Advertisement
ಸಂಭಾಲ್ ಎಸ್ಡಿಎಂ ವಂದನಾ ಮಿಶ್ರಾ ಅವರ ಪ್ರಕಾರ, ಸಾರ್ವಜನಿಕ ಪ್ರದೇಶಗಳಲ್ಲಿನ ಅತಿಕ್ರಮಣ ಕಟ್ಟಡಗಳನ್ನು ತೆರವುಗೊಳಿಸುವ ಉದ್ದೇಶದಿಂದ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದ್ದು, ಇದನ್ನು ಕಳೆದ ಎರಡು ತಿಂಗಳಿನಿಂದ ಚಂದೌಲಿಯಲ್ಲಿ ಸಕ್ರಿಯವಾಗಿ ಕಾರ್ಯಗತಗೊಳಿಸಲಾಗಿದೆ ಎಂದು ಹೇಳಿದ್ದಾರೆ.
Related Articles
Advertisement
ಪುನಃ ತೆರೆಯಲಾದ ದೇವಾಲಯದಲ್ಲಿ ಆರತಿಸಂಭಾಲ್ನಲ್ಲಿ ಇತ್ತೀಚೆಗೆ ಪುನಃ ತೆರೆಯಲಾದ ಶಿವ ಮತ್ತು ಹನುಮಾನ್ ದೇವಾಲಯದಲ್ಲಿ ರವಿವಾರ ಬೆಳಗ್ಗೆ ಆರತಿಯನ್ನು ಮಾಡಲಾಯಿತು. ಸಂಭಾಲ್ ಜಿಲ್ಲೆಯಲ್ಲಿ ದಶಕಗಳ ನಂತರ ತೆರೆಯಲಾದ ಶಿವ ಮತ್ತು ಹನುಮಾನ್ ದೇವಾಲಯದ ಹೊರಗೆ ಪೊಲೀಸ್ ಸಿಬಂದಿ ನಿಯೋಜಿಸಲಾಗಿದೆ. ಈ ಪ್ರದೇಶದಲ್ಲಿ ವಿದ್ಯುತ್ ಕಳ್ಳತನದ ವಿಷಯಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತವು ಶನಿವಾರ ನಡೆಸುತ್ತಿರುವ ತಪಾಸಣೆಯಲ್ಲಿ ದೇವಾಲಯವನ್ನು ಪತ್ತೆ ಮಾಡಿದ ನಂತರ ಇದು ನಡೆದಿದೆ. 1978 ರ ನಂತರ ಸುಮಾರು 400 ವರ್ಷಗಳಷ್ಟು ಹಳೆಯದಾದ ದೇವಾಲಯವನ್ನು ಪುನಃ ತೆರೆಯಲಾಗಿದೆ ಎಂದು ನಗರ ಹಿಂದೂ ಸಭಾದ ಧರ್ಮದರ್ಶಿ ವಿಷ್ಣು ಶರಣ್ ರಸ್ತೋಗಿ ಹೇಳಿದ್ದಾರೆ. ದೇವಸ್ಥಾನದ ಆವರಣವನ್ನು ಸ್ವಚ್ಛಗೊಳಿಸಿ ವಿದ್ಯುತ್ ವ್ಯವಸ್ಥೆ ಮಾಡಲಾಗಿದೆ. ಭದ್ರತಾ ದೃಷ್ಟಿಯಿಂದ ಸಿಸಿಟಿವಿ ಕೆಮರಾಗಳನ್ನು ಅಳವಡಿಸಲಾಗಿದೆ.