Advertisement

ಗೇಲ್‌ ಜತೆ ಸ್ಯಾಮ್‌ ಕರನ್‌: ಅಂದು-ಇಂದು!

10:05 PM Apr 05, 2019 | mahesh |

ಚೆನ್ನೈ: ಬದುಕು ಬದಲಾಗುವುದಕ್ಕೆ ಬಹಳ ಕಾಲ ಬೇಕಿಲ್ಲ. ಅದರ ಸಣ್ಣ ಹೊಡೆತಗಳಿಗೆ ದೊಡ್ಡ ಬದಲಾವಣೆಗಳೇ ನಡೆದುಬಿಡಬಹುದು. ಕೆಲವು ವರ್ಷಗಳ ಹಿಂದೆ ಬಾಲಕನಂತೆ, ವೆಸ್ಟ್‌ ಇಂಡೀಸ್‌ನ ಕ್ರಿಕೆಟ್‌ ದಿಗ್ಗಜ ಕ್ರಿಸ್‌ ಗೇಲ್‌ ಜತೆ ಚಿತ್ರ ತೆಗೆಸಿಕೊಂಡಿದ್ದ ಇಂಗ್ಲೆಂಡ್‌ನ‌ ಆಲ್‌ರೌಂಡರ್‌ ಸ್ಯಾಮ್‌ ಕರನ್‌ ಈಗ ಯಾರೂ ಊಹಿಸದ ಸ್ಥಾನದಲ್ಲಿ ನಿಂತಿದ್ದಾರೆ.

Advertisement

ಬರೀ 20 ವರ್ಷದ ಸ್ಯಾಮ್‌ ಕರನ್‌ ಅವರೀಗ ಐಪಿಎಲ್‌ನ ಆಕರ್ಷಣೆ. ಎ. ಒಂದರಂದು ಡೆಲ್ಲಿ ವಿರುದ್ಧ ನಡೆದ ಪಂದ್ಯದಲ್ಲಿ ಪಂಜಾಬನ್ನು ಸೋಲಿನಿಂದ ಪಾರು ಮಾಡಿ ಗೆಲುವಿನ ಪೀಠದ ಮೇಲೆ ಕೂರಿಸಿದ ಸಾಹಸಿ. ಕೊನೆಯ ಹಂತದಲ್ಲಿ ಅವರು ಹ್ಯಾಟ್ರಿಕ್‌ ಸೇರಿ, 4 ವಿಕೆಟ್‌ ಗಳಿಸಿದ್ದರಿಂದ ಇನ್ನೇನು ಗೆದ್ದೇ ಬಿಟ್ಟಿತು ಎಂಬ ಸ್ಥಿತಿಯಲ್ಲಿದ್ದ ಡೆಲ್ಲಿ ಸೋತು ಹೋಯಿತು. ಕರನ್‌, ಐಪಿಎಲ್‌ನಲ್ಲಿ ಹ್ಯಾಟ್ರಿಕ್‌ ವಿಕೆಟ್‌ ಪಡೆದ ಅತಿ ಕಿರಿಯ ಕ್ರಿಕೆಟಿಗ. ಅಂದು ಬಾಲಕನಾಗಿದ್ದಾಗ ಗೇಲ್‌ ಜೊತೆಗೆ ಚಿತ್ರ ತೆಗೆಸಿಕೊಂಡಿದ್ದ ಅವರು, ಈಗ ಪಂಜಾಬ್‌ ತಂಡದಲ್ಲಿ ಗೇಲ್‌ ಸಂಗಡಿಗ. ಈಗಲೂ ಅವರು ಗೇಲ್‌ ಜತೆ ಚಿತ್ರ ತೆಗೆಸಿಕೊಂಡಿದ್ದಾರೆ. ಇದನ್ನು ಗೇಲ್‌ ಟ್ವೀಟ್‌ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next