗೆ ಮತ್ತು ಸಂತ್ರಸ್ತರಿಗೆ ಕೊಡಿಸಿದ ಪರಿಹಾರ ಕಾರ್ಯ ದೇಶಕ್ಕೆ ಮಾದರಿಯಾಗಿದೆ ಎಂದು ಸೊರಕೆ ಹೇಳಿದರು.
ಸಂತ್ರಸ್ತರ ಬೇಡಿಕೆ: ಪೈಪ್‌ಲೈನ್ ಹಾದುಹೋಗುವ ಕೃಷಿಭೂಮಿಗೆ 2014ರ ಡಿ. 31ರ ವರೆಗೆ ಅತೀ ಹೆಚ್ಚು ಮಾರಾಟವಾಗಿರುವ ಮೌಲ್ಯ ನಿಗದಿಪಡಿಸಬೇಕು. ಪೈಪ್‌ಲೈನ್ ಅಳವಡಿಸಿದ ಅನಂತರ ಎರಡು ಬದಿಗಳಲ್ಲೂ ಭೂಪರಿವರ್ತ ನೆಗೆ ಲಿಖೀತ ಅನುಮತಿ ನೀಡಬೇಕು. ಪೈಪ್‌ಲೈನ್ ಕಾಮಗಾರಿ ನಡೆಸುವ ಸಂದರ್ಭ ಗಡಿಗುರುತು ಗೊತ್ತು ಪಡಿಸಿದ ಭೂಮಿ ಹೊರತುಪಡಿಸಿ ಕೃಷಿ ನಾಶವಾದರೆ, ನೀರಾವರಿ ತೋಡುಗಳು ಮುಚ್ಚಿದರೆ ಮತ್ತೆ ಸರಿಪಡಿಸಿ ಕೃಷಿಯ ಪರಿಹಾರ ಒದಗಿಸಬೇಕು. 10ರಿಂದ 15 ಸೆಂಟ್ಸ್ ಜಾಗ ಅಥವಾ ಹೆಚ್ಚುವರಿ ಭೂಮಿಗಳ ಮಧ್ಯ ಭಾಗದಲ್ಲಿ ಹಾದುಹೋಗ ದಂತೆ ರೈತರಿಗೆ ಅನುಕೂಲವಾಗುವಂತೆ ಸಹಕರಿಸುವ ಬಗ್ಗೆ ವಿನಯ್ ಕುಮಾರ್ ಸೊರಕೆಯವರ ಮಧ್ಯಸ್ಥಿಕೆ ಯಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸ ಲಾಗಿತ್ತು. ಪ್ರಚಾರ ಸಭೆಯಲ್ಲಿ ಕಾಂಗ್ರೆಸ್ ಮುಖಂಡರಾದ ದಿವಾಕರ ಶೆಟ್ಟಿ, ಪ್ರಭಾಕರ, ಫಝಾìನ, ಸೌಮ್ಯಾ, ರೇಶ್ಮಾ, ಸಾಧಿಕ್ ಮಲ್ಲಾರು ಉಪಸ್ಥಿತ ರಿದ್ದರು