Advertisement

Tollywood: ʼಪುಷ್ಪ-2ʼ ನಲ್ಲೂ ಸೊಂಟ ಬಳುಕಿಸುತ್ತಾರಾ ನಟಿ ಸಮಂತಾ? ಇಲ್ಲಿದೆ ನೋಡಿ ವಿವರ

02:56 PM Mar 25, 2024 | Team Udayavani |

ಹೈದರಾಬಾದ್: ಮುಂಬರುವ ಪ್ಯಾನ್‌ ಇಂಡಿಯಾ ಸಿನಿಮಾಗಳ ಪೈಕಿ ʼಪುಷ್ಪ-2ʼ ಬಹು ನಿರೀಕ್ಷಿತ ಸಿನಿಮಾವೆಂದರೆ ತಪ್ಪಾಗದು. ಸಿನಿಮಾ ಚಿತ್ರೀಕರಣ ಹಂತದಲ್ಲಿದ್ದು, ಈ ವೇಳೆಯೇ ನಾನಾ ಕಾರಣಕ್ಕೆ ಸದ್ದು ಮಾಡುತ್ತಿದೆ.

Advertisement

‘ಪುಷ್ಪʼ ಸಿನಿಮಾದಲ್ಲಿ ಅಲ್ಲು ಅರ್ಜುನ್‌ ನಟನೆ, ಆ್ಯಕ್ಷನ್‌ ಸೀನ್‌ ಗಳು ಗಮನ ಸೆಳಯುವುದರ ಜೊತೆಗೆ ನಟಿ ಸಮಂತಾ ಅವರು ʼ ಊ ಅಂಟವಾʼ ಹಾಡಿಗೆ ಸೊಂಟ ಬಳುಕಿಸಿದ್ದು ಕೂಡ ಅಷ್ಟೇ ದೊಡ್ಡಮಟ್ಟದಲ್ಲಿ ಸದ್ದು ಮಾಡಿತ್ತು. ಸಮಂತಾ ಅವರ ಹಾಟ್‌ ಡ್ಯಾನ್ಸ್‌ ಪಡ್ಡೆ ಹುಡುಗರ ನಿದ್ದೆಗೆಡಿಸಿತ್ತು.

ʼಪುಷ್ಪ-2ʼ ಸಿನಿಮಾದಲ್ಲಿ ಸಮಂತಾ ಅವರು ಕಾಣಸಿಕೊಳ್ಳುತ್ತಾರೆ ಎನ್ನಲಾಗಿದೆ. ನಿರ್ದೇಶಕ ಸುಕುಮಾರ್ ಅವರು ʼಪುಷ್ಪʼ ಸೀಕ್ವೆಲ್ ನಲ್ಲಿ ಸಮಂತಾ ರುತ್ ಪ್ರಭು ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕೆಂದು ಬಯಸಿದ್ದಾರೆ ಎಂದು ʼತೆಲುಗು123ʼ ವರದಿ ತಿಳಿಸಿದೆ.

ಇದನ್ನೂ ಓದಿ: ಅಕ್ರಮವಾಗಿ ಮಗು ದತ್ತು ಪಡೆದ ಪ್ರಕರಣ: ರೀಲ್ಸ್‌ಸ್ಟಾರ್‌ ಸೋನು ಗೌಡಗೆ 14 ದಿನ ನ್ಯಾಯಾಂಗ ಬಂಧನ 

ʼಪುಷ್ಪ 2: ದಿ ರೂಲ್‌ʼನ ಕೊನೆಯಲ್ಲಿ ಸಮಂತ್ ಒಂದು ಸಣ್ಣ ಹಾಡನ್ನು ಮಾಡಲು ಸುಕುಮಾರ್ ಬಯಸಿದ್ದಾರೆ. ಆಕೆಯ ಪಾತ್ರ ಚಿತ್ರದ ಮೂರನೇ ಭಾಗಕ್ಕೆ ವಿಸ್ತರಿಸಬಹುದು ಎಂದು ವರದಿ ತಿಳಿಸಿದೆ.

Advertisement

ಇತ್ತೀಚೆಗೆ ನಟಿ ಸಮಂತಾ ಅವರು, ʼಊ ಅಂಟವಾʼ ಹಾಡಿಗೆ ಹೆಜ್ಜೆ ಹಾಕುವ ವೇಳೆ ನಾನು ನಡಗುತ್ತಿದ್ದೆ. ನಾನು ಅನಾರೋಗ್ಯವಾಗಿರುವೆʼ ಆ ಡ್ಯಾನ್ಸ್‌ ಒಪ್ಪಿಕೊಂಡು ತುಂಬಾ ಕಷ್ಟಪಟ್ಟೆ. ಶೂಟಿಂಗ್‌ ಸಮಯದಲ್ಲಿ ಇದು ನನಗೆ ಹೇಳಿ ಮಾಡಿಸಿದ್ದಲ್ಲ ಎಂದನಿಸಿತು. ಇನ್ನು ಮುಂದೆ ನಾನು ಐಟಂ ಸಾಂಗ್​ಗಳಿಗೆ ಡ್ಯಾನ್ಸ್​ ಮಾಡುವುದಿಲ್ಲ ಎಂದು ಘೋಷಿಸಿದ್ದರು.

ಇನ್ನು ʼಪುಷ್ಪ-2ʼ ಸಿನಿಮಾ ಇದೇ ವರ್ಷದ ಆಗಸ್ಟ್‌ 15 ರಂದು ಅದ್ಧೂರಿಯಾಗಿ ತೆರೆ ಕಾಣಲಿದೆ.

Advertisement

Udayavani is now on Telegram. Click here to join our channel and stay updated with the latest news.

Next