ಲಕ್ನೋ : ಉತ್ತರ ಪ್ರದೇಶ ಮುಖ್ಯಮಂತ್ರಿ ಅಖೀಲೇಶ್ ಯಾದವ್ ಹಾಗೂ ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್ ಅವರೀಗ ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಗೆ ಮುನ್ನ ಪಕ್ಷದ ಸೈಕಲ್ ಚಿನ್ನೆಗಾಗಿ ಹೋರಾಡಲಿದ್ದಾರೆ. ನಿನ್ನೆ ಭಾನುವಾರ ಅಖೀಲೇಶ್ ಅವರ ತಮ್ಮ ತಂದೆ ಮುಲಾಯಂ ಸಿಂಗ್ ಯಾದವ್ ಅವರನ್ನು ಪಕ್ಷಾಧ್ಯಕ್ಷನ ಹುದ್ದೆಯಿಂದ ಕಿತ್ತು ಹಾಕಿ ತಾನೇ ಪಕ್ಷದ ಅಧ್ಯಕ್ಷನೆಂದು ಪಟ್ಟಾಭಿಷೇಕ ಮಾಡಿಕೊಂಡಿದ್ದಾರೆ. ತಂದು ಮುಲಾಯಂ ಸಿಂಗ್ ಯಾದವ್ ಅವರನ್ನು ಪಕ್ಷದ ಸಂಸ್ಥಾಪಕನೆಂದು ಪರಿಗಣಿಸಿ ಬಹುತೇಕ ಅವರ ಪದಚ್ಯುತಿಗೆ ಮುನ್ನುಡಿ ಬರೆದಿದ್ದಾರೆ. ಅಖೀಲೇಶ್ ಅವರಿಂದು ಬೆಳಗ್ಗೆ 11 ಗಂಟೆಗೆ ಲಕ್ನೋದಲ್ಲಿ ತಮ್ಮ ಪಕ್ಷದ ಎಂಎಲ್‌ಎ ಹಾಗೂ ಎಂಎಲ್‌ಸಿಗಳ ಸಭೆಯನ್ನು ನಡೆಸಲಿದ್ದಾರೆ. ಈ ನಡುವೆ ಮುಲಾಯಂ ಅವರು ಸಮಾಜವಾದಿ ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಸಭೆಯನ್ನು ಜನವರಿ 5ಕ್ಕೆ ಮುಂದೂಡಿದ್ದಾರೆ. ಶಿವಪಾಲ್ ಯಾದವ್ ಅವರು ಪಕ್ಷದ ಕಾರ್ಯಕಾರಿಣಿ ಸಭೆಯನ್ನು ಮುಂದಕ್ಕೆ ಹಾಕಿರುವ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ. ಬಹುಷಃ ಮುಲಾಯಂ ಕರೆದಿರುವ ಸಭೆಗೆ ನಿರೀಕ್ಷಿತ ಸಂಖ್ಯೆಯಲ್ಲಿ ಶಾಸಕರು ಬರಲಾರರು ಎಂಬ ಭಯದಲ್ಲಿ ಸಭೆಯನ್ನು ಮುಂದೂಡಿರಬಹುದೆಂದು ಶಂಕಿಸಲಾಗಿದೆ.