ಮುಂಬೈ: ಎನ್‌ಸಿಬಿ ಮುಂಬೈನ ಮಾಜಿ ವಿಭಾಗೀಯ ಅಧಿಕಾರಿ ಸಮೀರ್ ವಾಂಖೆಡೆ ಅವರ ಮಾಲೀಕತ್ವದ ಹೋಟೆಲ್ ಮತ್ತು ಬಾರ್‌ನ ಪರವಾನಗಿಯನ್ನು ರದ್ದು ಮಾಡಿರುವುದಾಗಿ ಥಾಣೆಯ ಜಿಲ್ಲಾಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ನವಿ ಮುಂಬೈನಲ್ಲಿರುವ ಬಾರ್‌ಗೆ ಸುಳ್ಳು ಮಾಹಿತಿ ಕೊಟ್ಟು ಮೋಸದಿಂದ ಪರವಾನಗಿ ಪಡೆದಿರುವ ಹಿನ್ನೆಲೆ ಅದನ್ನು ರದ್ದುಗೊಳಿಸಿರುವುದಾಗಿ ಅವರು ತಿಳಿಸಿದ್ದಾರೆ.
ಮಹಾರಾಷ್ಟ್ರ ಸಚಿವರಾಗಿರುವ ನವಾಬ್ ಮಲಿಕ್ ಅವರು, ಸಮೀರ್ ವಾಂಖೆಡೆ ಅವರ ಬಾರ್ ಪರವಾನಗಿ ಬಗ್ಗೆ ಕಳೆದ ನವೆಂಬರ್‌ನಲ್ಲಿ ಪ್ರಶ್ನೆ ಎತ್ತಿದ್ದರು. ಸಮೀರ್ 1997ರಲ್ಲಿ ಅಂದರೆ ತಮಗೆ 18 ವರ್ಷ ತುಂಬುವುದರೊಳಗೇ ಪರವಾನಗಿ ಪಡೆದಿದ್ದಾರೆ.
ಇದು ಕಾನೂನುಬಾಹಿರ. ಅದರ ಜತೆ ಸರ್ಕಾರಿ ಅಧಿಕಾರಿಗಳಿಗೆ ಅನುಮತಿ ಇಲ್ಲದ ಪರ್ಮಿಟ್ ರೂಂ ಅನ್ನು ಅವರು ನಡೆಸುತ್ತಿದ್ದಾರೆ ಎಂದು ಅವರು ದೂರಿದ್ದರು.
ಇದನ್ನೂ ಓದಿ:1008 ಕಿ. ಮೀ. ರಾಜ್ಯ ಹೆದ್ದಾರಿ ಮರು ಡಾಂಬರೀಕರಣ: ಡಿಪಿಆರ್ ಸಿದ್ಧ ಪಡಿಸಲು ಸಿಎಂ ಸೂಚನೆ
ಅದರ ಬಗ್ಗೆ ಪರಿಶೀಲನೆ ನಡೆಸಲಾಗಿದ್ದು, ಸಮೀರ 18 ವರ್ಷ ತುಂಬುವುದರೊಳಗೆ ಪರವಾನಗಿ ಪಡೆದಿರುವುದು ಖಚಿತವಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.