Advertisement

ಜಿಲ್ಲಾಧಿಕಾರಿ ಜನಸಂಪರ್ಕ ಕಾರ್ಯಕ್ರಮ: 962 ಅರ್ಜಿ ಪರಿಶೀಲನೆ

02:20 PM Mar 14, 2017 | Team Udayavani |

ಕಾಸರಗೋಡು: ಜಿಲ್ಲಾಧಿಕಾರಿ ಕೆ. ಜೀವನ್‌ ಬಾಬು ನೇತೃತ್ವದಲ್ಲಿ ಸಮಕ್ಷಂ – 2017 ಯೋಜನೆ ದ್ವಿತೀಯ ಹಂತದ ಜನಸಂಪರ್ಕ ಕಾರ್ಯಕ್ರಮ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜರಗಿತು.

Advertisement

ಕಾಸರಗೋಡು ಮತ್ತು ಮಂಜೇಶ್ವರ ತಾಲೂಕುಗಳಿಂದ ಲಭಿಸಿದ ದೂರುಗಳನ್ನು ಜನಸಂಪರ್ಕ ಕಾರ್ಯಕ್ರಮದಲ್ಲಿ ಪರಿಶೀಲಿಸಿ ಅವುಗಳಿಗೆ ಪರಿಹಾರ ಕಂಡುಕೊಳ್ಳುವ ಕುರಿತು ಕ್ರಮ ತೆಗೆದು ಕೊಳ್ಳಲಾಯಿತು. 

ಜನಸಂಪರ್ಕ ಕಾರ್ಯಕ್ರಮಕ್ಕೆ ಆನ್‌ಲೈನ್‌ ಮೂಲಕ ದೂರು ಸಲ್ಲಿಸುವ ಸೌಕರ್ಯ ಏರ್ಪಡಿಸಲಾಗಿತ್ತು. ಅದರಂತೆ ಕಾಸರಗೋಡು ತಾಲೂಕಿನಲ್ಲಿ 638 ಮತ್ತು ಮಂಜೇಶ್ವರ ತಾಲೂಕಿನಲ್ಲಿ 324 ದೂರುಗಳ ಸಹಿತ ಒಟ್ಟು 962 ದೂರುಗಳು ಜಿಲ್ಲಾಧಿಕಾರಿಯವರಿಗೆ ಲಭಿಸಿದವು. ಅದರಲ್ಲಿ ಹೆಚ್ಚಿನವು ಭೂ ದಾಖಲು ಪತ್ರ ಲಭಿಸುವಂತೆ ಮಾಡುವ ಮತ್ತು ಮುಖ್ಯಮಂತ್ರಿ ಅವರ ಪರಿಹಾರ ನಿಧಿಯಿಂದ ಆರ್ಥಿಕ ನೆರವು ಕೇಳುವ ಅರ್ಜಿಗಳಾಗಿವೆ. 

ಅವುಗಳಿಗೆಲ್ಲ ಪರಿಹಾರ ಕಂಡುಕೊಳ್ಳಲು ಅರ್ಜಿಗಳನ್ನು ಪರಿಶೀಲಿಸಲಾಯಿತು. ಆನ್‌ಲೈನ್‌ ನಲ್ಲಿ ದೂರು ಸಲ್ಲಿಸಲು ಸಾಧ್ಯವಾಗದವರಿಂದ ಕಾರ್ಯಕ್ರಮದಲ್ಲಿ ನೇರವಾಗಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ಕಾರ್ಯಕ್ರಮದಲ್ಲಿ ಸಲ್ಲಿಸಿದ ಅರ್ಜಿಗಳನ್ನು ಪರಿಶೀಲಿಸಿ ಮುಂದೆ ಕ್ರಮ ಕೈಗೊಳ್ಳಲು ನಿರ್ಧರಿಸಲಾಯಿತು. ಕರೆನ್ಸಿ ರಹಿತ ವ್ಯವಹಾರ ನಡೆಸುವ ಬಗ್ಗೆ ಜನರಿಗೆ ಮಾಹಿತಿ ನೀಡಲು 12 ವಿಶೇಷ ಕೌಂಟರ್‌ ಸಜ್ಜುಗೊಳಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next