Advertisement

ವಾರಾಣಸಿಯ ಎಸ್‌ಪಿ ಪ್ರಭಾವಿ ನಾಯಕ ಶತರುದ್ರ ಪ್ರಕಾಶ್ ಬಿಜೆಪಿ ಸೇರ್ಪಡೆ

11:51 AM Dec 31, 2021 | Team Udayavani |

ಲಕ್ನೋ: ಸಮಾಜವಾದಿ ಪಕ್ಷಕ್ಕೆ ಹಿನ್ನಡೆ ಎಂಬಂತೆ, ಎಂಎಲ್‌ಸಿ, ಉತ್ತರ ಪ್ರದೇಶದ ಮಾಜಿ ಸಚಿವ ಶತರುದ್ರ ಪ್ರಕಾಶ್ ಶುಕ್ರವಾರ ಬಿಜೆಪಿಯ ರಾಜ್ಯ ಪ್ರಧಾನ ಕಚೇರಿಯಲ್ಲಿ ಕೇಸರಿ ಪಾಳಯವನ್ನು ಸೇರ್ಪಡೆಗೊಂಡಿದ್ದಾರೆ.

Advertisement

ವಿದ್ಯಾರ್ಥಿ ದಿನಗಳಿಂದಲೂ ಸಮಾಜವಾದಿಯಾಗಿದ್ದ ಪ್ರಕಾಶ್ ಅವರು ಪಕ್ಷದ ರಾಜ್ಯ ಘಟಕದ ಮುಖ್ಯಸ್ಥ ಸ್ವತಂತ್ರ ದೇವ್ ಸಿಂಗ್ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು.

ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದಲ್ಲಿ ಓದುತ್ತಿರುವಾಗ ರಾಜಕೀಯಕ್ಕೆ ಸೇರಿದ ಪ್ರಕಾಶ್, 1974 ರಲ್ಲಿ ವಾರಾಣಸಿ ಕಂಟೋನ್ಮೆಂಟ್‌ನಿಂದ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಮೊದಲ ಬಾರಿಗೆ ವಿಧಾನಸಭೆಯ ಸದಸ್ಯರಾಗಿ ಆಯ್ಕೆಯಾದರು. ಮೂರು ವರ್ಷಗಳ ನಂತರ ಮತ್ತೆ ಅದೇ ಕ್ಷೇತ್ರದಿಂದ ಜನತಾ ಪಕ್ಷದ ಅಭ್ಯರ್ಥಿಯಾಗಿ ಆಯ್ಕೆಯಾದರು. 1985 ರಲ್ಲಿ ಲೋಕದಳ ಅಭ್ಯರ್ಥಿಯಾಗಿ ಮತ್ತು 1989 ರಲ್ಲಿ ಜನತಾ ದಳದ ಅಭ್ಯರ್ಥಿಯಾಗಿ ಪ್ರಕಾಶ್ ಅವರು ಚುನಾವಣೆಯಲ್ಲಿ ಗೆದ್ದಿದ್ದರು. ಮುಲಾಯಂ ಸಿಂಗ್ ಯಾದವ್ ನೇತೃತ್ವದ ಸರ್ಕಾರದಲ್ಲಿ ಕ್ಯಾಬಿನೆಟ್ ಸಚಿವರಾಗಿದ್ದರು.

ಕಾಶಿ ವಿಶ್ವನಾಥ ಕಾರಿಡಾರ್ ಉದ್ಘಾಟನೆ ಬಳಿಕ ಪ್ರಕಾಶ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಿದ್ದರು. ರಾಜ್ಯ ವಿಧಾನಮಂಡಲದ ಇತ್ತೀಚಿನ ಚಳಿಗಾಲದ ಅಧಿವೇಶನದಲ್ಲಿ, ವಿಶ್ವನಾಥ ಧಾಮ್ ದೇವಾಲಯದ ಸಂಕೀರ್ಣವನ್ನು ವಿಶಾಲವಾದ ಮತ್ತು ಸುಂದರವಾಗಿಸಿದ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ವಿಧಾನ ಪರಿಷತ್ತಿನಲ್ಲಿ ಅಭಿನಂದಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next