Advertisement

ಸಂಹಾರ ಥೀಮ್‌ ಟೀಸರ್‌ ಬಿಡುಗಡೆ

11:08 AM Jan 04, 2018 | Team Udayavani |

ಚಿರಂಜೀವಿ ಸರ್ಜಾ ಅಭಿನಯದ “ಸಂಹಾರ’ ಚಿತ್ರವು ಸದ್ಯದಲ್ಲೇ ಸೆನ್ಸಾರ್‌ ಆಗಲಿದ್ದು, ಸೆನ್ಸಾರ್‌ ಆದ ಬಳಿಕ ಚಿತ್ರವನ್ನು ಫೆಬ್ರವರಿ ಮೊದಲನೇ ವಾರದಲ್ಲಿ  ಬಿಡುಗಡೆ ಮಾಡುವುದಕ್ಕೆ ನಿರ್ದೇಶಕ ಗುರು ದೇಶಪಾಂಡೆ ಚಿಂತಿಸಿದ್ದಾರೆ. ಈ ಮಧ್ಯೆ ನಟ ಮುರಳಿ, ಚಿತ್ರದ ಥೀಂ ಟೀಸರ್‌ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. 

Advertisement

“ಸಂಹಾರ’ ಚಿತ್ರವನ್ನು ನಿರ್ದೇಶಿಸುವುದರ ಜೊತೆಗೆ ಗುರು ದೇಶಪಾಂಡೆ ಕಥೆ ಮತ್ತು ಚಿತ್ರಕಥೆಯನ್ನು ರಚಿಸಿದ್ದಾರೆ. ಚಿತ್ರಕ್ಕೆ ರವಿ ಬಸ್ರೂರು ಸಂಗೀತ ಸಂಯೋಜಿಸಿದ್ದಾರೆ. ಚಿತ್ರದಲ್ಲಿ ಚಿರು ಜೊತೆಗೆ ಹರಿಪ್ರಿಯಾ, ಕಾವ್ಯ ಶೆಟ್ಟಿ, ಚಿಕ್ಕಣ್ಣ, ಮುಂತಾದವರು ಅಭಿನಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next