Advertisement
ಪಲ್ಯಬೇಕಾಗುವ ಸಾಮಗ್ರಿ: ಸೊಪ್ಪು- ಎರಡು ಹಿಡಿ, ಹಸಿಮೆಣಸು- 2, ತೆಂಗಿನಕಾಯಿ ತುರಿ- 1/4 ಬಟ್ಟಲು, ಅರಸಿನಪುಡಿ- ಸ್ವಲ್ಪ , ಕರಿಬೇವು ಸ್ವಲ್ಪ, ಒಣಮೆಣಸು-1, ಉದ್ದಿನಬೇಳೆ- ಎರಡು ಚಮಚ, ಸಾಸಿವೆ- 1 ಚಮಚ, ಉಪ್ಪು ರುಚಿಗೆ, ಬೆಲ್ಲ ಸ್ವಲ್ಪ (ಬೇಕಿದ್ದರೆ).
ಬೇಕಾಗುವ ಸಾಮಗ್ರಿ: ಸೊಪ್ಪು 2-3 ಚಮಚ, ಹಸಿಮೆಣಸು-3, ತೆಂಗಿನತುರಿ-1/2 ಬಟ್ಟಲು, ಹುಣಸೆಹಣ್ಣು ಅಥವಾ ತುಂಬಾ ಹುಳಿಯಿರದ ಮಜ್ಜಿಗೆ- 1 ಬಟ್ಟಲು, ಜೀರಿಗೆ- 1 ಚಮಚ, ಕರಿಬೇವು ಸ್ವಲ್ಪ, ಉಪ್ಪು ರುಚಿಗೆ, ಎಣ್ಣೆ ಮತುತ ಒಗ್ಗರಣೆಗೆ ಸಾಮಾನು.
Related Articles
Advertisement
ಚಪಾತಿಯ ಕರಿಬೇಕಾಗುವ ಸಾಮಗ್ರಿ: ಸೊಪ್ಪು- 2 ಹಿಡಿ, ಹಸಿಮೆಣಸು-2, ಚಕ್ಕೆಲವಂಗ ಸ್ವಲ್ಪ, ಒಗ್ಗರಣೆಗೆ: ಸಾಸಿವೆ, ಒಣಮೆಣಸು, ಎಣ್ಣೆ , ಉಪ್ಪು ರುಚಿಗೆ, ಕರಿಬೇವು ಸ್ವಲ್ಪ, ತೆಂಗಿನ ತುರಿ-1/2 ಬಟ್ಟಲು. ತಯಾರಿಸುವ ವಿಧಾನ: ಸೊಪ್ಪನ್ನು ಕತ್ತರಿಸಿ ಬೇಯಿಸಿ. ಚಕ್ಕೆ-ಲವಂಗ-ಹಸಿಮೆಣಸನ್ನು ತೆಂಗಿನತುರಿಯೊಂದಿಗೆ ರುಬ್ಬಿಕೊಳ್ಳಿ. ರುಬ್ಬುವಾಗ ಸ್ವಲ್ಪ ಹುಳಿ ಮಜ್ಜಿಗೆಯನ್ನು ಸೇರಿಸಿ. ನಂತರ ಬೆಂದ ಸೊಪ್ಪಿಗೆ ಎಲ್ಲವನ್ನೂ ಹಾಕಿ, ಉಪ್ಪನ್ನೂ ಹಾಕಿ. ಗ್ರೇವಿಯಂತಿರಬೇಕು. ಕರಿಬೇವಿನೊಂದಿಗೆ ತುಪ್ಪದಲ್ಲಿ ಒಗ್ಗರಣೆ ಕೊಡಿ. ಚಪಾತಿ, ರೊಟ್ಟಿಗೆ ರುಚಿಕಟ್ಟಾದ ಕರಿ. ದೋಸೆ
ಬೇಕಾಗುವ ಸಾಮಗ್ರಿ: ಸೊಪ್ಪು- 2ರಿಂದ 3 ಹಿಡಿ, ಬೆಳ್ತಿಗೆ ಅಕ್ಕಿ- 1 ಬಟ್ಟಲು, ಒಣಮೆಣಸು 4-5, ಧನಿಯಾ-2 ಚಮಚ, ಮೆಂತ್ಯ-1 ಚಮಚ, ಜೀರಿಗೆ- 1 ಚಮಚ, ಉದ್ದಿನಬೇಳೆ, ಕಡಲೆಬೇಳೆ- 2 ಚಮಚ, ಹುಣಸೆಹಣ್ಣು- ನಿಂಬೆಗಾತ್ರ, ಉಪ್ಪು ರುಚಿಗೆ, ಬೆಲ್ಲ ಸಣ್ಣ ತುಂಡು, ಅರಸಿನ ಪುಡಿ ಚಿಟಿಕೆ, ತೆಂಗಿನತುರಿ- 1/2 ಬಟ್ಟಲು. ತಯಾರಿಸುವ ವಿಧಾನ: ಅಕ್ಕಿಯನ್ನು 2 ಗಂಟೆ ನೆನೆಸಿಡಿ. ನಂತರ ಜಾರಿಗೆ ಹಾಕಿ ಒಣಮೆಣಸು, ಧನಿಯಾ, ಮೆಂತ್ಯ, ಜೀರಿಗೆ, ಉದ್ದು, ಕಡಲೆಬೇಳೆ, ಹುಣಸೆಹಣ್ಣು , ಉಪ್ಪು , ಬೆಲ್ಲ , ತೆಂಗಿನ ತುರಿ, ಅರಸಿನ ಪುಡಿಯೊಂದಿಗೆ ಸಣ್ಣಗೆ ರುಬ್ಬಿಟ್ಟುಕೊಳ್ಳಿ. ನಂತರ ಅದಕ್ಕೆ ತೊಳೆದು ಕತ್ತರಿಸಿದ ಸೊಪ್ಪನ್ನು ಸೇರಿಸಿ ದೋಸೆಹಿಟ್ಟಿನ ಹದಕ್ಕೆ ತಯಾರಿಸಿಕೊಳ್ಳಿ. ರುಬ್ಬಿಟ್ಟ ದಿನವೇ ದೋಸೆ ಮಾಡಬಹುದು. ಮರುದಿವಸ ಮಾಡಬೇಕಾದರೆ ಹುಣಸೆಹಣ್ಣನ್ನು ಹಾಕಬಾರದು. ಗಟ್ಟಿ
ಮೇಲೆ ಹೇಳಿದ ಮಿಶ್ರಣವನ್ನು ಸ್ವಲ್ಪ ಗಟ್ಟಿಯಾಗಿ ಕಲಸಿಕೊಂಡು ಉಂಡೆಗಳಂತೆ ಮಾಡಿ ಇಡ್ಲಿ ಪಾತ್ರೆಯಲ್ಲಿ 20 ನಿಮಿಷ ಬೇಯಿಸಿದರೆ ಗಟ್ಟಿ ತಯಾರಾಗುತ್ತದೆ. ನಂತರ ಅದನ್ನು ಪುಡಿಪುಡಿ ಮಾಡಿ ಒಗ್ಗರಣೆ ಹಾಕಿ ತೆಂಗಿನಕಾಯಿ ತುರಿಯನ್ನು ಸೇರಿಸಿದರೆ ತಿಂಡಿಯಂತೆಯೂ ತಿನ್ನಬಹುದು. ಪುಷ್ಪಾ ಎನ್.ಕೆ. ರಾವ್