Advertisement
ಇದು ಸಮೀರ್ ಬ್ಯಾನರ್ಜಿ ಆಡುತ್ತಿರುವ ಕೇವಲ ದ್ವಿತೀಯ ಗ್ರ್ಯಾನ್‌ಸ್ಲಾಮ್. ಮೊದಲ ಸಲ ಫ್ರೆಂಚ್ ಓಪನ್ ಜೂನಿಯರ್ ವಿಭಾಗದಲ್ಲಿ ಆಡಲಿಳಿದಿದ್ದ ಬ್ಯಾನರ್ಜಿ, ಮೊದಲ ಸುತ್ತಿನಲ್ಲೇ ಸೋತು ನಿರ್ಗಮಿಸಿದ್ದರು. 2009ರಲ್ಲಿ ಯುಕಿ ಭಾಂಬ್ರಿ ಆಸ್ಟ್ರೇ ಲಿಯನ್ ಓಪನ್ ಸಿಂಗಲ್ಸ್, 2015ರಲ್ಲಿ ಸುಮಿತ್ ನಾಗಲ್-ಲಿ ಹಾಂಗ್ ನಾಮ್ (ವಿಯೆಟ್ನಾಮ್) ವಿಂಬಲ್ಡನ್ ಬಾಲಕರ ಡಬಲ್ಸ್ ಪ್ರಶಸ್ತಿ ಜಯಿಸಿದ್ದರು.
Related Articles
ವಿಂಬಲ್ಡನ್ ಪುರುಷರ ಡಬಲ್ಸ್ ಪ್ರಶಸ್ತಿ ಕ್ರೊವೇಶಿಯನ್ ಜೋಡಿಗೆ ಒಲಿದಿದೆ. ನಿಕೋಲ ಮೆಕ್ಟಿಕ್-ಮೇಟ್ ಪಾವಿಕ್ ಚಾಂಪಿಯನ್ ಆಗಿದ್ದಾರೆ. ವಿಶ್ವದ ಈ ನಂ.1 ಟೆನಿಸ್ ಜೋಡಿ ಮಾರ್ಸೆಲ್ ಗ್ರಾನೋಲ್ಲರ್ (ಸ್ಪೇನ್)-ಹೊರಾಸಿಯೊ ಝೆಬಲ್ಲೋಸ್ (ಆರ್ಜೆಂಟೀನಾ) ವಿರುದ್ಧ 6-4, 7-6 (7-5), 2-6, 7-5 ಅಂತರದ ಜಯ ಸಾಧಿಸಿತು.
Advertisement
ಇದನ್ನೂ ಓದಿ : ಮಠಾಧೀಶರ ಆಶೀರ್ವಾದ ಪಡೆದ ಸಿಐಡಿ ಎಸ್ಪಿ ಚನ್ನಣ್ಣವರ್
ಇದರೊಂದಿಗೆ ಕ್ರೊವೇಶಿಯನ್ ಜೋಡಿಯೊಂದು ಮೊದಲ ಸಲ ಗ್ರ್ಯಾನ್‌ಸ್ಲಾಮ್ ಡಬಲ್ಸ್ ಟ್ರೋಫಿಯನ್ನೆತ್ತಿದ ಹೆಗ್ಗಳಿಕೆಗೆ ಪಾತ್ರವಾಯಿತು. ಹಾಗೆಯೇ 20 ವರ್ಷದ ಬಳಿಕ ಕ್ರೊವೇಶಿಯಕ್ಕೆ ವಿಂಬಲ್ಡನ್ ಪ್ರಶಸ್ತಿಯನ್ನು ತಂದಿತ್ತ ಹಿರಿಮೆಯೂ ಇವರದಾಯಿತು. ಅಂದು ಗೊರಾನ್ ಇವಾನಿಸೆವಿಚ್ ಪುರುಷರ ಸಿಂಗಲ್ಸ್ ಚಾಂಪಿಯನ್ ಆಗಿದ್ದರು.
ವನಿತಾ ಡಬಲ್ಸ್ವನಿತಾ ಡಬಲ್ಸ್‌ನಲ್ಲಿ ತೈವಾನ್‌ನ ಶೀ ಸು ವೀ ಮತ್ತು ಬೆಲ್ಜಿಯಂನ ಎಲಿಸ್ ಮೆರ್ಟೆನ್ಸ್ ಟ್ರೋಫಿ ಎತ್ತಿದ್ದಾರೆ. ಇವರು ರಶ್ಯದ ಎಲೆನಾ ವೆಸ್ನಿನಾ-ವೆರೋನಿಕಾ ಕುಡೆರ್ಮೆ ಟೋವಾ ಜೋಡಿಯನ್ನು 3-6, 7-5, 9-7 ಅಂತರದಿಂದ ಮಣಿಸಿದರು.