Advertisement

ಶೇಣಿ ಸಂಸ್ಮರಣೆ, ಸಮ್ಮಾನ, ಯಕ್ಷಗಾನ ಬಯಲಾಟ

08:05 AM Jul 31, 2017 | Harsha Rao |

ನಗರ:ಶೇಣಿ ಶತಮಾನೋತ್ಸವ 24 ನೇ ಸಮಾರಂಭದ ಶೇಣಿ ಸಂಸ್ಮರಣೆ, ಸಮ್ಮಾನ, ಯಕ್ಷಗಾನ ಬಯಲಾಟ ಕಾರ್ಯಕ್ರಮದಲ್ಲಿ ಹಿರಿಯ ಯಕ್ಷಗಾನ ಚೆಂಡೆ ಮದ್ದಳೆ ವಾದಕ ಪದ್ಯಾಣ ಶಂಕರನಾರಾಯಣ ಭಟ್‌ ಅವರನ್ನು ಸಮ್ಮಾನಿಸಲಾಯಿತು.

Advertisement

ಶೇಣಿ ಗೋಪಾಲಕೃಷ್ಣ ಭಟ್‌ ಚಾರಿ ಟೇಬಲ್‌ ಟ್ರಸ್ಟ್‌ ಆಶ್ರಯದಲ್ಲಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾ ಲಯದ ನಟರಾಜ ವೇದಿಕೆಯಲ್ಲಿ  ನಡೆಯಿತು.

ವಿಶ್ರಾಂತ ಪ್ರಾಧ್ಯಾಪಕ ವಿ.ಬಿ. ಅರ್ತಿಕಜೆ ಶೇಣಿ ಸಂಸ್ಮರಣೆಗೈದು, ಯಕ್ಷಗಾನ ಕ್ಷೇತ್ರ ದಲ್ಲಿ ತಾರಾ ಮೌಲ್ಯ ತಂದುಕೊಟ್ಟ ಯುಗ ಪ್ರವರ್ತಕರಾಗಿದ್ದ ಶೇಣಿ ಗೋಪಾಲಕೃಷ್ಣ ಭಟ್‌ ಪಾತ್ರ ಪೋಷಣೆ ಮಾಡಿ ವಿಶ್ಲೇಷಣೆ ಮಾಡುವುದರಲ್ಲಿ ನಿಷ್ಣಾತರು ಎಂದು ವಿಶ್ಲೇಷಿಸಿದರು. 

ಅವರ ವಾಕ್‌ಚಾತುರ್ಯ, ಕಲೆಯ ಬಗೆ ಗಿನ ಬದ್ಧತೆ, ಯಕ್ಷಗಾನವನ್ನು ನಿಯಮದ ಶೈಲಿಯಲ್ಲಿ ಅಭಿವ್ಯಕ್ತಪಡಿಸುತ್ತಿದ್ದ ಶೇಣಿ ಓರ್ವ ಮಹಾನ್‌ ಕಲಾವಿದ ಎಂದು ಅವರು ಹೇಳಿದರು.

ಸಮ್ಮಾನಿತ  ಪದ್ಯಾಣ ಶಂಕರ ನಾರಾ ಯಣ ಭಟ್‌ ಅವರ ಬಗ್ಗೆ ಹಿರಿಯ ಯಕ್ಷಗಾನ ಭಾಗವತರಾದ ಕುರಿಯ ಗಣಪತಿ ಶಾಸ್ತ್ರಿ ಅಭಿನಂದನ ಮಾತು ಗಳನ್ನಾಡಿ, ಶಿಸ್ತು ಬದ್ಧ ಜೀವನ ಶೈಲಿ, ಸ್ವಾಭಿಮಾನದ ವ್ಯಕ್ತಿಯಾಗಿ ಯಕ್ಷರಂಗ ಲೋಕದಲ್ಲಿ ಗುರುತಿಸಿಕೊಂಡಿದ್ದ ಪದ್ಯಾಣ ಶಂಕರನಾರಾಯಣ ಭಟ್‌ ಅವರಿಗೆ ಅರ್ಹವಾಗಿಯೇ ಶೇಣಿ ಶತಮಾನೋ ತ್ಸವದ ಸಮ್ಮಾನ ಸಂದಿದೆ ಎಂದರು.

Advertisement

ಪದ್ಯಾಣ, ಮಾಂಬಾಡಿ ಮನೆತನ ಹಿಮ್ಮೇಳಕ್ಕೆ, ಕುರಿಯ ಮನೆತನ  ಮುಮ್ಮೇ ಳಕ್ಕೆ  ಪರಿಚಿತಗೊಂಡಿದ್ದನ್ನು ಸ್ಮರಿಸಿದ ಅವರು, ಶ್ರಮದ ಜತೆಗೆ ರಕ್ತಗತ ವಾಗಿಯು ಕಲೆಯ ಸ್ಪರ್ಶ ಇದ್ದಲ್ಲಿ ಅದು ಬೆಳಗುತ್ತದೆ ಎನ್ನುವುದಕ್ಕೆ ಪದ್ಯಾಣರು ಉದಾಹರಣೆ ಎಂದು ತಿಳಿಸಿದರು. 

ಸಮ್ಮಾನ ಸ್ವೀಕರಿಸಿದ ಪದ್ಯಾಣ ಶಂಕರ ನಾರಾಯಣ ಭಟ್‌ ಮಾತನಾಡಿ, ಶೇಣಿ ಅವರ ಜತೆಗಿನ ಒಡನಾಟವನ್ನು ಸ್ಮರಿಸಿಕೊಂಡರು, ಕೃತಜ್ಞತೆ ಅರ್ಪಿಸಿದರು.

ಕೆ. ವೆಂಕಟರಮಣ ಶಾಸ್ತ್ರೀ, ವನಜಾಕ್ಷಮ್ಮ ಉಪಸ್ಥಿತರಿದ್ದರು. ಶೇಣಿ ಗೋಪಾಲಕೃಷ್ಣ ಭಟ್‌ ಚಾರಿ ಟೇ ಬಲ್‌ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಸಾಮೆತ್ತಡ್ಕ ಗೋಪಾಲಕೃಷ್ಣ ಭಟ್‌ ಸ್ವಾಗತಿಸಿ, ಪುತ್ತೂರು ಯಕ್ಷರಂಗ ಅಧ್ಯಕ್ಷ ಸೀತಾರಾಮ ಶಾಸ್ತ್ರಿ ಅವರು ವಂದಿಸಿ, ದಿವಾಕರ ಆಚಾರ್ಯ ಗೇರುಕಟ್ಟೆ ಮತ್ತು ಭಾಸ್ಕರ ಬಾರ್ಯ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next